ಸುದ್ದಿಒನ್, ಹೊಳಲ್ಕೆರೆ, ನವೆಂಬರ್. 07 :
ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಡೆದ ಕರಸೇವೆ ಸಂದರ್ಭದಲ್ಲಿ ಹುತಾತ್ಮರಾದ ಹಿಂದೂ ಬಂಧುಗಳ ಬಲಿದಾನವನ್ನು ಸ್ಮರಿಸುವ ಸಲುವಾಗಿ ಬಜರಂಗದಳದ ಕಾರ್ಯಕರ್ತರಾದ ಕೊಠಾರಿ ಸಹೋದರರ ಬಲಿದಾನದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರನಡೆಸಲಾಯಿತು.
ಸುಮಾರು 100ಕ್ಕೂ ಹೆಚ್ಚು ಜನ ಈ ಶಿಬಿರದಲ್ಲಿ ಭಾಗವಹಿಸಿದರು. 48 ಯೂನಿಟ್ ರಕ್ತದಾನ ಸಂಗ್ರಹಣೆ ಯಶಸ್ವಿಯಾಗಿ ನೆರವೇರಿತು. ಕರ ಸೇವೆಯಲ್ಲಿ ಭಾಗವಹಿಸಿದ ಎಲ್ಲಾ ಹಿಂದೂ ಬಂದುಗಳನ್ನು ನೆನಪಿಸಿ ಸೇವಾ ಕಾರ್ಯ ಮಾಡುತ್ತಿರುವ ಹೊಳಲ್ಕೆರೆ ತಾಲೂಕು ವಿಶ್ವ ಹಿಂದೂ ಪರಿಷದ್ ಬಜರಂಗದಳ ಪ್ರಖಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ
ವಿಶ್ವ ಹಿಂದೂ ಪರಿಷದ್ ಶಿವಮೊಗ್ಗ ವಿಭಾಗ ಕಾರ್ಯದರ್ಶಿಗಳಾದ ರಾಜೇಶ್ ಗೌಡ ಜೀ ಮುಂದಿನ ದಿನಗಳಲ್ಲಿ ಎಲ್ಲಾ ಘಟಕಗಳಲ್ಲಿ ಉತ್ತಮ ಸೇವಾಕಾರ್ಯಕ್ರಮಗಳನ್ನು ನಡೆಸುವಂತೆ ಸಲಹೆನೀಡಿದರು.
ಪ್ರಜಾಪಿತಾ ಭ್ರಮ್ಮ ಕುಮಾರಿ ಈಶ್ವರಿ ವಿದ್ಯಾಲಯದ ಮುಖ್ಯಸ್ಥರಾದ ಸುಮಿತ್ರಕ್ಕ, ದಾವಣಗೆರೆ ಜಿಲ್ಲಾ ಬಜರಂಗದಳ ಸಂಯೋಜಕರಾದ ರವಿಚಂದ್ರ ಜೀ, ರಾಷ್ಟ್ರ ಸೇವಿಕಾ ಸಮಿತಿ ತಾಲೂಕು ಕಾರ್ಯವಾಹಿಕ ಜ್ಯೋತಿ, ಸಹ ಕಾರ್ಯವಾಹಿಕ ಅನಿತಾ, ಜಿಲ್ಲಾ ಶಾರೀರಕ್ ಪ್ರಮುಖ್ ಸರಿತಾ, ರಾಷ್ಟೀಯ ಸ್ವಯಂ ಸೇವಕ ಸಂಘದ ತಾಲೂಕು ವ್ಯವಸ್ಥಾ ಪ್ರಮುಖ್ ಬಸವರಾಜ್ ಸಂಗನಗುಂಡಿ, ಹೊಬಳಿ ಪ್ರಮುಖ್ ಮಂಜುನಾಥ್ ವಿಶ್ವ ಹಿಂದೂ ಪರಿಷದ್ ಹೊಳಲ್ಕೆರೆ ತಾಲೂಕು ಅಧ್ಯಕ್ಷರಾದ ಧ್ರುವಕುಮಾರ್, ಕಾರ್ಯದರ್ಶಿ ವೆಂಕಟೇಶ್, ಉಪಾಧ್ಯಕ್ಷರಾದ ಶಿವಕುಮಾರ್, ಜಿಲ್ಲಾ ಸೇವಾ ಪ್ರಮುಖ್ ಅಣ್ಣಪ್ಪ, ತಾಲೂಕು ಸತ್ಸಂಗ ಪ್ರಮುಖ್ ವಿಕಾಸ್, ಭಜಪಾ ನಗರ ಘಟಕದ ಅಧ್ಯಕ್ಷ ವಿಜಯಕುಮಾರ್, ಮಾತೃಶಕ್ತಿ ಪ್ರಮುಖ್ ವಿನೋಧಾ, ಸಹ ಪ್ರಮುಕ್ ಅನಿತಾ, ದುರ್ಗಾವಾಹಿನಿ ಸಂಯೋಜಕಿ ದಿವ್ಯಾಮಣಿ ಇನ್ನೂ ಮುಂತಾದ ಮುಖಂಡರು, ಕಾರ್ಯಕರ್ತರು, ಸ್ವಯಂ ಸೇವಕರು ಉಪಸ್ಥಿತರಿದ್ದರು.













