Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ | ಲಿಟ್ಲ್ ಪ್ಲವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

---Advertisement---

ಸುದ್ದಿಒನ್, ಚಳ್ಳಕೆರೆ, ನವೆಂಬರ್. 07 : ನಾಡಿನ ವೈಭವ ಮತ್ತು ಕನ್ನಡ ಭಾಷೆಯ ಮೌಲ್ಯತೆಯನ್ನು ಸಾಹಿತ್ಯ ಓದುವ ಅಭಿರುಚಿಯಿಂದ ಮಾತ್ರ ತಿಳಿಯಲು ಸಾಧ್ಯ ಎಂದು‌ ಕವಿ,ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಹೇಳಿದರು.

ಚಳ್ಳಕೆರೆ ನಗರದ ಲಿಟ್ಲ್ ಪ್ಲವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೀಪ ಬೆಳಗಿ ಮಾತನಾಡಿದರು.

ಎಸ್.ನಿಜಲಿಂಗಪ್ಪ ಅವರ ನೇತೃತ್ವದಲ್ಲಿ ಆರಂಭಗೊಂಡ ಕರ್ನಾಟಕ ಏಕೀಕರಣ ಯಶಸ್ವಿಗೊಂಡು ಕನ್ನಡಿಗರು ಒಗ್ಗೂಡಿದ ಇತಿಹಾಸ ಇದೆ.‌ 1973 ರಲ್ಲಿ ನಾಮಕರಣವಾದ ಕರ್ನಾಟಕ ಎಂಬ ನಾಡಿಗೆ, ಸಾಹಿತ್ಯ ಮೇಧಾವಿಗಳಿಂದ ಎಂಟು ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೀರ್ತಿ ಇದೆ. ಪ್ರತಿಯೊಬ್ಬ ಕನ್ನಡಿಗರಲ್ಲಿ ಭಾಷಾಭಿಮಾನ ಇರಬೇಕು.‌ ಶಾಲೆಯ ಮೂಲ ಸೌಕರ್ಯ ಮತ್ತು ಶಿಕ್ಷಕರ ವಿಚಾರ ಸಂಪನ್ಮೂಲವನ್ನು ಉತ್ತಮ ಬದುಕು ರೂಪಿಸಿಕೊಳ್ಳಲು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕನ್ನಡ ಭಾಷಾ ಶಿಕ್ಷಕಿ ಕಾವ್ಯ ಮಾತನಾಡಿ, ಒಂಭತ್ತನೆಯ ಶತಮಾನದ ಕವಿರಾಜಮಾರ್ಗ ಕೃತಿಯಿಂದ ಕರುನಾಡಿನ ಸಂಸ್ಕೃತಿ, ಭಾಷೆಯ ಹಿರಿಮೆ ‌ಬೆಳೆದು ಬಂದಿದೆ. ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಗೆ, ಗಟ್ಟಿತನ ಇದೆ. ಕುವೆಂಪು ಅವರ ನಾಡಗೀತೆಯ ಆಶಯದಂತೆ ನಾಡಿನ ನೆಲ,ಜಲ,ಭಾಷೆಯ ಜಾಗೃತಿಗೆ ಸಂಘಟಿತರಾಗುವ ಭಾವನೆ ಬೆಳೆಸಿಕೊಳ್ಳಬೇಕು. ನಾನಾ ಭಾಷೆ ಕಲಿತರೂ ಮಾತೃಭಾಷೆಯನ್ನು ಹೃದಯದಲ್ಲಿ ಆರಾಧಿಸಬೇಕು ಎಂದು ಹೇಳಿದರು.

ವಿದ್ಯಾ ಸಂಸ್ಥೆ ಅಧ್ಯಕ್ಷ ಮಂಜುನಾಥ ರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ನಟರಾಜ್, ರಾಜೇಶ್ವರಿ, ಮುಖ್ಯ ಶಿಕ್ಷಕಿ ಪಿ. ಮಮತಾ, ಸಹ ಶಿಕ್ಷಕರಾದ ಕೆ.ತಿಪ್ಪೇಸ್ವಾಮಿ, ಜಿ.ಡಿ. ಮಂಜುನಾಥ, ಹನುಮಂತರಾಯ, ಮೋಹನ್, ತಿಪ್ಪೇಸ್ವಾಮಿ, ಸ್ನೇಹಾ ಇದ್ದರು.

ಪೋಟೋ: ಸಿಎಲ್ ಕೆ: ನ.7( ಕನ್ನಡ)
ಚಳ್ಳಕೆರೆ ನಗರದ ಲಿಟ್ಲ್ ಪ್ಲವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಉದ್ಟಾಟಿಸಿದರು. ಮಂಜುನಾಥ ರೆಡ್ಡಿ, ನಟರಾಜ್, ರಾಜೇಶ್ವರಿ, ಪಿ ಮಮತಾ ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now