Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಂದು ತನಿಷಾ .. ಇಂದು ಗೌತಮಿ ಅಥವಾ ಭವ್ಯಾ : ಮಿಡ್ ನೈಟ್ ನಲ್ಲಿ ಬಿಗ್ ಬಾಸ್ ನಿಂದ ಹೊರ ಹೋಗೋದು ಯಾರು..?

---Advertisement---

ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನೇನು ಮುಗಿಯುವ ಹಂತಕ್ಕೆ ತಲುಪಿದೆ. ಇನ್ನು ಕೇವಲ ಎರಡು ವಾರಕ್ಕೂ ಕಡಿಮೆ ಇದೆ. ಫಿನಾಲೆಗೆ ಹೋಗುವವರು ಕೇವಲ ಐದು ಜನ ಮಾತ್ರ. ಉಳಿದವರೆಲ್ಲ ಫಿನಾಲೆ ಅಷ್ಟರಲ್ಲಿ ಹೊರಗೆ ಬರ್ತಾರೆ. ಇಂದು ಕೂಎ ಮಿಡ್ ನೈಟ್ ಎಲಿಮಿನೇಷನ್ ಇದೆ. ವೀಕೆಂಡ್ ನಲ್ಲಿ ಪಂಚಾಯ್ತಿ ಮಾಡಿ ಹೊರ ಹೋಗುವವರೇ ಬೇರೆ, ಮಿಡ್ ನೈಟ್ ನಲ್ಲಿ ಎಲಿಮಿನೇಷನ್ ಆದವರಿಗೆ ಸಂಕಟ ಜಾಸ್ತಿ. ಕಳೆದ ಸೀಸನ್ ನಲ್ಲಿ ತನಿಷಾಗೆ ಈ ರೀತಿಯಾಗಿತ್ತು. ಮಿಡ್ ನೈಟ್ ನಲ್ಲಿಯೇ ಎಲಿಮಿನೇಷನ್ ಆಗಿ ಹೊರಗೆ ಬಂದಿದ್ದರು.

ಇದೀಗ ಸೀಸನ್ 11ರಲ್ಲಿಯೂ ಮಿಡ್ ನೈಟ್ ಎಲಿಮಿನೇಷನ್ ಶುರುವಾಗಿದೆ. ಬಿಗ್ ಬಾಸ್ ಎಲ್ಲರಿಗೂ ತಮ್ಮ ಲಗೇಜ್ ಗಳನ್ನ ಪ್ಯಾಕ್ ಮಾಡಿಕೊಂಡು ಲೀವಿಂಗ್ ಏರಿಯಾದಲ್ಲಿ ಬಂದು ನಿಲ್ಲುವಂತೆ ತಿಳಿಸಿದೆ. ಅದರಂತೆ ಎಲ್ಲರೂ ಸೂಟ್ ಕೇಸ್ ಗಳನ್ನು ತಂದು ನಿಂತಿದ್ದಾರೆ. ಇಂದು ಒಬ್ಬರ ಜರ್ನಿ ಮುಗಿಯುತ್ತದೆ ಎಂದು ಹೇಳಿದ ಕೂಡಲೇ ಭವ್ಯಾ ತುಂಬಾನೇ ಕಣ್ಣೀರು ಹಾಕಿದ್ದಾರೆ. ಗೌತಮಿ, ಮೋಕ್ಷಿತಾ ಕೂಡ ಆತಂಕಗೊಂಡಿದ್ದಾರೆ.

ಈ ಪ್ರೋಮೋ ನೋಡಿದ ಹಲವರು ಒಂದು ಅಂದಾಜು ಮಾಡುತ್ತಿದ್ದಾರೆ. ಈ ವಾರ ನಾಮಿನೇಷನ್ ಆಗಿರುವವರಲ್ಲಿ ಭವ್ಯಾ, ಗೌತಮಿ, ಮೋಕ್ಷಿತಾ ಈ ಮೂವರಲ್ಲಿ ಒಬ್ಬರು ಮನೆಯಿಂದ ಹೊರಗೆ ಬರಬೇಕು. ಒಂದಷ್ಡು ಜನ ಭವ್ಯಾ ಹೊರಗೆ ಬಂದಿದ್ದಾರೆ ಎಂದರೆ ಇನ್ನಷ್ಟು ಜ‌ನ ಗೌತಮಿ ಹೊರಗೆ ಬಂದಿದ್ದಾರೆ ಎಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಾಕುತ್ತಿದ್ದಾರೆ. ಇಂದಿನ ಎಪಿಸೋಡ್ ನೋಡಿದರೆ ಹೊರಗೆ ಬಂದದ್ದು ಯಾರು ಎಂಬುದು ತಿಳಿಯಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment