ಶುಗರ್ ಬರಬಾರದು ಅಂದ್ರು ಈ ಒಂದು ಕಾಳನ್ನ ರಾತ್ರಿ ನೆನೆಹಾಕಿ, ಬೆಳಗ್ಗೆ ನೀರು ಕುಡಿರಿ ಸಾಕು..!

1 Min Read

ಇತ್ತೀಚಿನ ಲೈಫ್ ಸ್ಟೈಲ್ ಹೇಗಾಗಿದೆ ಅಂದ್ರೆ ಒಂದು ಸಣ್ಣ ಸಮಸ್ಯೆಯಾದರೂ ಮೊದಲು ಆಸ್ಪತ್ರೆಗೆ ಓಡಿ ಹೋಗ್ತಾರೆ, ಮಾತ್ರೆಯನ್ನ ತಗೋಳ್ತಾರೆ. ಆದರೆ ಈ ಮೊದಲೆಲ್ಲಾ ಆ ರೀತಿ ಇರಲಿಲ್ಲ. ಎಂಥದ್ದೇ ಸಮಸ್ಯೆಯಾಗಲಿ ಅಡುಗೆ ಮನೆಯಲ್ಲಿರುವ ಮದ್ದುಗಳನ್ನೇ ಬಳಸುತ್ತಿದ್ದರು. ಹಿತ್ತಲ ಗಿಡವನ್ನೇ ಅರೆಯುತ್ತಿದ್ದರು. ಅದಕ್ಕೆ ರೋಗ ನಿರೋಧಕ ಶಕ್ತಿಗಳು ಹೆಚ್ಚಿ, ಅದರಿಂದ ಕಾಯಿಲೆ ಮತ್ತೆ ಹತ್ತಿರ ಸುಳಿಯುತ್ತಿರಲಿಲ್ಲ. ಒಂದು ವೇಳೆ ಮತ್ತೆ ಬಂದರೂ ಅದು ಬೇಗ ಬರ್ತಾ ಇರಲಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯದಿಂದ ಇರಲು ಸಹಕಾರಿಯಾಗುತ್ತಿತ್ತು. ಆದರೆ ಈಗ ಹಾಗಲ್ಲ. ಇವತ್ತು ಒಂದು ಮನೆ ಮದ್ದನ್ನ ಹೇಳ್ತೀವಿ, ಅದನ್ನ ಫಾಲೋ ಮಾಡಿದ್ರೆ ಖಂಡಿತ ಮಧಿಮೇಹ ಅನ್ನೋದು ನಿಮ್ಮ ಹತ್ತಿರಕ್ಕೂ ಸುಳಿಯಲ್ಲ.

ಮೆಂತ್ಯ ಕಾಳು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಇದನ್ನ ದೋಸೆಗೋ, ಇಡ್ಲಿಗೋ ಅಥವಾ ಅಡುಗೆ ಸಾಂಬಾರ್ ಪುಡಿ ಮಾಡುವಾಗಲೋ ಬಳಸುತ್ತಿವಿ. ಆದರೆ ಇದನ್ನ ಡೈಲಿ ತಿನ್ನುವುದರಿಂದ ಎಷ್ಟೆಲ್ಲಾ ಲಾಭಗಳಿದಾವೆ ಗೊತ್ತಾ..? ಇದರಲ್ಲಿ ಪ್ರೋಟೀನ್ 25%, ಫ್ಯಾಟ್ 6%, ಫೈಬರ್ 25% ಇರುತ್ತದೆ. ಇದರಿಂದ ದೇಹಕ್ಕೆ ಸಾಕಷ್ಟು ಉಪಯೋಗವಿದೆ.

ರಾತ್ರಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಗೆ ಇದರ ನೀರು ಕುಡೊಯುವುದರಿಂದ ಡಯಾಬಿಟೀಸ್ ಕಂಟ್ರೋಲ್ ಗೆ ಬರುತ್ತೆ, ಹೈಪರ್ ಟೆನ್ಶನ್, ಕೊಲೆಸ್ಟ್ರಾಲ್ ಕೂಡ ಕಂಟ್ರೋಲ್ ಗೆ ಬರಲಿದೆ. ನೀರು ಕುಡಿದು, ಮೆಂತ್ಯವನ್ನ ಜಗಿದು ತಿನ್ನುವುದಕ್ಕಾದರೆ ತಿಂದು ಬಿಡಿ. ಅದರಿಂದ ಆರೋಗ್ಯಕ್ಕೆ ಲಾಭ ಹೆಚ್ಚು. ಮನೆಯಲ್ಲಿರುವ ಮೆಂತ್ಯವನ್ನ ಪ್ರತಿದಿನ ನೆನೆ ಹಾಕಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಡಯಾಬಿಟೀಸ್ ಹತ್ತಿರವೂ ಸುಳಿಯಲ್ಲ. ಈಗಾಗಲೇ ಡಯಾಬಿಟೀಸ್ ಇರುವವರು ಈ ನೀರನ್ನ ಕುಡೊಯುತ್ತಾ ಬನ್ನಿ. ಹಾಗಂತ ಮಾತ್ರೆ ನಿಲ್ಲಿಸಬೇಡಿ. ಡಯಾಬಿಟೀಸ್ ಕಂಟ್ರೋಲ್ ಗಡ ಬರುವುದು ನಿಮ್ಮ ಗಮನಕ್ಕೆ ಬರುತ್ತದೆ.

Share This Article
Leave a Comment

Leave a Reply

Your email address will not be published. Required fields are marked *