ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನ ಸಂಘ (ರಿ.), ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಸುದ್ದಿಒನ್,
ವಿಜ್ಞಾನಿಗಳು, ಭೂಮಿಯ ರಚನೆಯ ಸಂದರ್ಭದಲ್ಲಿ ಉಷ್ಣತೆ ಕಡಿಮೆಯಾಗಿ ಸುತ್ತ ದಟ್ಟ ಮೋಡಗಳು ಹುಟ್ಟಿಕೊಂಡವು. ಈ ಮೋಡಗಳಿಂದ ಭೂಮಿಯ ಮೇಲೆ ಧಾರಾಕಾರವಾಗಿ ಮಳೆಸುರಿಯಿತು. ಆದರೂ ಭೂಮಿಯ ಮೇಲ್ಮೈ ಉಷ್ಣತೆ ಇಳಿಯಲೇ ಇಲ್ಲ , ಮತ್ತೆ ಅದೇ ನೀರು ಆವಿಯಾಗಿ ವಾತಾವರಣ ಸೇರುತ್ತಿತ್ತು. ಹಲವಾರು ವರ್ಷಗಳ ಈ ಕಾರ್ಯದಿಂದ ಭೂಮಿ ಅಂತಿಮವಾಗಿ ತಣ್ನಘಾಗಿರಬೇಕು ಎಂಬ ಸಿದ್ಧಾಂತ ನಿರೂಪಿಸಿದ್ದಾರೆ. ಭೂಮಿಯ ತಗ್ಗು ಹಾಗೂ ಖಾಲಿ ಪ್ರದೇಶಗಳಲ್ಲಿ ಭಾರಿ ಮಳೆ ನೀರು ತುಂಬಿಕೊಂಡಿತು. ಕೆಳಗಿನ ನಡುಪದರದ ಚಲನೆಗಳಿಂದಾಗಿ ಖಂಡಗಳು ಜರುಗಿದಾಗ ಹೆಚ್ಚು ನೀರು ಈ ಪ್ರದೇಶಗಳನ್ನು ಅಕ್ರಮಿಸಿಕೊಂಡು ಈಗ ಕಾಣುವ ಸಾಗರಗಳು ಮತ್ತು ಸಮುದ್ರಗಳು ಸುಮಾರು 500 ರಿಂದ 1000 ದಶಲಕ್ಷ ವರ್ಷಗಳ ಹಿಂದೆ ರೂಪಗೊಂಡಿರಬೇಕೆಂದು ವಿಜ್ಞಾನಿಗಳ ಅಧ್ಯಾಯನದಿಂದ ತಿಳಿಯಲಾಗಿದೆ. ನದಿಗಳಲ್ಲಿ ಪತ್ತೆಯಾದ ಖನಿಜಗಳನ್ನು ಆಧರಿಸಿ ವಯಸ್ಸನ್ನು ಊಹಿಸಲಾಗಿದೆ.
ಭೂಮಿಯ ಮುಕ್ಕಾಲು ಭಾಗ ನೀರಿನಿಂದ ಆವೃತವಾಗಿದೆ. ಸಮುದ್ರ ನದಿ-ಸರೋವರಗಳು ಈ ನೀರಿನ ಅಂಶಗಳು. ಪ್ರಪಂಚದಲ್ಲಿ ಅತಿದೊಡ್ಡ ಸಾಗರವೆಂದರೆ ಫೆಸಿಪಿಕ್ ಇದರ ಒಟ್ಟು ವಿಸ್ತೀರ್ಣ ಸುಮಾರು 166 ದಶಲಕ್ಷ ಚದರ ಕಿ.ಮೀ.ಗಳು ಮತ್ತು 82 ದಶಲಕ್ಷ ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಅಟ್ಲಾಂಟಿಕ್ ಸಾಗರಕ್ಕೆ ಎರಡನೇ ಸ್ಥಾನ. ಮೂರನೆಯ ಅತಿ ದೊಡ್ಡ ಸಾಗರವೇ ಹಿಂದೂಮಹಾಸಾಗರ, ಅತಿ ಸಣ್ಣ ಸಾಗರ ಅರ್ಕ್ಟಿಕ್ ಸಾಗರ, ಇದರ ವಿಸ್ತೀರ್ಣ 12 ದಶಲಕ್ಷ ಚದರ ಕಿ.ಮೀ.ಗಳು.
ಹಿಂದೂ ಮಹಾಸಾಗರ, ಪೆಸಿಫಿಕ್ ಸಾಗರ ಮತ್ತು ಅಟ್ಲಾಂಟಿಕ್ ಸಾಗರ ಕೊನೆಗಳು ಒಂದಾಗಿ ಅಂಟಾರ್ಟಿಕ್ ಸಾಗರ ಎಂದು ಹೆಸರಿಸಲಾಗಿದೆ. ಸಮುದ್ರಗಳ ಆಳವನ್ನು ಸಂಶೋಧಿಸಿದರೆ ವೈವಿಧ್ಯಮಯ ಭೂಭಾಗಳು ಗೋಚರವಾಗುತ್ತವೆ. ಕೆಲವು ಕಡೆ ಪರ್ವತ, ಕಣಿವೆ, ಅಗ್ನಿಪರ್ವತ ಹಾಗೂ ಕಂದಕಗಳು ಸಮುದ್ರದ ಅಂತರಾಳದಲ್ಲಿವೆ. ಫಲಕಗಳ ಸ್ಥಾನಪಲ್ಲಟದಿಂದ ಸಮುದ್ರದ ಆಳದಲ್ಲಿ ಪರ್ವತಶ್ರೇಣಿಗಳೂ ಇವೆ. ಈ ಶ್ರೇಣಿಗಳು ಉಳಿದ ಸಮುದ್ರಮಟ್ಟಕ್ಕಿಂತ ಹಲವು ಸಾವಿರ ಮೀಟರ್‌ಗಳಷ್ಟು ಎತ್ತರಕ್ಕೆ ತಲೆಯೆತ್ತಿರುವುದೂ ಇದೆ. ಮಧ್ಯ ಅಟ್ಲಾಂಟಿಕ್ ಪರ್ವತ ಶ್ರೇಣಿ ಸುಮಾರು 15,000 ಕಿ.ಮೀ. ಉದ್ದವಿದೆ. ಇದು ಅಂಡೀಸ್ ಪರ್ವತ ಶ್ರೇಣಿಗಿಂತ ಉದ್ದ , ಅಟ್ಲಾಂಟಿಕ್ ಸಾಗರದಲ್ಲಿರುವ ಶ್ರೇಣಿ ಆರ್ಕಿಟಿಕ್‌ನಿಂದ ಅಂಟಾರ್ಟಿಕ್‌ನವರೆಗೂ ವಿಸ್ತರಿಸಿದೆ. ಅಗ್ನಿಪರ್ವಗಳು ಸ್ಫೋಟಿಸಿದ್ದರಿಂದ ಈ ಶ್ರೇಣಿಗಳು ರಚನೆಗೊಂಡಿರಬಹುದೆಂದು ಅಂದಾಜಿಸಲಾಗಿದೆ. ಇನ್ನೂ ಕಂದಕಗಳನ್ನು ಫೆಸಿಫಿಕ್ ಸಾಗರ ಮತ್ತು ಹಿಂದೂ ಮಹಾಸಾಗರದ ಈಶಾನ್ಯ ಭಾಗದಲ್ಲಿ ನೋಡಬಹುದು. ಈ ಭಾಗವನ್ನು ಸಮುದ್ರದ ಅತಿ ಆಳ ಎಂದು ಪರಿಗಣಿಸಲಾಗಿದೆ. ಮೆರೀನಾ ಬೆಂಚ್‌ನಲ್ಲಿರುವ 11,034 ಮೀ. ಆಳದ ಕಂದಕ ದಾಖಲೆಗೆ ಸಿಕ್ಕಿರುವ ಆಳದ ಪ್ರದೇಶ.
ಸಾಗರಗಳನ್ನು ಸೇರುವ ಬಹುಭಾಗ ನದಿಗಳು ತಂದ ಮರಳು ಮತ್ತು ಮಣ್ಣು ಇವುಗಳಿಂದ ಆವೃತವಾಗಿದೆ. ಕೆಲವು ಕಡೆ ಗಂಧಕ ಇನ್ನಿತರ ಖನಿಜ ಲವಣಗಳನ್ನು ಸೂಸುವ ಬಿಸಿ ಬುಗ್ಗೆಗಳಿವೆ. ಈ ಲವಣಗಳಲ್ಲಿ ಉಪ್ಪಿನ ಅಂಶ ಹೆಚ್ಚಿರುವುದರಿಂದ ಸಮುದ್ರದ ನೀರು ಉಪ್ಪಾಗಿರುತ್ತದೆ. ಸಾಗರದ ತಡಿಯ ಮಣ್ಣು ಮೃದುವಾಗಿದ್ದು ಸುಣ್ಣದ ಚಿಪ್ಪು, ಸತ್ತ ಚಿಕ್ಕಪುಟ್ಟ ಸಮುದ್ರ ವಾಸಿಗಳ ಅಸ್ಥಿಪಂಜರಗಳಿಂದ ರೂಪುಗೊಂಡಿದೆ. ನೀರಿನ ಒತ್ತಡ ಮತ್ತು ಕಾಲ ಸರಿದಂತೆ ಈ ಗಸಿಗಳು ಕ್ರಮೇಣ ಗಟ್ಟಿ ಕಲ್ಲುಗಳಾಗುವ ಸಾಧ್ಯತೆಗಳಿವೆ.
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನ ಸಂಘ (ರಿ.), ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.








