Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

10 ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಇಲ್ಲ : ಇದೆಲ್ಲಾ ಆಪರೇಷನ್ ಕಮಲದ ಮಹಿಮೆಯಾ..?

Facebook
Twitter
Telegram
WhatsApp

ಬೆಂಗಳೂರು: ಕಳೆದ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ, ಬಿಜೆಪಿ ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿರುವುದು ಗುಟ್ಟಾಗಿ ಏನು ಉಳಿದಿಲ್ಲ. ಆದರೆ ಈಗ ಸಮಸ್ಯೆ ಆ ಕ್ಷೇತ್ರಗಳಿಗೆ ಆಗಿದೆ.

ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹೋದ ಕೈ ಶಾಸಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದೆ. 14 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಅಭ್ಯರ್ಥಿಯೇ ಇಲ್ಲ. ಆ ಕ್ಷೇತ್ರದಲ್ಲಿ ಪರ್ಯಾಯ ಅಭ್ಯರ್ಥಿ ಬೆಳೆಸಲು ಕಾಂಗ್ರೆಸ್ ನಾಯಕರು ಸುಸ್ತು ಹೊಡೆದಿದ್ದಾರೆ. ಸ್ವತಃ ಕ್ಷೇತ್ರದ ಕಾಂಗ್ರೆಸ್ ನಾಯಕರಿಂದ ಕಾಂಗ್ರೆಸ್ ಬಿಟ್ಟವರ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ.

ಅವರನ್ನ ವಾಪಸು ಕರೆತನ್ನಿ ಇಲ್ಲವೇ ಈ ಕ್ಷೇತ್ರ ಮರೆತುಬಿಡಿ ಎಂದು ಕೆಲವು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರಂತೆ. ಚುನಾವಣೆ ಹತ್ತು ತಿಂಗಳು ಬಾಕಿ ಇರುವಾಗಲೇ ಶುರುವಾಗುತ್ತಾ ಘರ್ ವಾಪ್ಸಿ ಪಾಲಿಟಿಕ್ಸ್ ಎಂಬ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಶಾಸಕ ಸಚಿವರಿಗೆ ಕಾಂಗ್ರೆಸ್ ಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ.

ಕೆ.ಆರ್ ಪುರಂ – ಬೈರತಿ ಬಸವರಾಜ್

ಆರ್ ಆರ್ ನಗರ – ಮುನಿರತ್ನ

ಯಶವಂತಪುರ – ಎಸ್ ಟಿ ಸೋಮಶೇಖರ್

ಹಿರೇಕೇರೂರು – ಬಿಸಿ ಪಾಟೀಲ್

ಚಿಕ್ಕಬಳ್ಳಾಪುರ – ಸುಧಕಾರ್

ಯಲ್ಲಾಪುರ – ಶಿವರಾಮ್ ಹೆಬ್ಬಾರ್

ಖಾಗವಾಡ – ಶ್ರೀಮಂತ್ ಪಾಟೀಲ್

ಗೋಕಾಕ್ ಸೇರಿದಂತೆ ಹತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಪರ್ಯಾಯ ಅಭ್ಯರ್ಥಿಯೇ ಸಿಕ್ತಿಲ್ಲ. ಹೀಗಾಗಿ ಚುನಾವಣೆಗೂ ಮೊದಲೇ ಎಚ್ಚೆತ್ತುಕೊಂಡು  ಘರ್ ವಾಪ್ಸಿ ಮಾಡಿ ಎಂದು ಜಿಲ್ಲಾ ನಾಯಕರು ಸಿದ್ದರಾಮಯ್ಯ, ಡಿಕೆಶಿ ಬಳಿ ಮನವಿ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಹೊರತುಪಡಿಸಿ ಉಳಿದ ಕ್ಷೇತ್ರಗಳ ಬಿಜೆಪಿ ಶಾಸಕರನ್ನ ಮತ್ತೆ ಘರ್ ವಾಪ್ಸಿ ಮಾಡಿಸುವ ಬಗ್ಗೆ ಕೆಪಿಸಿಸಿಯಲ್ಲಿ ಚರ್ಚೆ ಆಗ್ತಿದೆ ಎನ್ನಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಲೋಕಾಯುಕ್ತ ಬಲೆಗೆ ಬಿದ್ದ ಬಯಲು ಸೀಮೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ

ಸುದ್ದಿಒನ್, ಚಿತ್ರದುರ್ಗ, ಮೇ. 06  : ಗುತ್ತಿಗೆದಾರನ  ಕಾಮಗಾರಿ ಬಿಲ್ ಪಾವತಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚಿತ್ರದುರ್ಗ ಬಯಲು ಸೀಮೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಸವರಾಜಪ್ಪ ನಾಲ್ಕು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ

ಕರ್ನಾಟಕದಲ್ಲಿಯೇ ತೀರ್ಥಹಳ್ಳಿಯಲ್ಲಿ ಬೆಳೆಯುವ ಅಡಿಕೆ ಬೆಸ್ಟ್ : ಸಂಶೋಧನೆಯಲ್ಲಿ ಬಯಲಾಯ್ತು ಸತ್ಯ

  ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅಡಿಕೆಯನ್ನು ಬೆಳೆಯುತ್ತಾರೆ. ಆದರೆ ರಾಜ್ಯದೆಲ್ಲೆಡೆ ಆಲ್ಮೋಸ್ಟ್ ಎಲ್ಲಾ ಜಿಲ್ಲೆಯಲ್ಲೂ ಅಡಿಕೆ ತೋಟವನ್ನು ಮಾಡಿರುತ್ತಾರೆ. ಆದರೆ ಅಡಿಕೆಯ ಗುಣಮಟ್ಟದ ವಿಚಾರಕ್ಕೆ ಬಂದರೆ ತೀರ್ಥಹಳ್ಳಿಯ ಅಡಿಕೆ ಉತ್ತಮ ಎನ್ನಲಾಗುತ್ತದೆ. ಕೃಷಿ

ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆ ಬಲು ದುಬಾರಿ.. ಏರುತ್ತಲೆ ಇದೆ ದರ..!

ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆ ಬಲು ದುಬಾರಿ.. ಏರುತ್ತಲೆ ಇದೆ ದರ..! ಬಂಗಾರ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಬಂಗಾರವನ್ನು ತೆಗೆದುಕೊಳ್ಳಬೇಕೆಂದು ಎಲ್ಲರಿಗೂ ಆಸೆ‌. ಆದರೆ ಇತ್ತಿಚಿನ ದಿನಗಳಲ್ಲಿ ಬಂಗಾರವನ್ನು ಮಧ್ಯಮವರ್ಗದವರು ಮುಟ್ಟುವುದಕ್ಕಾದರೂ ಸಾಧ್ಯವ..?

error: Content is protected !!