ಮಂಡ್ಯ; ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ತನ್ನ ವೃದ್ಧ ತಾಯಿಯನ್ನ ನಡು ರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ಅದು ಕಾಡು ಪ್ರದೇಶದ ರೀತಿ ಇತ್ತು. ಆ ತಾಯಿಗೆ ವಯಸ್ಸೇನು ಕಡಿಮೆ ಇಲ್ಲ. ಎದ್ದು ಓಡಾಡುವುದಕ್ಕೂ ಶಕ್ತಿ ಇಲ್ಲ. ಕೆಲಸ ಮಾಡುವ ವಯಸ್ಸು ಅಲ್ಲ. ಹೀಗಿರುವಾಗ ಆ ಜೀವ ಆಹಾರಕ್ಕೇನು ಮಾಡುತ್ತೆ, ಮಳೆ ಗಾಳಿ ಬಂದ್ರೆ ಹೇಗೆ ತಡೆದುಕೊಳ್ಳುತ್ತೆ ಎಂಬ ಸಣ್ಣ ಯೋಚನೆಯೂ ಇಲ್ಲದ ಕ್ರೂರ ಮಗ ರಸ್ತೆಯಲ್ಲಿ ಬಿಟ್ಟು ಹೋಗಿದ್ದ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಸದ್ಯ ಅಜ್ಜಿಯ ರಕ್ಷಣೆಯನ್ನು ಮಾಡಲಾಗಿದೆ.
ಅಜ್ಜಿಯನ್ನು ಕಂಡ ಸ್ಥಳೀಯರು ಆಹಾರ ನೀಡಿದ್ದಾರೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಲಾಗಿದ್ದು, ಅವರು ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ. ಮಂಡ್ಯದ ಮೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪಾಪ ಆತಂಕಗೊಂಡಿದ್ದ ಆ ವೃದ್ದೆ ಸದ್ಯಕ್ಕೆ ನಿರಾಳರಾಗಿದ್ದಾರೆ.
ಆ ವೃದ್ದೆಗೆ ಏನಿಲ್ಲ ಅಂದ್ರು 70-80 ವರ್ಷ ವಯಸ್ಸಾಗಿದೆ. ತನಗೇನೆ ಕಷ್ಟವಾದರೂ ಹೆತ್ತ ಮಕ್ಕಳಿಗೆ ಕಷ್ಟವಾಗಬಾರದು ಅಂತ ಸಾಕಿ ಸಲಹಿರುತ್ತಾರೆ. ಆದರೆ ವಯಸ್ಸಾದ ಮೇಲೆ, ತಾಯಿ ಭಾರವಾಗಿ ಬಿಡುತ್ತಾಳಾ..? ಅದರಲ್ಲೂ ಅಷ್ಟು ವಯಸ್ಸಾದ ಮೇಲೆ ಹೀಗೆ ಹೊರ ಹಾಕಿದರೆ ಅಂಥ ಮಕ್ಕಳನ್ನು ಹೆರುವಿದಾದರೂ ಯಾಕೆ ಎಂಬ ಪ್ರಶ್ನೆ ಸಾರ್ವಜನಿಕರನ್ನ ಕಾಡಿದೆ. ಆತನಿಗೂ ವಯಸ್ಸಾಗುತ್ತೆ, ಇದಕ್ಕಿಂತ ಕೆಟ್ಟ ಸ್ಥಿತಿ ಬರಬಹುದು ಎಂದು ಹಿಡಿ ಶಾಪ ಹಾಕಿದ್ದಾರೆ. ಆದರೂ ಆ ಮಗನಿಗೆ ಕೊಂಚವಾದರೂ ಮನುಷ್ಯತ್ವ ಇರಬೇಕಿತ್ತು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











