ದೆಹಲಿ.ಜುಲೈ.31: 2026ರ ಎರಡನೇ ಹಾಗೂ ವರ್ಷದ ಕೊನೆಯ ಸೂರ್ಯಗ್ರಹಣವು ಆಗಸ್ಟ್ 12 ರಂದು ಸಂಭವಿಸಲಿದೆ. ಜ್ಯೋತಿಷ್ಯ ಹಾಗೂ ಖಗೋಳಶಾಸ್ತ್ರದ ದೃಷ್ಟಿಯಿಂದ ಈ ಗ್ರಹಣವು ಅತ್ಯಂತ ಮಹತ್ವದ್ದಾಗಿದ್ದು, ಇದು ಸಂಪೂರ್ಣ ಸೂರ್ಯಗ್ರಹಣ (ಖಾಗ್ರಾಸ ಸೂರ್ಯಗ್ರಹಣ) ಆಗಿರಲಿದೆ.
ಈ ಸೂರ್ಯಗ್ರಹಣದ ಸಮಯ, ಭಾರತದಲ್ಲಿ ಇದರ ಗೋಚರತೆ, ಸೂತಕ ಕಾಲ ಹಾಗೂ ದ್ವಾದಶ ರಾಶಿಗಳ ಮೇಲಾಗುವ ಪ್ರಭಾವದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಗ್ರಹಣದ ದಿನಾಂಕ ಮತ್ತು ಸಮಯ
ಭಾರತೀಯ ಕಾಲಮಾನದ (IST) ಪ್ರಕಾರ, ಈ ಸೂರ್ಯಗ್ರಹಣವು 2026ರ ಆಗಸ್ಟ್ 12 ರ ರಾತ್ರಿ 11:17 ಕ್ಕೆ ಪ್ರಾರಂಭವಾಗಿ, ಆಗಸ್ಟ್ 13 ರ ಬೆಳಿಗ್ಗೆ 04:25 ಕ್ಕೆ ಮುಕ್ತಾಯಗೊಳ್ಳಲಿದೆ. ಈ ಗ್ರಹಣದ ಒಟ್ಟು ಅವಧಿ ಸುಮಾರು 5 ಗಂಟೆ 8 ನಿಮಿಷಗಳು.
ಭಾರತದಲ್ಲಿ ಗೋಚರಿಸುತ್ತದೆಯೇ? ಸೂತಕ ಕಾಲ ಅನ್ವಯವೇ?
ಈ ಸೂರ್ಯಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿಯ ವೇಳೆಯಲ್ಲಿ ಸಂಭವಿಸುವುದರಿಂದ ಭಾರತದಲ್ಲಿ ಗೋಚರಿಸುವುದಿಲ್ಲ.
ಸೂತಕ ಕಾಲ: ಸಾಮಾನ್ಯವಾಗಿ ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಸೂತಕ ಕಾಲ ಪ್ರಾರಂಭವಾಗುತ್ತದೆ. ಆದರೆ, ಈ ಗ್ರಹಣವು ಭಾರತದಲ್ಲಿ ಕಾಣಿಸದಿರುವುದರಿಂದ ಯಾವುದೇ ಸೂತಕ ಕಾಲ ಅಥವಾ ಧಾರ್ಮಿಕ ನಿಯಮಗಳು ಭಾರತದಲ್ಲಿ ಅನ್ವಯಿಸುವುದಿಲ್ಲ. ದೇವಸ್ಥಾನಗಳ ಬಾಗಿಲು ಮುಚ್ಚುವುದು ಅಥವಾ ಶುಭ ಕಾರ್ಯಗಳನ್ನು ನಿಲ್ಲಿಸುವ ಅಗತ್ಯವಿರುವುದಿಲ್ಲ.
ಎಲ್ಲೆಲ್ಲಿ ಕಾಣಿಸಲಿದೆ?
ಇದು ಖಾಗ್ರಾಸ ಸೂರ್ಯಗ್ರಹಣವಾಗಿರುವುದರಿಂದ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಮರೆಮಾಡಲಿದ್ದಾನೆ. ಪರಿಣಾಮವಾಗಿ ಕೆಲವು ದೇಶಗಳಲ್ಲಿ ಕೆಲ ನಿಮಿಷಗಳ ಕಾಲ ಹಗಲಿನ ವೇಳೆಯಲ್ಲೇ ಕತ್ತಲು ಆವರಿಸಲಿದೆ.
ಗೋಚರಿಸುವ ಪ್ರದೇಶಗಳು: ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್, ಉತ್ತರ ಸ್ಪೇನ್, ಆರ್ಕ್ಟಿಕ್ ಪ್ರದೇಶ, ಪೋರ್ಚುಗಲ್‌ನ ಈಶಾನ್ಯ ಭಾಗ ಹಾಗೂ ರಷ್ಯಾದ ಉತ್ತರ ಭಾಗಗಳಲ್ಲಿ ಈ ಸೂರ್ಯಗ್ರಹಣ ಸ್ಪಷ್ಟವಾಗಿ ಕಾಣ ಸಿಗಲಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










