Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯುವ ಜನಾಂಗಕ್ಕೆ ಸಂಘ, ಸಂಘಟನೆ ಎಂದರೆ ಗೊತ್ತಿಲ್ಲ : ಖಂಡೋಜಿರಾವ್

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಮಾ.24 :

ಅಂಚೆ ಇಲಾಖೆಯಲ್ಲಿ ಹೂಸದಾಗಿ ಕೆಲಸಕ್ಕೆ ಸೇರಿರುವ ಯುವ ಜನಾಂಗಕ್ಕೆ ಸಂಘ ಎಂದರೆ ಏನು ಸಂಘಟನೆ ಎಂದರೆ ಏನು ಎಂಬುದರ ಬಗ್ಗೆ ಮಾಹಿತಿ ಇಲ್ಲ. ನಮ್ಮ ಸಂಘದಲ್ಲಿನ ಹಿರಿಯರು ಸಂಘದ ಮತ್ತು ಸಂಘದ ಚಟುವಟಿಕೆಯ ಬಗ್ಗೆ ತಿಳಿಸಿ ಕೊಡುವುದರ ಮೂಲಕ ಅವರನ್ನು ಸಂಘಟನೆಗೆ ಬರಮಾಡಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಅಂಚೆ ನೌಕರರ ಸಂಘದ ಕರ್ನಾಟಕ ವಲಯದ3ನೇ ವರ್ಗದ ವಲಯ ಕಾರ್ಯದರ್ಶಿಗಳಾದ ಖಂಡೋಜಿರಾವ್ ಕರೆ ನೀಡಿದರು.

ರಾಷ್ಟ್ರೀಯ ಅಂಚೆ ನೌಕರರ ಸಂಘ ಮೂರನೇ ವರ್ಗ, ಪೋಸ್ಟ್‍ಮೆನ್ & ಎಂಟಿಎಸ್ ಮತ್ತು ಗ್ರಾಮೀಣ ಅಂಚೆ ನೌಕರರ ಸಂಘದ ಚಿತ್ರದುರ್ಗ ವಿಭಾಗದವತಿಯಿಂದ ಭಾನುವಾರ ನಗರದ ತರಾಸು ರಂಗಮಂದಿರದಲ್ಲಿ ನಡೆದ 35ನೇ ಜಂಟಿ ದೈವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಕಾಲದಲ್ಲಿ ಸರ್ಕಾರದವತಿಯಿಂದ ಏನಾದರೂ ಸೌಲಭ್ಯ ಪಡೆಯಬೇಕಾದರೆ ಸಂಘ ಅಗತ್ಯವಾಗಿತ್ತು. ಇದರ ಮೂಲಕವೇ ಸರ್ಕಾರಕ್ಕೆ ಆಗ್ರಹವನ್ನು ಮಾಡಲಾಗುತ್ತಿತ್ತು, ಇದ್ದಲ್ಲದೆ ನಮ್ಮ ನೌಕರರ ವಿರುದ್ದ ಸರ್ಕಾರ ಏನಾದರೂ ಆದೇಶವನ್ನು ಹೂರಡಿಸಿದರೆ ಅದರ ವಿರುದ್ದವೂ ಸಹಾ ಸಂಘದ ಮೂಲಕ ಹೋರಾಟವನ್ನು ಮಾಡುವುದರ ಮೂಲಕ ಅ ಆದೇಶವನ್ನು ಹಿಂಪಡೆ ಯುವವರೆಗೂ ಹೋರಾಟವನ್ನು ಮಾಡಲಾಗುತ್ತಿತ್ತು ಆ ದಿನಮಾನದಲ್ಲಿ ಸಂಘ, ಸಂಘಟನೆ ಎಂದರೆ ಸರ್ಕಾರವಾಗಲಿ, ಆಡಳಿತ ಮಂಡಳಿಯಾಗಲಿ ಗೌರವವನ್ನು ನೀಡುವುದರ ಮೂಲಕ ನಮ್ಮ ಮನವಿಗೆ ಸ್ಪಂದಿಸುತ್ತಿತ್ತು ಎಂದರು.

ನಮ್ಮ ಕಾಲದಲ್ಲಿ ಸಂಘಟನೆಯನ್ನು ಮಾಡುವುದಕ್ಕಾಗಿ ರಾಜ್ಯವ್ಯಾಪ್ತಿ ಪ್ರವಾಸವನ್ನು ಮಾಡುವುದರ ಮೂಲಕ ಸಂಘಟನೆಯನ್ನು ಮಾಡಲಾಗುತ್ತಿತ್ತು ಇದ್ದಲ್ಲದೆ ಜಿಲ್ಲಾವಾರು ಸಮ್ಮೇಳನವನ್ನು ಮಾಡುವುದರ ಮೂಲಕ ಸಂಘಟನೆಯನ್ನು ಮಾಡಲಾಗುತ್ತಿತ್ತು. ಈ ರೀತಿಯಾದ ಸಮ್ಮೇಳನವನ್ನು ಮಾಡಿದಾಗ ಸಾವಿರಾರು ಸಂಖ್ಯೆಯಲ್ಲಿ ಸಿಬ್ಬಂದ್ದಿಗಳು ಭಾಗವಹಿಸುತ್ತಿದ್ದರು. ಆದರೆ ಇಂದಿನ ದಿನಮಾನದಲ್ಲಿ ಇಲಾಖೆಗೆ ಹೊಸದಾಗಿ ಕೆಲಸಕ್ಕೆ ಸೇರಿರುವ ಯುವ ಜನತೆಗೆ ಸಂಘ, ಸಂಘಟನೆ ಎಂದರೆ ಏನು ಎಂಬುದರ ಬಗ್ಗೆ ತಿಳಿದಿಲ್ಲ, ಸಂಘ ಎಂದರೆ ಏನು ಎಂದು ಪ್ರಶ್ನೆ ಮಾಡಿ ಅದರಿಂದ ಏನು ಉಪಯೋಗ ಎನ್ನುತ್ತಿದ್ದಾರೆ. ಆದರೆ ಕೆಲಸದಲ್ಲಿ ಏನಾದರೂ ತೊಂದರೆಯಾದಾಗ ಸಂಘದ ಮೂಲಕ ಹೋದರೆ ಸಮಸ್ಯೆಯನ್ನು ಶೀಘ್ರವಾಗಿ ಇತ್ಯರ್ಥ ಮಾಡಲು ಸಾಧ್ಯವಾಗುತ್ತದೆ ಎಂಬ ಅರಿವು ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜ ಸೇವಕರಾದ ಶ್ರೀಮತಿ ವೀಣಾ ಮಾತನಾಡಿ, ಚಿತ್ರದುರ್ಗದಲ್ಲಿ ಓಳ್ಳೆಯ ಸಂಘಟನೆ ಇದೆ. ಇದರಿಂದ ನಿಮ್ಮ  ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ, ನಿಮ್ಮ ಸಂಘದಲ್ಲಿನ ಸದಸ್ಯರಿಗೆ ಉತ್ತಮವಾದ ಸೌಲಭ್ಯವನ್ನು ನೀಡಿ, ಮಕ್ಕಳ ಶಿಕ್ಷಣಕ್ಕೆ ಸಹಾಯವನ್ನು ಮಾಡಿ, ವ್ಯವಹಾರವನ್ನು ಮಾಡುವವರಿಗೆ ಸಾಲದ ರೂಪದಲ್ಲಿ ಸಹಾಯವನ್ನು ಮಾಡುವುದರ ಮೂಲಕ ಅವರ ಆರ್ಥಿಕ ಪ್ರಗತಿಗೆ ಕಾರಣರಾಗಿ ಎಂದು ಕರೆ ನೀಡಿದರು.

ಅಂಚೆ ಅಧೀಕ್ಷಕರಾದ ಕೆ.ಆರ್. ಉಷಾ ದೈವಾರ್ಷಿಕ ಸಮ್ಮೇಳನವನ್ನು ಉದ್ಘಾಟನೆ ಮಾಡಿದರು. ರಾಷ್ಟ್ರೀಯ ಅಂಚೆ ನೌಕರರ ಸಂಘ, 3ನೇ ವರ್ಗ, ಅಧ್ಯಕ್ಷರಾದ ಟಿ.ಎಸ್.ಶಿವಮೂರ್ತಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು. 4ನೇ ವರ್ಗದ ಅಧ್ಯಕ್ಷರಾದ ಸತೀಶ್  ಸಹಾಯಕ ಜನರಲ್ ಸೆಕ್ರೆಟರಿ ಹೆಚ್, ಚಿತ್ರಶೇಖರ್, ಅಧ್ಯಕ್ಷರಾದ ಕೆ.ಟಿ. ತಿಮ್ಮಾರೆಡ್ಡಿ (ಕರೀಕೆರೆ) ರಾಷ್ಟ್ರೀಯ ಅಂಚೆ ನೌಕರರ ಸಂಘದ ವಲಯ ಕಾರ್ಯದರ್ಶಿ ಎಂ.ಪಿ. ಚಿತ್ರಸೇನ, 4ನೇ ವರ್ಗದ ಕರ್ನಾಟಕ ವಲಯದ ಸಂಘಟನಾ ಕಾರ್ಯದರ್ಶಿ, ಮೈಲನಹಳ್ಳಿ ನಾಗರಾಜ್.ಎಂ.ಐ. ವಿಭಾಗೀಯ ಕಾರ್ಯದರ್ಶಿ ಎನ್.ಎ.ಶ್ರೀನಿವಾಸ್, ಸಹ ಕಾರ್ಯದರ್ಶಿ ಮಾರುತಿ ಆರ್, ಖಂಜಾಚಿ ರಾಜೇಶ್ವರಿ ಟಿ., ರಾಷ್ಟ್ರೀಯ ಅಂಚೆ ನೌಕರರ ಸಂಘದ ಅಧ್ಯಕ್ಷರಾದ ಮಂಜುನಾಥ್, ಕಾರ್ಯದರ್ಶಿ ಪ್ರೇಮ ಕುಮಾರ್ ಚಾರಿ, ಸಹ ಕಾರ್ಯದರ್ಶಿ ಶಶಿಕಾಂತ ಯಾದವ್, ಖಂಜಾಚಿ ಶ್ರೀನಿವಾಸ್ ಮೂರ್ತಿ, ಗ್ರಾಮೀಣ ಅಂಚೇ ನೌಕರರ ಸಂಘದ ಅಧ್ಯಕ್ಷರಾದ ಅಜಯ್ ಕುಮಾರ್, ಕಾರ್ಯದರ್ಶಿ ಪಾಂಡುರಂಗರೆಡ್ಡಿ, ಸಹ ಕಾರ್ಯದರ್ಶಿ ನಂದಿನಿ, ಖಂಜಾಚಿ ರಾಜು ಭಾಗವಹಿಸಿದ್ದರು.

ಈ ಸಮ್ಮೇಳನದಲ್ಲಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನೌಕರರಿಗೆ ಹಾಗೂ 2023-24 ನೇ ಇಸವಿಯಲ್ಲಿ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಡ್ತಿ ಹೊಂದಿದ ನೌಕರರನ್ನು ಸನ್ಮಾನಿಸಲಾಯಿತು.

 

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment