Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಜಿಲ್ಲೆಯಲ್ಲಿ ನಾತಪಂಥ ಜೋಗಿ ಸಂಸ್ಥಾನದ ಮಠ ಸ್ಥಾಪನೆ ಬಗ್ಗೆ ಚಿಂತನೆ : ರಾಜ್ಯಾಧ್ಯಕ್ಷ ಶಿವಾಜಿ ಮಧುಕರ್

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮೇ. 10 : ರಾಜ್ಯದಲ್ಲಿ ಅನೇಕ ಮಠಗಳು ನಮ್ಮ ಕೈತಪ್ಪಿ ಹೋಗಿರುವುದರಿಂದ ಚಿತ್ರದುರ್ಗ ಜಿಲ್ಲೆಯು ರಾಜ್ಯದ ಮಧ್ಯಭಾಗವಾಗಿದ್ದು, ಇಲ್ಲಿ ನಾತಪಂಥ ಜೋಗಿ ಸಂಸ್ಥಾನ ಮಠವನ್ನು ಸ್ಥಾಪನೆ ಮಾಡುವುದರಿಂದ ನಮ್ಮ ಸಮಾಜವನ್ನು ಸಂಘಟನೆಯ ಜೊತೆಗೆ ರಾಜಕೀಯವಾಗಿ, ಶೈಕ್ಷಣಿಕವಾಗಿ ಮಕ್ಕಳನ್ನು ಮುಖ್ಯವಾಹಿನಿ ತರುವಲ್ಲಿ ಪಾತ್ರವಹಿಸಬಹುದು. ಎಂದು ಅಖಿಲ ಕರ್ನಾಟಕ ಜೋಗಿ ಮಹಾಮಂಡಳದ ರಾಜ್ಯಾಧ್ಯಕ್ಷರಾದ ಶ್ರೀ ಶಿವಾಜಿ ಮಧುಕರ್ ರವರು ತಿಳಿಸಿದರು.

ನಗರದ ಐಶ್ವರ್ಯ ಫೋರ್ಟ್‍ನಲ್ಲಿ ಶನಿವಾರ ನಡೆದ ಚಿತ್ರದುರ್ಗ ಜಿಲ್ಲೆಯಲ್ಲಿ ನಾತಪಂಥ ಜೋಗಿ ಸಂಸ್ಥಾನ ಮಠದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆಯ ಉಪ್ಪನಾಯಕನಹಳ್ಳಿ ಗ್ರಾಮದಲ್ಲಿ ಹುಟ್ಟಿರುವ ಜೋಗಿ ಸಮಾಜದ ನಮ್ಮ ಮಕ್ಕಳು ಪಿಯುಸಿಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ, ಕುಸ್ತಿಪಟುವಿನಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವ ಮಕ್ಕಳಿಗೆ ಪ್ರೋತ್ಸಾಹ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲು ಸಾಧ್ಯವಾಗುತ್ತದೆ. ಶ್ರೀ ಮಠ ಸ್ಥಾಪನೆಯಿಂದ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿರುವುದರಿಂದ ನಮ್ಮ ಸಮಾಜದ ಮಕ್ಕಳು ಐಎಎಸ್ ಅಥವಾ ಕೆಎಎಸ್ ಅಧಿಕಾರಿಗಳಾಗಲು ಸಾಧ್ಯವಾಗುತ್ತದೆ. ನಮ್ಮ ರಾಜ್ಯದಲ್ಲಿ ಜೋಗಿ ಸಮಾಜದ 27 ಉಪಜಾತಿUಳನ್ನು ಒಟ್ಟುಗೂಡಿಸಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಶ್ರೀಮಠವು ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸುತ್ತದೆ ಎಂದರು.

ಜಿಲ್ಲಾಧ್ಯಕ್ಷರಾದ ಡಾ.ಜಗದೀಶ್ ಮಾತನಾಡಿ ನಾನು ವಿದ್ಯಾರ್ಥಿಯಾದಂತಹ ಸಂದರ್ಭದಲ್ಲಿ ಪವರ್ಗ-1 ಜೋಗಿ ಸಮಾಜದವನಾಗಿದರಿಂದ ನನಗೆ ವಿದ್ಯಾರ್ಥಿಭ್ಯಾಸಕ್ಕೆ ಅನುಕೂಲವಾಗುವುದರ ಜೊತೆಗೆ ಎಂ.ಬಿ.ಬಿ.ಎಸ್ ಸೀಟ್ ಸಹ ಸಿಕ್ಕಿರುವುದನ್ನು ಸ್ಮರಿಸಿದರು. ಕಿರಣ್‍ಕುಮಾರ್, ವೇದಾವತಿ, ಶೋಭಾ ರವರು ರಾಜ್ಯಮಟ್ಟದಲ್ಲಿ ತನ್ನದೇ ಅದ ರೀತಿಯಲ್ಲಿ ಗುರುತಿಸಿಕೊಂಡರು ಸಹ ಸರ್ಕಾರದಿಂದಾಗಲಿ ಯಾವುದೇ ರೀತಿಯಾದ ಉಪಯೋಗವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ನಾವು ಒಗ್ಗಾಟ್ಟಿಗಿದ್ದರೆ ರಾಜಕೀಯ ವ್ಯಕ್ತಿಗಳಾಗಲಿ, ಸರ್ಕಾರವಾಗಲಿ ನಮ್ಮ ಕಡೆ ಗಮನ ಹರಿಸುತ್ತದೆ. ನಾನು 1 ಎಕರೆ ಜಮೀನನ್ನು ಶ್ರೀಮಠಕ್ಕೆ ಕೊಡಲು ಒಪ್ಪಿದ್ದು, ಕಾರಣ ನಮ್ಮ ಸಮಾಜದ ಮಕ್ಕಳು ರಾಜಕೀಯವಾಗಿ, ಶೈಕ್ಷಣಕವಾಗಿ ಮುಂದುವರೆಯಲಿ ಎಂದು ಆಶಾಮನೋಭಾವದಿಂದ ನಾನು ನೀಡಿರುತ್ತೇನೆ. ಸಮಾಜ ಕಟ್ಟುವಲ್ಲಿ ಹಗಲಿರುಳು ಶ್ರಮಿಸಿರುತ್ತೇನೆ.

ಪ್ರೊ.ಚಂದ್ರಪ್ಪನವರು ಮಾತನಾಡಿ ಈ ಐತಿಹಾಸಿಕ ದಿನವಾಗಿದ್ದು, ನಾನು ಸಹ ಪ್ರಾಧ್ಯಾಪಕರಾದ ಸಂದರ್ಭದಲ್ಲಿ ಎಷ್ಟೋ ಜೋಗಿ ಸಮಾಜದ ಮಕ್ಕಳಿಗೆ ಫೀಜ್ ಕಟ್ಟಲು ಅಥವಾ ವಸತಿ ಇಲ್ಲದೆ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಜೋಗಿ ಸಮಾಜದ ಮಕ್ಕಳಿಗೆ ಶ್ರೀಮಠ ಅವಶ್ಯಕತೆ ಎಂದರು.

ಪ್ರತಾಪ್‍ಜೋಗಿ ಮಾತನಾಡಿ ಜೋಗಿ ಸಮಾಜ ಆರ್ಥಿಕವಾಗಿ ಹಿಂದುಳಿದ್ದು, ನಾವು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಅನೇಕ ಬಾರಿ ನಮ್ಮ ಸಮಾಜಕ್ಕೆ ಮೂಲಭೂತ ಸೌಕರ್ಯಗಳು ಮನವಿ ಸಲ್ಲಿಸಿದರೂ ಸಹ ಯಾವುದೇ ರೀತಿಯ ಉಪಯೋಗವಾಗಿರುವುದಿಲ್ಲ. ಪ್ರಸ್ತುತ ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಶ್ರೀಮಠಕ್ಕೆ ಜಮೀನು ಕಲ್ಪಿಸಿಕೊಡಿ ಎಂದು ಕೇಳಿಕೊಂಡಾಗ ಜಿಲ್ಲಾಧಿಕಾರಿಗಳು, ಅಪಾರ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ರವರು ಸಕರಾತ್ಮಕಾವಾಗಿ ಒಪ್ಪಿಕೊಂಡಿರುವುದರಿಂದ ಜಿಲ್ಲಾಡಳಿತದ ಕ್ರಮವನ್ನು  ಶ್ಲಾಘಿಸಿ ಶ್ರೀಮಠದಿಂದ ಎಷ್ಟೋ ಕುಟುಂಬಗಳಿಗೆ ಉನ್ನತ ಶಿಕ್ಷಣ, ವಿವಾಹವಾಗಲು ಸಮಾಜದ ಸಮಸ್ಯೆಗಳನ್ನು ಆಲಿಸಲು ಮತ್ತು ರಾಜಕೀಯವಾಗಿ ಪ್ರಾತಿನಿದ್ಯ ಸಿಗಲು ಸಾಧ್ಯವಾಗುತ್ತದೆ ಎಂದು ತಿಳಸಿದರು.

ಪ್ರಾಸ್ತಾವಿಕ ಮಾತನಾಡಿದ ಪ್ರಧಾನ ಕಾರ್ಯದರ್ಶಿಗಳಾದ ಕುಮಾರಸ್ವಾಮಿ ಚಿತ್ರದುರ್ಗದಲ್ಲಿ ನಾಥ ಪರಂಪರೆಯ ಮಠ ಸ್ಥಾಪನೆಯಿಂದ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮಠ ಸ್ಥಾಪನೆಯಾಗಲು 1 ಎಕರೆ ಜಮೀನನ್ನು ನೀಡಲು ಡಾ,ಜಗದೀಶ್, ಅಧ್ಯಕ್ಷರು, ಒಪ್ಪಿರುವುದನ್ನು ಸ್ವಾಗತಿಸಿ ಸಮಾಜದ ಏಳಿಗೆಗೆ ಜಿಲ್ಲೆಯ ಎಲ್ಲಾ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಶ್ರಮಿಸಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಕುಂದಾಪುರ ರಮೇಶ್, ತುಮಕೂರಿನ ಶಿವುಕುಮಾರ್, ತೋಟಪ್ಪ, ಹೊನ್ನಪ್ಪ, ಮಂಜುನಾಥ್, ಯರ್ರಿಸ್ವಾಮಿ, ರಾಮು ಹಾವೇರಿ, ಚಂದ್ರು ದಾವಣಗೆರೆ, ಮಂಜುನಾಥ್ ನೆರ್ಲಗಿ, ಮಂಜುನಾಥ್ ಶಿವಪುರ, ಸಿದ್ದರಾಜು ಜೋಗಿ, ಶಿವುಕುಮಾರ್, ಗುರುಸ್ವಾಮಿ, ಯೋಗಿಶ್, ಕೃಷ್ಣಮೂರ್ತಿ, ರವಿಕಿರಣ್, ಶೋಭಾ, ವೇದಾವತಿ, ಕವಿತಾ, ಬಸವರಾಜ್ ಭಂಡಾರಿ, ನಾಗರಾಜು, ರವಿ, ತ್ಯಾಗರಾಜು, ಪ್ರಖ್ಯಾತ್‍ಜೋಗಿ, ವಿಜಯ್‍ಕುಮಾರ್ ಬೆಂಗಳೂರು ಇನ್ನಿತರರು ಇದ್ದರು,

 

 

 

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment