Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಇಂದು ಸನ್ಮಾನಿತರಾದ ಮಕ್ಕಳು ಮುಂದಿನ ದಿನಗಳಲ್ಲಿ ಸಮಾಜದ ಋಣವನ್ನು ತೀರಿಸಬೇಕು : ಕೆ.ಎಸ್.ನವೀನ್

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜು. 27 : ಇಂದು ಸಮಾಜದವತಿಯಿಂದ ಸನ್ಮಾನಕ್ಕೆ ಒಳಗಾದ ಮಕ್ಕಳು ಮುಂದಿನ ದಿನಮಾನದಲ್ಲಿ ಉತ್ತಮ ಸ್ಥಾನದಲ್ಲಿದ್ದಾಗ ಸಮಾಜದ ಋಣವನ್ನು ತೀರಿಸುವಂತ ಕಾರ್ಯವನ್ನು ಮಾಡಬೇಕಿದೆ. ನೀವು ಸಹಾ ಬೇರೆ ಮಕ್ಕಳಿಗೆ ಶಿಕ್ಷಣದಲ್ಲಿ ನೆರವಾಗುವಂತೆ ಬಿಜೆಪಿಯ ರಾಜ್ಯ ವಕ್ತಾರರು, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಕರೆ ನೀಡಿದರು.

ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಭಾನುವಾರ ನಗರದ ಪಂಚ ಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ನೌಕರರ ಸಮಾವೇಶ, ನಿವೃತ್ತ ನೌಕರರಿಗೆ, ಸಾಧಕರಿಗೆ ಸನ್ಮಾನ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಎರಡು ಪ್ರತಿಭಾನ್ವಿತವಾದ ಮಠಗಳು ಇವೆ ಇವುಗಳು ಶಿಕ್ಷಣ ದಾಸೋಹದಲ್ಲಿ ಉತ್ತಮವಾದ ಕಾರ್ಯವನ್ನು ಮಾಡುತ್ತಿವೆ. ಇದರಲ್ಲಿ ಅಭ್ಯಾಸ ಮಾಡಿದವರು ಈಗ ಉನ್ನತವಾದ ಹುದ್ದೆಯಲ್ಲಿ ಇದ್ದು ಉತ್ತಮ ವ್ಯಕ್ತಿಗಳಾಗಿದ್ದಾರೆ. ಇದ್ದಲ್ಲದೆ ರಾಜಕೀಯವಾಗಿಯೂ ಸಹಾ ಚಿತ್ರದುರ್ಗ ತನ್ನದೆ ಆದ ಇತಿಹಾಸವನ್ನು ಹೊಂದಿದ್ದಾರೆ, ಭ್ರಷ್ಠಾಚಾರ ರಹಿತವಾದ ಅಧಿಕಾರವನ್ನು ನಡೆಸಿದ ಎಸ್,ನಿಜಲಿಂಗಪ್ಪ ಹೆಸರಾಗಿದ್ದಾರೆ. ತಮ್ಮ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಆಧಿಕಾರವನ್ನು ನಡೆಸಿದ ಕೀರ್ತಿ ಅವರಿಗೆ ಇದೆ ಎಂದರು.

ಚಿತ್ರದುರ್ಗ ಜಿಲ್ಲೆ ಧಾರ್ಮಿಕವಾಗಿ ರಾಜಕೀಯವಾಗಿ ಉತ್ತಮಮಾದ ಹೆಸರನ್ನು ಮಾಡಿದೆ. ಈ ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಸನ್ಮಾನ ಹಾಗೂ ನಿವೃತ್ತ ನೌಕರರಿಗೆ ಗೌರವ ಮತ್ತು ಸಾಧಕರನ್ನು ಗುರುತಿಸಿ ಪ್ರಶಂಸಿಸುವುದು ಉತ್ತಮವಾದ ಕೆಲಸವಾಗಿದೆ. ಇದರಲ್ಲಿ ಒಂದೆಡೆ ಬೆಳೆಯುತ್ತಿರುವ ಸಸಿಗಳಿಗೆ ಪ್ರೋತ್ಸಾಹ ನೀಡಿ ನೀರನ್ನು ಎರೆಯುವುದು, ಮತ್ತೊಂದೆಡೆ, ನಿವೃತ್ತ ನೌಕರರಿಗೆ ಸಮಾಜದ ಜೋತೆಯಲ್ಲಿ ಇದ್ದು ಅದಕ್ಕೆ ಮಾರ್ಗದರ್ಶನ ನೀಡುವಂತೆ ಸಂದೇಶವನ್ನು ನೀಡಲಾಗಿದೆ. ಸಮಾಜದ ಮೇಲೆ ಪ್ರೀತಿಯಿಂದ ಇರಬೇಕಿದೆ, ಸಮಾಜ ಸೂರ್ಯನ ರೀತಿಯಲ್ಲಿ ಎಲ್ಲರಿಗೂ ಸಹಾ ಬೆಳಕನ್ನು ನೀಡುವಂತ ಸೂರ್ಯನ ರೀತಿಯಲ್ಲಿ ಇರಬೇಕಿದೆ ಇಂದು ಸಮಾಜ ನಿಮ್ಮನ್ನು ಗುರುತಿಸಿ ಸನ್ಮಾನ ಮಾಡಿದೆ ಇದನ್ನು ನೀವುಗಳು ಮುಂದಿನ ದಿನದಲ್ಲಿ ತೀರಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದಲ್ಲಿ ಯಾವುದೇ ರೀತಿಯ ಭೀನ್ನಾಭೀಪ್ರಾಯಗಳು ಬಾರದ ರೀತಿಯಲ್ಲಿ ಸಂಘವನ್ನು ಉತ್ತಮವಾದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕಿದೆ, ಸಂಘದಲ್ಲಿ ಸಣ್ಣ-ಪುಟ್ಟ ಭೀನ್ನಾಭೀಪ್ರಾಯಗಳು ಇದ್ದಲ್ಲಿ ಅದನ್ನು ಮರೆಯುವುದರ ಮೂಲಕ ಸಂಘವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗಬೇಕಿದೆ. ನಾನು ಸಹಾ ರಾಜ್ಯ ಸಂಘದಲ್ಲಿ ಉತ್ತಮವಾದ ಭಾಂಧವ್ಯವನ್ನು ಹೊಂದಿದ್ದು ಅಲ್ಲಿ ನಡೆಯುವಂತ ಸಭೆಗಳಿಗೆ ಹಾಜರಾಗಿ ಸಲಹೆಗಳನ್ನು ನೀಡಲಾಗುತ್ತದೆ ಎಂದ ಅವರು ನಿಮ್ಮ ಯಾವುದೇ ಸಮಸ್ಯೆಗಳು ಬಂದರ ಸಹಾ ನಿಮ್ಮ ಧ್ವನಿಯಾಗಿ ನಾನು ನಿಲ್ಲುತ್ತೇನೆ ನಿಮ್ಮ ಪರವಾಗಿ ಸದನದ ಒಳಗಡೆ ಹಾಗೂ ಹೊರಗಡೆಯಲ್ಲಿ ಹೋರಾಟವನ್ನು ಮಾಡುತ್ತೇನೆ ಎಂದು ನವೀನ್ ಭರವಸೆಯನ್ನು ನೀಡಿದರು.

ಹಿರಿಯೂರಿನ ಶಿಕ್ಷಣಾಧಿಕಾರಿಗಳಾದ ಸಿ.ಎಂ ತಿಪ್ಪೆಸ್ವಾಮಿರವರು ಉಪನ್ಯಾಸ ನೀಡಿ, ಈ ಸಮಾಜದಲ್ಲಿ ಹುಟ್ಟುವುದು ಒಂದು ಹೆಮ್ಮೆಯಾಗಿದೆ. ಇದರಲ್ಲಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸುವ ಬಸವಣ್ಣ ನಿಡಿದ ವಚನಗಳಲ್ಲಿ ಮಾನವೀಯತೆ, ತತ್ವಗಳು ಅಡಗಿವೆ. ರಾಜರು ತಮ್ಮ ಜಾತಿಯನ್ನು ಉನ್ನತಿಕರಿಸಿಕೊಳ್ಳುವುದಕ್ಕಾಗಿ ಲಿಂಗಾಯತ ವೀರಶೈವವನ್ನು ಅನುಸರಿಸಿದರು. ಸಮುದಾಯದ ಸಂಘಟನೆಯಲ್ಲಿ ಬೇರೆಯವರು ಏನು ಅನ್ನುತ್ತಾರೆ ಎನ್ನದೆ ನಮ್ಮ ಸಮುದಾಯದ ಸಂಘಟನೆಯನ್ನು ನಾವು ಮಾಡಿಕೊಳ್ಳಬೇಕಿದೆ. ನಿಮ್ಮ ಸಂಘ ಬೇರೆಯವರಿಗೆ ಮಾದರಿಯಾಗಬೇಕಿದೆ. ಸಾಮರಸ್ಯ, ಸಹೋದರತೆಯನ್ನು ಮೈಗೂಡಿಸಿಕೊಳ್ಳಬೇಕಿದೆ. ಶಿಕ್ಷಣವನ್ನು ಪಡೆಯುವುದರ ಮೂಲಕ ನಮ್ಮಲ್ಲಿನ ಮೌಢ್ಯತೆಯನ್ನು ಅಳಿಸಬೇಕಿದೆ ಇದರಿಂದ ಪ್ರಗತಿಯನ್ನು ಕಾಣಬೇಕಿದೆ ಎಂದರು.

ಈಗ ಎಲ್ಲಾ ಸಮುದಾಯದರು ಸಹಾ ತಮ್ಮ ಸಮುದಾಯದ ಸಂಘಟನೆಯನ್ನು ಮಾಡುತ್ತಿದ್ದಾರೆ ಇದೇ ರೀತಿಯಲ್ಲಿ ನಮ್ಮ ಸಮುದಾಯ ಸಂಘಟನೆಯನ್ನು ನಾವುಗಳು ಮಾಡಿಕೊಳ್ಳಬೇಕಿದೆ. ಇದಕ್ಕೆ ಹೆದರುವ ಅಗತ್ಯ ಇಲ್ಲ, ಧೈರ್ಯದಿಂದ ಮಾಡಬೇಕಿದೆ, ಇಂದಿನ ದಿನಮಾನದಲ್ಲಿ ಎಲ್ಲಡೆ ಸ್ಪರ್ದೆ ಅನಿವಾರ್ಯವಾಗಿದೆ ಇದಕ್ಕೆ ನಮ್ಮ ಮಕ್ಕಳನ್ನು ಸಹಾ ತಯಾರು ಮಾಡಬೇಕಿದೆ ಈ ಹಿನ್ನಲೆಯಲ್ಲಿ ನಿಮ್ಮ ಸಂಘದಿಂದ ನಮ್ಮ ಮಕ್ಕಳಿಗೆ ಸ್ಪಧ್ಮಾತ್ಮಕವಾಗಿ ಬೇರೆಯವರೊಂದಿಗೆ ಸ್ಪರ್ದೆಯನ್ನು ಮಾಡುವ ಸಲುವಾಗಿ ಅವರಿಗೆ ತರಭೇತಿಯನ್ನು ನೀಡುವ ಕೇಂದ್ರವನ್ನು ತೆರೆಯಲು ಸಂಘ ಮುಂದಾಗಬೇಕಿದೆ ಎಂದು ತಿಪ್ಪೇಸ್ವಾಮಿ ಕರೆ ನೀಡಿದರು.

ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ರಾದ ಪಿ.ಎಂ.ಜಿ.ರಾಜೇಶ್ ಪ್ರಸ್ತಾವಿಕವಾಗಿ ಮಾತನಾಡಿ ಈ ಹಿಂದೆಯೂ ಸಹಾ ನಮ್ಮ ಸಂಘದಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ನಡೆಸಲಾಗುತ್ತಿತ್ತು ಕರೋನ ಬಂದ ಹಿನ್ನಲೆಯಲ್ಲಿ ಅದನ್ನು ನಿಲ್ಲಿಸಲಾಗಿತ್ತು ಆದರೆ ಈಗ ನಮ್ಮ ಸಂಘ ಬಂದ ಮೇಲೆ ಪುನಃ ಪ್ರಾರಂಭ ಮಾಡಲಾಗಿದೆ ಎಂದ ಅವರು, ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ 2024-25 ನೇ ಸಾಲಿನಲ್ಲಿ ಹಾಗೂ ಎಸ್‍ಎಸ್‍ಎಲ್.ಸಿಮತ್ತು ಪಿಯುಸಿ ವ್ಯಾಸಂಗ ಮಾಡಿ ಶೇಕಡಾ 80 & ಅದಕ್ಕಿಂತ ಅಧಿಕ ಅಂಕ ಪಡೆದ ಜಿಲ್ಲಾ ಅನುದಾನಿತ ಮತ್ತು ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗುತ್ತಿದ್ದು ಮೇ.31 2024 ರಿಂದ ಜೂನ್30-2025ರವರೆಗೆ ಈವರೆಗೆ ನಿವೃತ್ತಿಯಾಗಿರುವ ಯಾವುದೇ ಇಲಾಖೆಯ ಸಮುದಾಯದ ನಿವೃತ್ತ ನೌಕರರನ್ನು ಹಾಗೂ ಜಿಲ್ಲೆಯೊಳಗಿನ ವಿಶೇಷ ಸಾಧನೆಗೈದ 5 ಜನ ಸಾಧಕರನ್ನು ಗೌರವಿಸಲಾಗುವುದೆಂದರು

ಜಿಲ್ಲೆಯೊಳಗಿನ ಸಮುದಾಯದ ವಿಶೇಷ ಸಾಧನೆಗೈದ 5 ಜನ ಸಾಧಕರಾದ ಸಚಿನ್ ಕೆ.ಎಲ್. ಕೆ.ಎನ್. ಮಲ್ಲಿಕಾರ್ಜನ್, ಎ.ಎಸ್ ಸತೀಶ್, ಜೆ.ಆರ್.ಶಂಕರಪ್ಪ, ಸಿದ್ದೇಶ ಹಾಗೂ ಟಿ.ಪಿ.ಉಮೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಆಧಿಕಾರಿ ಶ್ರೀಮತಿ ಪುಷ್ಪಲತ ಭಾವಿಮಠ್, ಜಿ.ಪಂ.ಯ ಮುಖ್ಯ ಲೆಕ್ಕಾಧಿಕಾರಿ ಮಧು ಡಿ.ಆರ್, ನಗರಾಭೀವೃದ್ದಿ ಆಯುಕ್ತರಾದ ಸೋಮಶೇಖರ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಬಸವಗೌಡ ಹಾಗೂ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿಗಳಾದ ಬಸವರಾಜು ಕೊಳ್ಳಿಯವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವ ಕುಮಾರ್ ಸ್ವಾಮಿಜಿ, ಹಾಗೂ ದಾವಣಗೆರೆ ವಿರಕ್ತಮಠದ  ಡಾ.ಬಸವ ಪ್ರಭು ಸ್ವಾಮಿಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬಿ.ವಿರೇಶ್ ವಹಿಸಿದ್ದರು.

ಮಾಜಿ ಶಾಸಕರಾದ ಎಸ.ಕೆ.ಬಸವರಾಜನ್, ಜಿಲ್ಲಾ ಕೆ.ಡಿ.ಪಿ ಸದಸ್ಯ ಕೆ.ಸಿ.ನಾಗರಾಜ್, ಕಾಂಗ್ರೆಸ್ ಮುಖಂಡರಾದ ಹನುಮಲಿ ಷಣ್ಮುಖಪ್ಪ, ವೀರಶೈವ ಸಮಾಜದ ಕಾರ್ಯದರ್ಶಿ ಪಿ.ವಿರೇಂದ್ರ ಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಉದ್ಯಮಿಗಳಾದ ಅನಿತ್ ಕುಮಾರ್, ಕೆ.ವಿ.ಎಲ್ ನ ಅಧ್ಯಕ್ಷರಾದ ಸೋಮಶೇಖರಯ್ಯ ತಾಲ್ಲೂಕು ಕೆಡಿಪಿ ಸದಸ್ಯರಾದ ಸಿ.ಬಿ.ನಾಗರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹೆಚ್.ಎಂ.ದ್ಯಾಮಣ್ಣ ಕೊಗುಂಡೆ, ಕೆಇಬಿ ಷಣ್ಮುಖಪ್ಪ, ನಾಗರಾಜಯ್ಯ, ಪ್ರಸನ್ನ ಕುಮಾರ್, ಮಲ್ಲಿಕಾರ್ಜನಯ್ಯ, ಗುರುಮೂರ್ತಿ,ಸೇರಿದಂತೆ ಇತರರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಉಮೇಶ್ ಪತ್ತರ್ ವಚನಗಾಯನ ನಡೆಸಿದರೆ, ನಮೀತಾಶ್ರೀ ಸ್ವಾಗತ ನೃತ್ಯವನ್ನು ಮಾಡಿದರು. ಚನ್ನಬಸಪ್ಪ ಸ್ವಾಗತಿಸಿದರು, ಗೀತಾ ಭರಮಸಾಗರ ಕಾರ್ಯಕ್ರಮ ನಿರೂಪಿಸಿದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment