ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಜೋಡಿಹಕ್ಕಿ ಧಾರಾವಾಹಿ ಖ್ಯಾತಿಯ ತಾಂಡವ್ ರಾಮ್ ತಮ್ಮ ಸಿನಿಮಾ ನಿರ್ದೇಶಕರ ಮೇಲೆಯೇ ಗುಂಡು ಹಾರಿಸಿದ್ದ ಘಟನೆ ಎಲ್ಲರಿಗೂ ಗೊತ್ತಿದೆ. ತಾಂಡವದ ರಾಮ್ ನನ್ನು ಬಂಧಿಸಿ ಈಗಾಗಲೇ ವಿಚಾರಣೆ ಕೂಡ ನಡೆಯುತ್ತಿದೆ. ಇದರ ನಡುವೆ ಎಫ್ಐಆರ್ ದಾಖಲಾಗಿದ್ದು, ಶೂಟ್ ಮಾಡಲು ಏನೆಲ್ಲಾ ಕಾರಣವಿತ್ತು ಎಂಬುದನ್ನು ನಿರ್ದೇಶಕ ಭರತ್ ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ದೇವನಾಂಪ್ರಿಯ ಸಿನಿಮಾ ಆರಂಭವಾಗಿ ಎರಡು ವರ್ಷಗಳಾಗಿವೆ. ಆದರೆ ನಟಿಯ ಆಯ್ಕೆ ಮಾತ್ರ ಇನ್ನು ಆಗಿರಲಿಲ್ಲ. ಅದಕ್ಕೆ ತಾಂಡವ ರಾಮ್ ನನ್ನ ಮೇಲೆ ಕೋಪಗೊಂಡಿದ್ದರು. ಎರಡು ಬಾರಿ ಇದೇ ವಿಚಾರಕ್ಕೆ ಗಲಾಟೆಯನ್ನು ಮಾಡಿಕೊಂಡಿದ್ದರು. ಅಲ್ಲದೆ ಸಿನಿಮಾ ತಂತ್ರಜ್ಞರಿಂದ ನಾನು ಕಮಿಷನ್ ಪಡೆದಿದ್ದೇನೆ ಎಂಬ ಆರೋಪವನ್ನು ಮಾಡಿದ್ದರು. ಬಳಿಕ ತಾನು ಖರ್ಚು ಮಾಡಿದ ಆರು ಲಕ್ಷ ಹಣವನ್ನು ವಾಪಾಸ್ ನೀಡುವಂತೆ ತಾಂಡವ್ ರಾಮ್ ಪಟ್ಟು ಹಿಡಿದರು. ಅದರ ಸಲುವಾಗಿಯೇ ಗುಂಡು ಹಾರಿಸುವುದಕ್ಕೂ ಮುನ್ನ ಪ್ರೊಡ್ಯೂಸರ್ ಕಚೇರಿಯಲ್ಲಿ ಸಭೆ ಸೇರಿದ್ದೆವು.
ಚಂದ್ರಾಲೇಔಟ್ ನಲ್ಲಿ ನಿರ್ಮಾಪಕರ ಕಚೇರಿಯಲ್ಲಿ ಸಭೆ ಸೇರಿದೆವು. ಅಲ್ಲಿಯೂ ತಮ್ಮ ಆರು ಲಕ್ಷ ಹಣವನ್ನು ವಾಪಸ್ ನೀಡುವಂತೆ ಕೇಳಿದರು. ಈ ವಿಚಾರಕ್ಕೆ ಗಲಾಟೆಯನ್ನು ಮಾಡಿದರು. ಮಾತಿಗೆ ಮಾತು ಬೆಳೆದು ಅವರು ತಮ್ಮ ಬಳಿಯಿದ್ದ ಪಿಸ್ತೂಲ್ ನಲ್ಲಿ ಗುಂಡು ಹಾರಿಸಿದರು. ನಾನು ತಕ್ಷಣ ಬಾಗಿದೆ. ಗುಂಡು ಸೀಲಿಂಗ್ ಫ್ಯಾನ್ ಗೆ ತಗುಲಿತು. ಇಲ್ಲವಾಗಿದ್ದರೆ ಆ ಗುಂಡು ನನ್ನ ತಲೆಗೆ ಬಿದ್ದು, ಇಷ್ಟೊತ್ತಿಗೆ ಪ್ರಾಣವೇ ಹೋಗಬೇಕಿತ್ತ’ ಎಂದು ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆ. ಸದ್ಯ ಚಂದ್ರಾಲೇಔಟ್ ಪೊಲೀಸರು ತಾಂಡವ್ ರಾಮ್ ನ ವಿಚಾರಣೆ ನಡೆಸುತ್ತಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್