ಬೆಂಗಳೂರು; ಅತ್ಯಾ*ರ ಆರೋಪದ ಮೇಲೆ ಪರಪ್ಪನ ಅಗ್ರಹಾರ ಸೇರಿದ್ದ ಮಡೆನೂರು ಈಗ ರಿಲೀಸ್ ಆಗಿದ್ದಾರೆ. ಅತ್ಯಾ*ರ ಕೇಸಲ್ಲಿ ತಗಲಾಕಿಕೊಂಡ ಮೇಲೆ ಮಡೆನೂರು ಮನು ಬಗೆಗಿನ ಕೆಲವೊಂದು ಆಡಿಯೋಗಳು ವೈರಲ್ ಆದ ಬಳಿಕ, ಚಿತ್ರರಂಗದಿಂದಾನೇ ಬ್ಯಾನ್ ಮಾಡಿದ್ದಾರೆ. ಇಂದು ಜೈಲಿನಿಂದ ರಿಲೀಸ್ ಆದ ಮಡೆನೂರು ಮನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪಕ್ಕಾ ಪ್ಲ್ಯಾನ್ ಮಾಡಿ ನನ್ನನ್ನ ಮುಗಿಸಿದ್ದಾರೆ. ನಾನು ಸಾಮಾನ್ಯ ಹಳ್ಳಿ ಹುಡುಗ. ಮೂರು ವರ್ಷಗಳ ಕಾಲ ಹಗಲಿರುಳು ಕಷ್ಟಪಟ್ಟು ಕೆಲಸ ಮಾಡಿದ್ದೆ. ಆದರೆ ನನ್ನ ಜೊತೆಗೆ ಇದ್ದವರೇ ಕೇಸದ ಮಾಡಿದ್ದರು. ಇನ್ನೂ ಮೇಲೆಳದಂತೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ನನ್ನ ಮುಗಿಸಿದ್ದಾರೆ. ನಾನು ಜೈಲಿಗೆ ಹೋಗುವ ಮುನ್ನ ನನಗೆ ಕರೆ ಮಾಡಿದ್ದರು. ನೀನು ಅತ್ಯಾಚಾರದ ಕೇಸಲ್ಲಿ ಹೊರಗೆ ಬಂದರೆ ನಿನ್ನ ವಿರುದ್ಧ ನಾವೂ ಇನ್ನೊಂದು ಪ್ಲ್ಯಾನ್ ಮಾಡಿದ್ದೇವೆ ಎಂದರು. 50 ಸಾವಿರ ಕೊಟ್ಟು ಆಡಿಯೋ ರೆಡಿ ಮಾಡಿದ್ದೇವೆ ಎಂದರು ಎಂದು ವೈರಲ್ ಆದ ಆಡಿಯೋ ಬಗ್ಗೆ ಮಾತನಾಡಿದ್ದಾರೆ.
ಮಡೆನೂರು ಮನು ಅವರನ್ನ ಇಡೀ ಚಿತ್ರರಂಗ ದ್ವೇಷ ಮಾಡುವುದಕ್ಕೆ ಕಾರಣ ಆ ಒಂದು ಆಡಿಯೋ. ಶಿವಣ್ಣನ ಸಾವನ್ನ ಬಯಸಿದ್ದರು. ದರ್ಶನ್, ಧ್ರುವ ನಂತರ ನಾನೇ ಎಂದಿದ್ದರು. ಕನ್ನಡ ಇಂಡಸ್ಟ್ರಿಯ ಜೀವಾಳವಾಗಿರುವ ಶಿವಣ್ಣರ ಸಾವನ್ನ ಬಯಸಿದ್ದಕ್ಕೆ ಫಿಲ್ಮ್ ಚೇಂಬರ್ ಕೂಡ ಮಡೆನೂರು ಮನು ಅವರನ್ನ ದೂರ ಇಡಬೇಕೆಂದು ನಿರ್ಧಾರ ಮಾಡಿದೆ. ಇದೀಗ ಜೈಲಿನಿಂದ ಹೊರಗೆ ಬಂದಿರುವ ಮಡೆನೂರು ಮನು ಏನ್ ಮಾಡ್ತಾರೆ ನೋಡಬೇಕಿದೆ.


















