Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಕೆಟ್ ಉಡಾವಣೆಗೂ ಮುನ್ನ ತಿರುಪತಿಯಲ್ಲಿ ಪೂಜೆ ಅಸಮಾಧಾನ ಹೊರ ಹಾಕಿದ ಚಿಂತಕ ನರೇಂದ್ರ ನಾಯಕ್..!

---Advertisement---

ಮಂಗಳೂರು: ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆಯಾಗಿದೆ. ಆದ್ರೆ ಈ ಬಾರಿ ಉಡಾವಣೆಗೂ ಮುನ್ನ ಇಸ್ರೋ ದೇವರ ಮೊರೆ ಹೋಗಿತ್ತು. ಪ್ರತಿಕೃತಿಗೆ ಪೂಜೆ ಸಲ್ಲಿಸಿದ್ದರು. ಈ ಬಗ್ಗೆ ಚಿಂತಕ ನರೇಂದ್ರ ನಾಯಕ್ ಅಸಮಾಧಾನ ಹೊರ ಹಾಕಿದ್ದಾರೆ.

ವೈಯಕ್ತಿಕ ವಿಚಾರಗಳಾದರೇ ಪೂಜೆ, ಪುರಸ್ಕಾರ ಮಾಡಿಸುವುದಕ್ಕೆ ನಮಗೇನು ಆಕ್ಷೇಪವಿಲ್ಲ. ಆದರೆ ಇದು ದೇಶದ ವಿಚಾರ. ಯಾವುದೇ ಧಾರ್ಮಿಕ ವಿಚಾರ ಥಳುಕು ಹಾಕಿಕೊಳ್ಳುವುದು ಸರಿಯಲ್ಲ. ಕೆಲವು ರಾಷ್ಟ್ರಗಳ ರಾಕೆಟ್ ಈಗಾಗಲೇ ಯಶಸ್ವಿಯಾಗಿ ಉಡಾವಣೆಯಾಗಿದೆ. ಅವರೇನು ಪೂಜೆ ಪುನಸ್ಕಾರಗಳ ಪೂಜೆ ಮಾಡಿಸಿದ್ದಾರಾ..? ಎಂದು ಪ್ರಶ್ನಿಸಿದ್ದಾರೆ.

ವಿಜಯ್‌ ಮಲ್ಯನ ಪ್ರತಿಯೊಂದು ಏರ್ ಕ್ರಾಫ್ಟ್ ತಿರುಪತಿಗೆ ರೌಂಡ್ ಹಾಕಿ ಬರುತ್ತಿತ್ತು. ಆದರೆ ಆತ ಉದ್ಯಮದಲ್ಲಿ ನೆಲಕಚ್ಚಿಲ್ಲವೇ. ಹಿಂದೆ ಇದೇ ರೆಪ್ಲಿಕಾ – 1ನ ಪೂಜೆಗೆ ತಿರುಪತಿಗೆ ಹೋದ ಇಸ್ರೋದ ಇಬ್ಬರು ಮೂವರು ದಾರಿಯಲ್ಲಿಯೇ ಅಪಘಾತಕ್ಕೆ ಬಲಿಯಾಗಿದ್ದರು. ಇಂತಹ ಅನೇಕ ಮೂಲಭೂತ ಪ್ರಶ್ನೆಗಳು ನಮ್ಮ ಮುಂದಿದೆ ಎಂದು ನರೇಂದ್ರ ನಾಯಕ್ ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...