Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗದಲ್ಲಿ ಆತಂಕ ಸೃಷ್ಟಿಸಿದ ಚಡ್ಡಿ ಗ್ಯಾಂಗ್..!

---Advertisement---

ಚಿತ್ರದುರ್ಗ: ಕಳ್ಳತನ, ದರೋಡೆ ಮಾಡುವ ಖತರ್ನಾಕ್ ಕಳ್ಳರು ಭಯಾನಕವಾಗಿಯೇ ಕಾಣಿಸಿಕೊಳ್ಳುತ್ತಾರೆ. ಇದೀಗ ಕೋಟೆನಾಡು ಚಿತ್ರದುರ್ಗದಲ್ಲಿ ಚಡ್ಡಿ ಗ್ಯಾಂಗ್ ಎಂಬುದು ಪತ್ತೆಯಾಗಿದೆ. ಆ ಗ್ಯಾಂಗ್ ನಿಂದ ಏನೆಲ್ಲಾ ತೊಂದರೆಯಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಸದ್ಯ ಚಿತ್ರದುರ್ಗದ ಸಿದ್ದರಾಮಪ್ಪ ಬಡಾವಣೆಯಲ್ಲಿ ಈ ಚಡ್ಡಿ ಗ್ಯಾಂಗ್ ಆತಂಕವನ್ನು ನಿರ್ಮಾಣ ಮಾಡಿದೆ. ಬಡಾವಣೆಯಲ್ಲಿ ಓಡಾಟ ಶುರು ಮಾಡಿದೆ. ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿವೆ. ಹೊಳಲ್ಕೆರೆ ಸೇರಿದಂತೆ ಸೇರಿದಂತೆ ಹಲವೆಡೆ ಕಳ್ಳತನಕ್ಕೆ ಈ ಗ್ಯಾಂಗ್ ಪ್ರಯತ್ನ ಮಾಡಿದೆ. ಸಿಸಿಟಿವಿಯ ದೃಶ್ಯ ಕಂಡ ಸ್ಥಳೀಯರು ಆತಂಕಗೊಂಡಿದ್ದಾರೆ. ಕಳ್ಳತನಕ್ಕೆ ಪ್ರಯತ್ನಿಸಿದ ಗ್ಯಾಂಗ್ ನಂತರ ಎಸ್ಕೇಪ್ ಆಗಿದೆ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾತ್ರಿ ಸಮಯ ಅಂದ್ರೆ ಎಲ್ಲರು ಮಲಗಿದ್ದಂತ ಸಮಯ ನೋಡಿಕೊಂಡು ಕಳ್ಳತನಕ್ಕೆ ಯತ್ನಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ಬೆನ್ನಲ್ಲೇ ಚಡ್ಡಿಗ್ಯಾಂಗ್ ಒಂದು ಹುಟ್ಟಿಕೊಂಡಿದ್ದು, ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಚಡ್ಡಿಗ್ಯಾಂಗ್ ನಿಂದ ಭಯಗೊಂಡಿರುವ ಸ್ಥಳೀಯರು ಆದಷ್ಟು ಬೇಗ ಇವರನ್ನು ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಯಾಕಂದ್ರೆ ಸಾಮಾನ್ಯವಾಗಿ ಗಾಡಿಗಳನ್ನ ಜನ ಮನೆಯ ಮುಂದೆಯೇ ನಿಲ್ಲಿಸುತ್ತಾರೆ. ಹೊಸದಾಗಿ ಬಂದಿರುವ ಚಡ್ಡಿ ಗ್ಯಾಂಗ್ ಏನನ್ನು ಕಳ್ಳತನ ಮಾಡುತ್ತಾರೆ ಎಂಬುದು ತಿಳಿಯುವುದಿಲ್ಲ. ಹಾಗಂತ ಗಾಡಿಗಳನ್ನೆಲ್ಲ ಮನೆಯೊಳಗೆ ನಿಲ್ಲಿಸುವುದಕ್ಕು ಹಲವರಿಗೆ ಜಾಗ ಇರುವುದಿಲ್ಲ. ಹೀಗಾಗಿ ಪ್ರತಿದಿನ ಆತಂಕದಿಂದಾನೇ ಈಗ ಚಳ್ಳಕೆರೆ ಮಂದಿ ಮಲಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ಸಮಯದಲ್ಲಿ ಆಕ್ಟೀವ್ ಆಗುವ ಈ ಚಡ್ಡಿಗ್ಯಾಂಗ್ ನ ಮಟ್ಟ ಹಾಕುವ ಕೆಲಸವನ್ನು ಪೊಲೀಸರು ಕೈಗೊಂಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...