Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತಮ್ಮ‌ ಕಥೆಯನ್ನ ಸಿನಿಮಾ ಮಾಡದಂತೆ ಸಾಲುಮರದ ತಿಮ್ಮಕ್ಕ ದೂರು..

---Advertisement---

 

ಬೆಂಗಳೂರು; ಸಾಲುಮರದ ತಿಮ್ಮಕ್ಕ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎಲ್ಲರಿಗೂ ಅವರು ಮಾಡಿದ ತ್ಯಾಗ ಗೊತ್ತೆ ಇದೆ. ಮರಗಳನ್ನೇ ತಮ್ಮ ಜೀವನ ಎಂದುಕೊಂಡು ಬದುಕಿದವರು. ಮರಗಳನ್ನೇ ಮಕ್ಕಳೆಂದು ಸಾಕಿದವರು. ಅವರ ಬಗ್ಗೆ ಎಲ್ಲರು ತಿಳಿದಿದ್ದಾರೆ. ಆದರೆ ಅವರ ಬಗ್ಗೆ ಸಿನಿಮಾ ಮಾಡುವುದಕ್ಕೆ ತಂಡವೊಂದು ಹೊರಟಿತ್ತು. ಅದಕ್ಕೆ ಹಿನ್ನಡೆಯಾಗಿದೆ. ಇಂದು ಸಾಲುಮರದ ತಿಮ್ಮಕ್ಕ ಇದಕ್ಕೆ ವಿರೋಧ ವ್ಯಕ್ಯಪಡಿಸಿದ್ದಾರೆ.

ಈ ಬಗ್ಗೆ ಸಾಲುಮರದ ತಿಮ್ಮಕ್ಕರ ಮಗ ಉಮೇಶ್ ಮಾತನಾಡಿ, ಸಾಲುಮರದ ತಿಮ್ಮಕ್ಕ ಬಯೋಪಿಕ್ ಮಾಡ್ತೇವೆ ಅಂತ ಸಾಕಷ್ಟು ನಿರ್ದೇಶಕರು ಬಂದಿದ್ದರು. ಆದರೆ ನಾವೂ ಮಾಡೋದು ಬೇಡ ಅಂತಾನೇ ಹೇಳಿದ್ದೇವು. ದಿಲೀಪ್ ಕೂಡ ಮಾಡ್ತೀವಿ ಎಂದು ಬಂದಾಗ ಅವರಿಗೂ ಬೇಡ ಎಂದು ಹೇಳಿದ್ದೇವು. ಈ ತಂಡಕ್ಕೆ ನಾವೂ ಸಿನಿಮಾ ಮಾಡುವುದಕ್ಕೆ ಬಿಡಲ್ಲ ಎಂದು ತಿಳಿಸಿದ್ದಾರೆ. ವೃಕ್ಷಮಾತೆ ಸಿನಿಮಾ ಮೂಲಕ ಸಾಲುಮರದ ತಿಮ್ಮಕ್ಕನ ಬಗ್ಗೆ ಸಿನಿಮಾ ಮಾಡಲು ಹೊರಟಿದ್ದ ತಂಡಕ್ಕೆ ಈಗ ಹಿನ್ನಡೆಯಾಗಿದೆ.

ದೂರು ಸ್ವೀಕರಿಸಿದ ಬಳಿಕ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು, ಸಾಲುಮರದ ತಿಮ್ಮಕ್ಕ ಬಂದು ದೂರು ನೀಡಿದ್ದಾರೆ. ನನ್ನ ಅನುಮತಿ ಇಲ್ಲದೆ ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ ಎಂದು ಹೇಳಿದ್ದಾರೆ. ಸಾಲುಮರದ ತಿಮ್ಮಕ್ಕ ಅವರ ಮನವಿಗೆ ನಾವೂ ಸ್ಪಂದಿಸುತ್ತೇವೆ. ವೃಕ್ಷಮಾತೆ ಎಂಬ ಟೈಟಲ್ ನಮ್ಮಲ್ಲಿ ಇನ್ನು ರಿಜಿಸ್ಟರ್ ಆಗಿಲ್ಲ. ಸಿನಿಮಾ ತಂಡದವರನ್ನು ಕರೆಸಿ ಆ ಬಗ್ಗೆ ಮಾತನಾಡುತ್ತೇವೆ ಎಂದಿದ್ದಾರೆ. ವೃಕ್ಷಮಾತೆ ಸಿನಿಮಾ ಅದಾಗಲೇ ಚಿತ್ರೀಕರಣವನ್ನು ಶುರು ಮಾಡಿತ್ತು. ಆದರೆ ಶೂಟಿಂಗ್ ಸಮಯದಲ್ಲೂ ಸ್ಟೇಷನ್ ಗೆ ಕರೆಸಿ ಎಚ್ಚರಿಕೆಯನ್ನು ನೀಡಲಾಗಿತ್ತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಚಾಣಕ್ಯನೀತಿ : ಬುದ್ಧಿವಂತಿಕೆ ಇದ್ದರೂ ಈ 5 ತಪ್ಪು ಮಾಡಬೇಡಿ; ಜೀವನದಲ್ಲಿ ಕಷ್ಟಗಳು ಎದುರಾಗಬಹುದು!

ಆಗಸ್ಟ್ 17ರ ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಶುಭಫಲ, ಹಣಕಾಸಿನಲ್ಲಿ ಲಾಭದ ಯೋಗ!

ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕೈಗಾರಿಕಾ ಸಹಭಾಗಿತ್ವದ “ಹೈಪರ್-ಆಕ್ಟಿವ್ ಇನ್ನೋವೇಷನ್ ಹಬ್”ಗಳ ನಿರ್ಮಾಣ ಅತ್ಯಗತ್ಯ

ತೆಳ್ಳಗಿದ್ದರೆ ಮಾತ್ರ ಫಿಟ್ ಎಂದರ್ಥವಲ್ಲ: ನಿಜವಾದ ಫಿಟ್‌ನೆಸ್‌ನ ಗುರುತುಗಳೇನು? ತಜ್ಞರ ಸಲಹೆ ಇಲ್ಲಿದೆ

ಕೂದಲು ಉದುರುವಿಕೆ ತಡೆದು, ದಟ್ಟವಾಗಿ ಬೆಳೆಯಲು ಈ ‘ಸೂಪರ್‌ಫುಡ್‌’ಗಳನ್ನು ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ!

ಚಿತ್ರದುರ್ಗ : ಮೊಳಕಾಲ್ಮೂರಿನಲ್ಲಿ ಭೀಕರ ರಸ್ತೆ ಅಪಘಾತ : ಸೇತುವೆಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು!

Leave a Comment