ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. ಆ. 29 : ನಗರದ ಆನೆ ಬಾಗಿಲ ಬಳಿ ಇರುವ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ನಂಜನ ಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಶಾಖಾಮಠವಾದ, ಚಿತ್ರದುರ್ಗದ ಶ್ರೀಗುರುರಾಯರ ಮಠದಲ್ಲಿ ಶ್ರೀ ಸುಬುಧೇಂದ್ರತೀರ್ಥ ಮಹಾಸ್ವಾಮಿಗಳವರ ಆಜ್ಞಾನುಸಾರವಾಗಿ, ಶ್ರೀ ಗುರುರಾಯರ 355ನೇ ಆರಾಧನಾ ಮಹೋತ್ಸವದ ಅತ್ಯಂತ ವೈಭವದಿಂದ ಇಂದಿನಿಂದ ಪ್ರಾರಂಭವಾಯಿತು.
ಶ್ರೀಮದ್ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಚಿತ್ರದುರ್ಗದ ಬೃಂದಾವನ ದಿವ್ಯಸನ್ನಿಧಾನದ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಶ್ರೀ ಗುರುರಾಯರ 355ನೇ ಆರಾಧನಾ ಮಹೋತ್ಸವ ದಲ್ಲಿ ಪ್ರಾರಂಭ ದಿನವಾದ ಇಂದು ಶ್ರೀಪರಾಭವನಾಮ ಸಂವತ್ಸರ, ಶ್ರಾವಣಮಾಸ, ಕೃಷ್ಣಪಕ್ಷ, ಪ್ರತಿಪದ. ಶ್ರೀಗುರುರಾಯರ 355ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆಯಾಗಿದ್ದು, ರಾಯರ ಬೃಂದಾ ವನವನ್ನು ವಿವಿಧ ರೀತಿಯ ಹೊಗಳಿಂದ ಹಾಗೂ ಕೇದಿಗೆಯಿಂದ ಅಲಂಕಾರವನ್ನು ಮಾಡಲಾಗಿತ್ತು.
ಇಂದು ಬೆಳಿಗ್ಗೆ ಸುಪ್ರಬಾತ ನಿರ್ಮಾಲ್ಯ ವಿಸರ್ಜನೆ ಅಷ್ಟೋತ್ತರದೊಂದಿಗೆ ಕ್ಷೇರಾಭೀಷೇಕ ಸಹಿತ ಪಂಚಾಮೃತ ಪಾದಪೂಜೆಯೊಂದಿಗೆ ಕನಕಾಭೀಷೇಕ ಅರ್ಚನೆ ಹಸ್ತೋದಕ ಕಾರ್ಯಕ್ರಮ ನಡೆಯಿತು. ಇದ್ದಲ್ಲದೆ ರಾಯರ ಮಠವನ್ನು ಸಹಾ ವಿವಿಧ ರೀತಿಯ ಹೊಗಳಿಂದ ಅಲಂಕಾರವನ್ನು ಮಾಡಲಾಗಿದ್ದು, ಮೂರು ದಿನಗಳ ಕಾಲವೂ ಸಹಾ ವಿವಿಧ ರೀತಿಯ ಅಲಂಕಾರವನ್ನು ಮಾಡಲಾಗುವುದು. ರಾಯರ ಮಠಕ್ಕೆ ಆಗಮಿಸಿದ ಭಕ್ತಾಧಿಗಳು ವಿವಿಧ ಸೇವಾ ಕಾರ್ಯಕ್ರಮಗಳಲ್ಲಿ ಸೇವಾಭಾಗಿಗಳಾಗಿ, ರಾಯರ ದರ್ಶನವನ್ನು ಪಡೆದು ಪ್ರಸಾದ ಹಾಗೂ ಮಂತ್ರಾಕ್ಷತೆಗಳನ್ನು ಸ್ವೀಕರಿಸಿ, ಶ್ರೀಗುರುರಾಯರ ಕೃಪಾನುಗ್ರಹಕ್ಕೆ ಪಾತ್ರರಾಗಿದ್ದಾರೆ.
ಶ್ರೀ ಗುರುರಾಯರ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ರಾಯರ ಮಠದಲ್ಲಿ ಈ ಮೂರು ದಿನಗಳ ಕಾಲ ನಡೆಯುವ ಮಹೋತ್ಸವದಲ್ಲಿ ಬಳಸುವ ದವಸ ಧಾನ್ಯಗಳ ಪೂಜೆಯನ್ನು ನರೇವೇರಿಸಲಾಯಿತು. ಬೆಳಿಗ್ಗೆ ಯರ್ಜುವೇದ ನಿತ್ಯ ನೂತನ ಉಪಾಕರ್ಮ, ಸತ್ಯನಾರಾಯಣ ಪೂಜೆ ಸಂಜೆ ಗೋಪೂಜೆ ಧ್ವಜಾರೋಹಣ ಧನ ಧಾನ್ಯ ಲಕ್ಷ್ಮೀ ಪೂಜೆಯನ್ನು ನಡೆಸಲಾಯಿತು.
ಶನಿವಾರ ಸಂಜೆ ಬೆಂಗಳೂರಿನ ಹೊಸಕೆರೆಹಳ್ಳಿಯ ಕಲಾವಿದರಾದ ನಾಟ್ಯಶ್ರೀ ಭರತನಾಟ್ಯ ಶಾಲೆಯವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
















