ಸುದ್ದಿಒನ್, ಹಿರಿಯೂರು, ಮೇ. 11 : ಯುದ್ಧ ಯಾವುದಕ್ಕೂ ಪರಿಹಾರವಲ್ಲ. ಆದರೆ ನಿರಂತರವಾಗಿ ಭಯೋತ್ಪಾದಕ ದಾಳಿಗಳಿಗೆ ಒಳಗಾಗಿ ಸಾವು ನೋವುಗಳನ್ನು ಕಂಡ ದೇಶ ನಮ್ಮದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಬೇಸರ ವ್ಯಕ್ತಪಡಿಸಿದರು.
ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಹಲ್ಗಾಮ್ ದಾಳಿ ಮಾಡುವ ಮೂಲಕ ಪಾಕಿಸ್ತಾನ ಭಾರತವನ್ನು ಯುದ್ಧಕ್ಕೆ ಆಹ್ವಾನಿಸಿದಂತಾಗಿದೆ. ಭಯೋತ್ಪಾದಕತೆಯನ್ನು ಬೆಂಬಲಿಸುವ ಪಾಪಿ ಪಾಕಿಸ್ತಾಕ್ಕೆ ಬುದ್ದಿ ಕಲಿಸಲು ಸುಸಮಯವಾಗಿತ್ತು. ಆತುರದ ಕದನ ವಿರಾಮ ನಿರ್ಧಾರ ದೇಶದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅಷ್ಟಕ್ಕೂ ಕದನ ವಿರಾಮಕ್ಕೆ ಅರ್ಹ ದೇಶವೇ ಅಲ್ಲ ಅದು. ಪಾಕಿಸ್ತಾನದ ಮೇಲೆ ಮತ್ತೊಷ್ಟು ಹೊಡೆತ ಕೊಟ್ಟು, ಭಾರತದ ತಂಟೆಗೆ ಬರದಂತೆ ಎಚ್ಚರಿಕೆ ಕೊಟ್ಟು ಆನಂತರ ಕದನ ವಿರಾಮ ಘೋಷಣೆ ಮಾಡಬಹುದಿತ್ತು ಎಂದು ಅವರು ಹೇಳಿದರು.
















