ನವೆಂಬರ್ 16, ಸೋಮವಾರದಂದು ಗ್ರಹಗಳ ಚಲನೆಯ ಆಧಾರದ ಮೇಲೆ ದ್ವಾದಶ ರಾಶಿಗಳ ದಿನಭವಿಷ್ಯವನ್ನು ತಿಳಿದುಕೊಳ್ಳೋಣ. ಕೆಲವು ರಾಶಿಯವರಿಗೆ ಉದ್ಯೋಗ, ವ್ಯಾಪಾರ ಹಾಗೂ ಹಣಕಾಸಿನ ವಿಚಾರಗಳಲ್ಲಿ ಉತ್ತಮ ಬೆಳವಣಿಗೆ ಕಂಡುಬರುವ ಸಾಧ್ಯತೆಯಿದೆ. ಇನ್ನು ಕೆಲವರು ಕೋಪ, ಮಾತು ಹಾಗೂ ಸಂಬಂಧಗಳ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಾಗಾದರೆ ಮೇಷದಿಂದ ಮೀನದವರೆಗೆ ಇಂದಿನ ರಾಶಿಫಲ ಹೇಗಿದೆ? ತಿಳಿಯಿರಿ
ಮೇಷ ರಾಶಿ
ಇಂದು ನೀವು ಅತ್ಯಂತ ಚೈತನ್ಯಶೀಲರಾಗಿರುತ್ತೀರಿ ಮತ್ತು ಕಚೇರಿಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತೀರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದ್ದು, ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಒಡಹುಟ್ಟಿದವರೊಂದಿಗಿನ ಆಸ್ತಿ ವಿವಾದಗಳು ಬಗೆಹರಿಯುವ ಸಾಧ್ಯತೆಯಿದೆ. ಪ್ರಭಾವಿ ವ್ಯಕ್ತಿಯ ಭೇಟಿಯಿಂದ ವೃತ್ತಿಪರ ನೆಟ್ವರ್ಕ್ ವಿಸ್ತರಿಸಿಕೊಳ್ಳುವಿರಿ. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ದೂರವಾಗಿ ಕೌಟುಂಬಿಕ ಸಂಬಂಧದಲ್ಲಿ ಮಧುರತೆ ಮೂಡಲಿದೆ.
ವೃಷಭ ರಾಶಿ
ಚಂದ್ರನ ಕೃಪೆಯಿಂದ ಇಂದು ನೀವು ಹೆಚ್ಚು ಸಂತೋಷ ಮತ್ತು ಸಕಾರಾತ್ಮಕತೆಯಿಂದ ಇರುತ್ತೀರಿ. ಸುತ್ತಮುತ್ತಲಿನವರೊಂದಿಗೆ ಸೌಜನ್ಯದಿಂದ ವರ್ತಿಸುವಿರಿ. ಕುಟುಂಬದ ಬೆಂಬಲದೊಂದಿಗೆ ವ್ಯವಹಾರದಲ್ಲಿ ಕೆಲವು ಪ್ರಮುಖ ಹಾಗೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿಮ್ಮ ಉತ್ತಮ ಸಂವಹನ ಕೌಶಲ್ಯದಿಂದ ದೊಡ್ಡ ವ್ಯಾಪಾರ ಒಪ್ಪಂದವೊಂದು ಕೈಗೂಡಲಿದ್ದು, ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ.
ಮಿಥುನ ರಾಶಿ
ಆಂತರಿಕ ವಿಶ್ವಾಸ ಮತ್ತು ಭಾವನಾತ್ಮಕ ಸ್ಥಿರತೆ ಇರುತ್ತದೆ. ಕೆಲಸದಲ್ಲಿ ಯಶಸ್ಸು ಸಾಧಿಸುವಿರಿ ಹಾಗೂ ಸಂಗಾತಿಯೊಂದಿಗೆ ಮಧುರ ಕ್ಷಣಗಳನ್ನು ಕಳೆಯುವಿರಿ, ಇದರಿಂದ ಕೌಟುಂಬಿಕ ಸಾಮರಸ್ಯ ಹೆಚ್ಚಾಗುತ್ತದೆ. ಹೊಸ ಪ್ರಾಜೆಕ್ಟ್ ಆರಂಭಿಸಲು ಯೋಜನೆ ರೂಪಿಸುವಿರಿ ಮತ್ತು ನಿಮ್ಮ ನಿಖರತೆಯು ಅದರಲ್ಲಿ ಯಶಸ್ಸು ತಂದುಕೊಡಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶಗಳು ಒದಗಿಬರಲಿವೆ. ಪ್ರೇಮಿಗಳು ಅನಗತ್ಯ ಚರ್ಚೆಗಳಿಂದ ದೂರವಿರುವುದು ಒಳಿತು.
ಕರ್ಕಾಟಕ ರಾಶಿ
ಇಂದು ನಿಮಗೆ ಸ್ವಲ್ಪ ನಿರಾಸೆ ಕಾಡಬಹುದು. ನಿಮ್ಮ ಅಹಂಕಾರ ಮತ್ತು ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ನಿಮ್ಮ ಕಠೋರ ಮಾತುಗಳಿಂದ ನಷ್ಟ ಅಥವಾ ಸುತ್ತಮುತ್ತಲಿನವರೊಂದಿಗೆ ತಪ್ಪು ತಿಳುವಳಿಕೆ ಉಂಟಾಗಬಹುದು. ಪ್ರೇಮಿಗಳು ತಮ್ಮ ಸಂಬಂಧದಲ್ಲಿ ಬಿರುಕು ಮೂಡದಂತೆ ಎಚ್ಚರ ವಹಿಸಬೇಕು ಹಾಗೂ ಅನಗತ್ಯ ವಿವಾದಗಳಿಂದ ಅಂತರ ಕಾಯ್ದುಕೊಳ್ಳುವುದು ಸೂಕ್ತ.
ಸಿಂಹ ರಾಶಿ
ಇಂದು ನಿಮಗೆ ಮಾನಸಿಕ ನೆಮ್ಮದಿ ದೊರೆಯಲಿದೆ. ವ್ಯವಹಾರದಲ್ಲಿ ಹಣಕಾಸಿನ ಹರಿವನ್ನು ಸುಧಾರಿಸಲು ಹೆಚ್ಚುವರಿ ಬಂಡವಾಳ ಹೂಡುವ ಬಗ್ಗೆ ಯೋಚಿಸುವಿರಿ. ನಿಮ್ಮ ಆದಾಯ ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿ ಭದ್ರವಾಗಲಿದೆ. ಸಂಗಾತಿಯೊಂದಿಗಿನ ಬಾಂಧವ್ಯ ವೃದ್ಧಿಯಾಗಲಿದೆ. ಒಂಟಿಯಾಗಿರುವವರಿಗೆ ವಿವಾಹ ಯೋಗ ಕೂಡಿಬರಲಿದ್ದು, ಪ್ರೇಮಿಗಳು ವಿವಾಹದತ್ತ ಹೆಜ್ಜೆ ಇಡುವ ನಿರ್ಧಾರ ಮಾಡಲಿದ್ದಾರೆ.
ಕನ್ಯಾ ರಾಶಿ
ಇಂದು ನೀವು ಅತ್ಯಂತ ಸಂತೋಷದಿಂದ ಇರುತ್ತೀರಿ, ಏಕೆಂದರೆ ನಿಮ್ಮ ನಷ್ಟಗಳು ಲಾಭವಾಗಿ ಬದಲಾಗುವ ಸಾಧ್ಯತೆಯಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಕಾರ್ಯಕ್ಷಮತೆಯನ್ನು ಮೇಲಾಧಿಕಾರಿಗಳು ಮೆಚ್ಚಲಿದ್ದಾರೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಅಥವಾ ಸಕಾರಾತ್ಮಕ ಬದಲಾವಣೆಗಳಾಗುವ ಮುನ್ಸೂಚನೆ ಇದೆ. ವಿರೋಧಿಗಳ ಮೇಲೆ ನಿಯಂತ್ರಣ ಸಾಧಿಸುವಿರಿ. ಸಂಬಂಧಿಕರ ಬೆಂಬಲದೊಂದಿಗೆ ವಿವಾಹದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ.
ತುಲಾ ರಾಶಿ
ಗ್ರಹಗಳ ಅನುಕೂಲಕರ ಸ್ಥಾನದಿಂದಾಗಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಕುಟುಂಬ ಅಥವಾ ಸ್ನೇಹಿತರೊಂದಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ. ದಾನ-ಧರ್ಮಗಳಲ್ಲಿ ಪಾಲ್ಗೊಳ್ಳುವಿರಿ. ಆಸ್ತಿಗೆ ಸಂಬಂಧಿಸಿದ ವ್ಯವಹಾರಗಳು ಸುಗಮವಾಗಿ ಸಾಗಲಿದ್ದು, ಯಶಸ್ವಿಯಾಗಿ ಇತ್ಯರ್ಥವಾಗಲಿವೆ. ಉನ್ನತ ವ್ಯಾಸಂಗ ಅಥವಾ ವಿದೇಶಿ ಪ್ರವಾಸದ ಬಗ್ಗೆ ಯೋಜನೆ ರೂಪಿಸುವಿರಿ.
ವೃಶ್ಚಿಕ ರಾಶಿ
ಇಂದು ಚಂದ್ರನು ಪ್ರತಿಕೂಲ ಸ್ಥಾನದಲ್ಲಿರುವುದರಿಂದ ಎಚ್ಚರಿಕೆ ಅಗತ್ಯ. ಪಿತೂರಿಗಳಿಗೆ ಬಲಿಯಾಗುವ ಅಥವಾ ಅನತ್ಯ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆಯಿದೆ. ಯಾವುದೇ ವಿವಾದಗಳಿಂದ ದೂರವಿರಿ. ಹಿರಿಯರ ಆಶೀರ್ವಾದ ಮತ್ತು ನಿಮ್ಮ ದೃಢಸಂಕಲ್ಪ ಕಷ್ಟದ ಪರಿಸ್ಥಿತಿಯನ್ನು ಎದುರಿಸಲು ಸಹಾಯ ಮಾಡುತ್ತದೆ. ಕೌಟುಂಬಿಕ ಜೀವನದಲ್ಲಿ ವಾಗ್ವಾದಗಳನ್ನು ತಪ್ಪಿಸಿ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಿ.
ಧನು ರಾಶಿ

ಇಂದು ನೀವು ಕೆಲಸದಲ್ಲಿ ಹೆಚ್ಚು ಕಾರ್ಯನಿರತರಾಗಿರುತ್ತೀರಿ. ನಿಮ್ಮ ಸಕಾರಾತ್ಮಕ ಶಕ್ತಿಯು ಬಾಕಿ ಇರುವ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ತ್ವರಿತ ನಿರ್ಧಾರಗಳು ವ್ಯಾಪಾರದ ಬೆಳವಣಿಗೆಗೆ ಸಹಕಾರಿಯಾಗಲಿವೆ. ಪಾಲುದಾರಿಕೆಯಲ್ಲಿ ಹೊಸ ಉದ್ಯಮವನ್ನು ಪ್ರಾರಂಭಿಸಲು ಇದು ಸಕಾಲ, ಆದರೆ ಪಾಲುದಾರಿಕೆಯ ಮೂಲಕ ಸ್ಥಿರಾಸ್ತಿಗಳಲ್ಲಿ ಹೂಡಿಕೆ ಮಾಡುವುದು ಇಂದು ಸೂಕ್ತವಲ್ಲ.
ಮಕರ ರಾಶಿ
ಇಂದು ಉದ್ಯೋಗದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವಿರಿ. ಆರ್ಥಿಕ ಮತ್ತು ವೃತ್ತಿಪರ ಲಾಭ ತರುವಂತಹ ಬಡ್ತಿ ಅಥವಾ ವರ್ಗಾವಣೆಯ ಅವಕಾಶಗಳು ಒಲಿದುಬರಲಿವೆ. ಉತ್ತಮ ಅವಕಾಶಗಳಿಗಾಗಿ ಪ್ರಸ್ತುತ ಉದ್ಯೋಗ ಬದಲಾಯಿಸುವ ಬಗ್ಗೆ ಯೋಚಿಸಬಹುದು. ಹಿರಿಯ ಅಧಿಕಾರಿಗಳೊಂದಿಗಿನ ಸಂಬಂಧ ಬಲಗೊಳ್ಳಲಿದೆ. ನಿಮ್ಮ ಹಳೆಯ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಲಿವೆ.
ಕುಂಭ ರಾಶಿ
ಇಂದು ಪರಿಸ್ಥಿತಿಗಳು ಸಂಪೂರ್ಣವಾಗಿ ನಿಮ್ಮ ನಿಯಂತ್ರಣದಲ್ಲಿರುತ್ತವೆ. ಏಕಾಗ್ರತೆಯಿಂದ ಕೆಲಸ ಮಾಡುವಿರಿ. ನಿಮ್ಮ ಬುದ್ಧಿವಂತಿಕೆ ಮತ್ತು ಪ್ರಾಯೋಗಿಕತೆಯಿಂದಾಗಿ ವೃತ್ತಿಪರ ಜೀವನದ ಕಠಿಣ ನಿರ್ಧಾರಗಳನ್ನು ಆತ್ಮವಿಶ್ವಾಸದಿಂದ ತೆಗೆದುಕೊಳ್ಳುವಿರಿ. ನಿಮ್ಮ ಹಿಂದಿನ ಹೂಡಿಕೆಗಳಿಂದ ಇಂದು ಉತ್ತಮ ಲಾಭ ದೊರೆಯಲಿದೆ.
ಮೀನ ರಾಶಿ
ಇಂದು ನೀವು ಸ್ವಲ್ಪ ಅಸಮಾಧಾನ ಮತ್ತು ಬೇಸರದಿಂದ ಇರಬಹುದು. ವೃತ್ತಿಪರ ಮತ್ತು ಕೌಟುಂಬಿಕ ಜೀವನದ ಹಿತದೃಷ್ಟಿಯಿಂದ ಅಹಂಕಾರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಆಂತರಿಕ ಆತ್ಮವಿಶ್ವಾಸದ ಕೊರತೆಯಿಂದಾಗಿ ಕೆಲಸದಲ್ಲಿ ಹೊಸ ಹೆಜ್ಜೆ ಇಡಲು ಹಿಂದೇಟು ಹಾಕುವಿರಿ. ಯಾವುದೇ ಪರಿಸ್ಥಿತಿಯಲ್ಲೂ ಶಾಂತವಾಗಿರಿ ಮತ್ತು ನಕಾರಾತ್ಮಕ ಮನಸ್ಥಿತಿಯಲ್ಲಿರುವಾಗ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಿರುವುದು ಒಳಿತು.
















