Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ದಾವಣಗೆರೆಗೆ ಬಂದ ಕೆಲವೇ ದಿನಗಳಲ್ಲಿ ಆರೋಪಿಯನ್ನ ಹಿಡಿದ ಶ್ವಾನ.. ಇದರ ವಿಶೇಷತೆ ಕೇಳಿದ್ರೆ ನೀವೂ ಶಾಕ್ ಆಗ್ತೀರ..!

---Advertisement---

 

ದಾವಣಗೆರೆ: ಜಿಲ್ಲೆಯಲ್ಲಂತು ಸದ್ಯಕ್ಕೆ ತಾರಾಳದ್ದೆ ಮಾತು. ಹಾಗಂತ ಯಾವುದೋ ಹುಡುಗಿ ಅಂದ್ಕಿಬೇಡಿ. ಇದು ಪೊಲೀಸ್ ಶ್ವಾನ. ಮೊದಲಿಗೆ ಅದರ ಸದ್ಯದ ಸಾಧನೆ ನೋಡಿಬಿಡಿ. ಕೊಲೆ ಆರೋಪಿಯೊಬ್ಬನನ್ನು ಪತ್ತೆ ಹಚ್ಚಿ ತನ್ನ ಸಾಧನೆ ಮೆರೆದಿದೆ.

ದಾವಣಗೆರೆ ತಾಲೂಕಿನ ಮೆಲ್ಲಶೆಟ್ಟಿಹಳ್ಳಿ ಕ್ರಾಸ್ ಬಳಿ ನರಸಿಂಹ ಎಂಬ 26 ವರ್ಷ ಯುವಕನ ಕೊಲೆಯಾಗಿತ್ತು. ಶ್ವಾನ ತಾರಾಳನ್ನು ಆ ಜಾಗಕ್ಕೆ ಕರೆದೊಯ್ಯಲಾಗಿತ್ತು. ಕೊಲೆಯಾದ ಜಾಗದಿಂದ ಓಡಿದ ತಾರಾ ನಿಂತಿದ್ದು 8 ಕಿಲೋ ಮೀಟರ್ ದೂರದ ರಾಮನಗರದ ಆಂಜನೇಯ ದೇವಸ್ಥಾನದ ಪಕ್ಕದ ಮನೆಯಲ್ಲಿ. ಆ ಮನೆ ಯೋಗೀಶ್ ದಾಗಿತ್ತು. ಕೊಲೆ ಮಾಡಿದ ಆರೋಪಿಯನ್ನು ಕೆಲವೇ ಕ್ಷಣಗಳಲ್ಲಿ ಪತ್ತೆ ಹಚ್ಚಿದ್ದು, ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

ಈ ಶ್ವಾನ ಅತ್ಯಂತ ಸೂಕ್ಷ್ಮಗ್ರಹಿಯಾಗಿದೆ. ಅಮೆರಿಕಾ ಸೇರಿದಂತೆ ಇನ್ನು ಹಲವು ದೇಶಗಳಲ್ಲಿ ಬಳಸುವಂತಹ ವಿಶೇಷ ತಳಿಯಾಗಿದೆ. ಇದಕ್ಕಿನ್ನು 9 ತಿಂಗಳು ಅಷ್ಟೇ. ಬೆಂಗಳೂರಿನ ಆಡುಗೋಡಿಯಲ್ಲಿ ತರಬೇತಿ ಪಡೆದು, ಇತ್ತಿಚೆಗಷ್ಟೇ ದಾವಣಗೆರೆಗೆ ಬಂದಿದೆ. ಈಗಾಗಲೇ 14 ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದೆ. ಈ ಮೂಲಕ ಪೊಲೀಸ್ ಇಲಾಖೆ ಹಾಗೂ ಸ್ಥಳೀಯರ ಮನಸ್ಸನ್ನು ತಾರಾ ಶ್ವಾನ ಸೆಳೆದಿದೆ. ಎಲ್ಲರು ವಾವ್ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...