Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದ್ವೇಷದ ರಾಜಕಾರಣಕ್ಕೆ ಸಿಬಿಐ ಒಳಪಡಬಾರದು ಎಂಬ ದೃಷ್ಟಿಯಿಂದ ಈ ತೀರ್ಮಾನ : ಡಿಕೆಶಿ

ಡಿಕೆ ಶಿವಕುಮಾರ್
---Advertisement---

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕೇಸಿನ ವಿಚಾರದಲ್ಲಿ ಸಚಿವ ಸಂಪುಟದಲ್ಲಿ ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಸಿಬಿಐ ಎಂಟ್ರಿಯಾಗುವಂತೆ ಇಲ್ಲ ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಸಿಬಿಐನವರು ಏನೇನು ಮಾಡ್ತಾ ಇದ್ದಾರೆ ಎಂಬುದನ್ನು ನಾವೂ ಚರ್ಚೆ ಮಾಡೋದು ಬೇಡ. ಜೆಡಿಎಸ್ ನವರು ಏನ್ ಮಾಡಿದ್ರು, ಕುಮಾರಸ್ವಾಮಿ ಅವರು ಏನು ಮಾತಾಡಿದ್ರು, ಬಿಜೆಪಿ ಅವರು ಏನ್ ಮಾತಾಡಿದ್ರು ಅನ್ನೋದು ಗೊತ್ತಿದೆ. ಈಗ ಚರ್ಚೆ ಬೇಡ. ಅವರು ಎಷ್ಟು ಕೇಸ್ ಕೊಟ್ಟಿದ್ರು, ಕೇಸ್ ಏನಾಗಿದೆ, ಸಿಬಿಐ ರಿಪೋರ್ಟ್ ಏನಾಗಿದೆ ಎಂಬುದೆಲ್ಲವನ್ನು ಚರ್ಚೆ ಮಾಡೋದು ಬೇಡ ಎಂದಿದ್ದಾರೆ.

 

ಸಿದ್ದರಾಮಯ್ಯ ಅವರನ್ನು ಉಳಿಸಲು ಸಿಬಿಐ ದೂರ ಇಟ್ಟಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ ಡಿಸಿಎಂ, ಸರ್ಕಾರ ಒಂದು ಚರ್ಚೆ ಮಾಡಿದೆ. ದ್ವೇಷದ ರಾಜಕಾರಣಕ್ಕೆ ಸಿಬಿಐ ಒಳಪಡಬಾರದು ಎಂಬ ದೃಷ್ಟಿಯಿಂದ ಈ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ‌. ನಮ್ಮ ಅಧಿಕಾರಿಗಳು ಮಾಡುವುದಕ್ಕೆ ಆಗಲ್ಲ ಎಂದಾಗ ನೋಡೋಣಾ. ವಿಪಕ್ಷಗಳು ಮಾತಾಡ್ಲಿ. ಅವರಿಗೆಲ್ಲ ಉತ್ತರವನ್ನು ಬೇರೆ ಸಮಯದಲ್ಲಿ ಕೊಡೋಣಾ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಇತ್ತ ವಿಪಕ್ಷ ನಾಯಕರು ಸಿದ್ದರಾಮಯ್ಯ ಅವರು ಮೊದಲು ರಾಜೀನಾಮೆ ನೀಡಲಿ ಎಂದೇ ಕೇಳುತ್ತಿದ್ದಾರೆ.

ರಾಜ್ಯಪಾಲರಿಂದ ಮಾಹಿತಿ ಸೋರಿಕೆ ಆರೋಪದ ಬಗ್ಗೆ ಮಾತನಾಡಿ, ಆ ಬಗ್ಗೆ ನಂಗೆ ಗೊತ್ತಿಲ್ಲ. ಅದು ಇಂಟರ್ನಲ್ ಮ್ಯಾಟರ್. ಯಾರೂ ಏನು ಬರೆದಿದ್ದಾರೆ ಎಂಬುದು ಗೊತ್ತಿಲ್ಲ. ರಾಜ್ಯಪಾಲರ ಆಫೀಸಲ್ಲಿ ಏನು ನಡೆದಿದೆ, ಲೋಕಾಯುಕ್ತ ಆಫೀಸಲ್ಲಿ ಏನು ನಡೆದಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment