Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಾಸಕ ವಿಜಯಾನಂದ ಕಾಶಪ್ಪನವರಿಗೆ ಅಂತ್ಯಕಾಲ ಬಂದಿದೆ : ಬಸವರಾಜ್ ಯತ್ನಾಳ್ ಗರಂ

---Advertisement---

ವಿಜಯಪುರ: ಇತ್ತೀಚೆಗೆ ಶಾಸಕ ವಿಜಯಾನಂದ ಕಾಶಪ್ಪನವರ್, ಬಸವ ಮೃತ್ಯುಂಜಯ ಶ್ರೀಗಳ ವಿರುದ್ಧ ರೊಚ್ಚಿಗೆದ್ದಿದ್ದರು.‌ ಶ್ರೀಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕಾಶಪ್ಪನವರ್ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ. ಜಯ ಮೃತ್ಯುಂಜಯ ಶ್ರೀಗಳ ಪರವಾಗಿ ಬ್ಯಾಟ್ ಬೀಸಿದ್ದಾರೆ. ಕಾಶಪ್ಪನವರ ಅಂತ್ಯ ಕಾಲ ಬಂದಿದೆ ಎಂದಿದ್ದಾರೆ.

ಮಾಧ್ಯಮದವರ ಜೊತೆಗೆ ಮಾತನಾಡುತ್ತಾ, ಯಾವಾಗಲೂ ದೀಪ ಮುಗಿಯುವಾಗ ಜೋರಾಗಿ ಉರಿಯುತ್ತಲ್ವಾ, ಆತನು ಹಾಗೇ. ಇಡೀ ಸಮಾಜವೇ ಆತನ ಜೊತೆಗೆ ನಿಲ್ಲಲು. ತಲೆ‌ಕೆಡಿಸಿಕೊಳ್ಳಲ್ಲ ಎಂಬ ಮಾತನ್ನ ಹೇಳಿದ್ದಾರೆ. ಹಾಗೇ ಸ್ವಾಮೀಜಿ ನಮ್ಮ ಸಮಾಜಕ್ಕೋಸ್ಕರ ಕೆಲಸ ಮಾಡ್ತಾ ಇದಾರೆ ಎಂದು ಹೊಗಳಿದ್ದಾರೆ. ಅವರೇನು ಯಾವುದೇ ಪಕ್ಷದವರಲ್ಲ. ಆದರೆ ನಮ್ಮ ಸಮುದಾಯಕ್ಕೋಸ್ಕರ ಹೋರಾಟ ಮಾಡ್ತಾ ಇದಾರೆ‌. ಈ ಸಮಾಜದವರು ಹಿಂದೆ ಇರುವಂತೆ ನಾವೂ ಹಿಂದೆ ಇದ್ದೀವಿ ಅಷ್ಟೆ‌

ಇನ್ನು ಯತ್ನಾಳ್ ಮನೆಗೆ ಹೋಗಿ ಸ್ವಾಮಿಗಳು ಕೂರ್ತಾರೆ ಎಂಬ ವಿಚಾರಕ್ಕೆ ಮಾತನಾಡಿ, ಯತ್ನಾಳ್ ಯಾವ ಜಗದ್ಗುರುಗಳ ಕಡೆಯಿಂದಾನೂ ಏನು ತಗೊಂಡಿಲ್ಲ. ಯಾವ ಸ್ವಾಮಿಗಳಿಗೂ ನಾನು ಕಾಲು ಮುಗಿದು ಮಂತ್ರಿ ಮಾಡಿ ಅಂತ ಹೇಳಿಲ್ಲ. ಕೆಲವೊಬ್ಬರು ಸ್ವಾಮಿಗಳು ನಮಗೆ ಯೋಗ್ಯ ಎನಿಸುತ್ತದೆ. ಸಿದ್ದಲಿಂಗ ಸ್ವಾಮಿಗಳು ಇನ್ನು ಹಲವರು. ಅವರಿಗಷ್ಟೇ ಕಾಲಿಗೆ ಬೀಳ್ತೀನಿ ಎಂದಿದ್ದಾರೆ.

ಮಾಧ್ಯಮದವರು ಆತನನ್ನ ಯಾಕೆ ಹೈಲೇಟ್ ಮಾಡಕ್ಕತ್ತೀರಾ ಅನ್ನೋದು ತಿಳಿತಿಲ್ಲ. ತೈಲವರ್ಣದ ವಿಭೂತಿಯನ್ನು ಹಣೆಗೆ ಬಳಿದುಕೊಳ್ಳುವ ಅವನೆಂಥಾ ಲಿಂಗಾಯತ..? ತಾನೂ ಕೂಡ ತನ್ನದೇ ಗೋ ಶಾಲೆಯಲ್ಲಿ ತಯಾರಾಗುವ ವಿಭೂತಿಯನ್ನ ಹಚ್ಚಿಕೊಳ್ಳುತ್ತೇನೆ. ಹಚ್ಚಿಕೊಂಡಿರುವ ವಿಭೂತಿ ಯಾರಿಗೂ ಕಾಣಬಾರದು ಎಂದು ತಿರುಗೇಟು ಕೊಟ್ಟಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...