Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ ಪೊಲೀಸರಿಂದ ಸುಲಿಗೆ ಮಾಡುತ್ತಿದ್ದ ಆರೋಪಿ ಬಂಧನ

---Advertisement---

ಸುದ್ದಿಒನ್, ಚಳ್ಳಕೆರೆ,ಜನವರಿ. 25 : ಬೈಕಿನಲ್ಲಿ ಬಂದು ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಚಳ್ಳಕೆರೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಅರೋಪಿತನಿಂದ 11, 40,000 ರೂ ಮೌಲ್ಯದ ಒಡವೆ ಮತ್ತು ಬೈಕ್ ವಶಕ್ಕೆ ಪಡೆಯಲಾಗಿದೆ.

ಹಿರಿಯೂರು ತಾಲ್ಲೂಕಿನ ಖಂಡೇನಹಳ್ಳಿ ಗ್ರಾಮ ರೋಷನ್ (34 ವರ್ಷ) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯು ತಾಲ್ಲೂಕಿನ ಬಾಲೇನಹಳ್ಳಿ ಗ್ರಾಮದ ಶ್ರೀಮತಿ ಬಸಮ್ಮ ಎಂಬುವರ ಕೊರಳಿನಲ್ಲಿದ್ದ 40ಗ್ರಾಂ ತೂಕದ ಸುಮಾರು 1.50.000/- ರೂಪಾಯಿ ಬೆಲೆಯ ಬಂಗಾರದ ಸರವನ್ನು ಕಳ್ಳತನ ಮಾಡಿದ್ದ. ಈ ಸಂಬಂಧ ಈತನ ವಿರುದ್ದ ದೂರು ದಾಖಲಿಸಲಾಗಿತ್ತು.

ಆರೋಪಿಯ ಪತ್ತೆಗೆ S. P.‌ ರಂಜಿತ್ ಕುಮಾರ್ ಬಂಡಾರು, ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಸ್ವಾಮಿ ಹಾಗೂ ಚಳ್ಳಕೆರೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರಾಜಣ್ಣ.ಟಿ.ಬಿ. ಇವರುಗಳ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಆರ್.ಎಫ್.ದೇಸಾಯಿ ಇವರ ನೇತೃತ್ವದಲ್ಲಿ ಶಿವರಾಜ್,ಜೆ, ಪಿಎಸ್‌ಐ, ಹಾಗೂ ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.

ಜನವರಿ 21 ರಂದು ಆರೋಪಿ ರೋಷನ್ ನನ್ನು ಬಂದಿಸಲಾಗಿದೆ. ಆತನಿಂದ ಬಂಗಾರದ ಸರಗಳನ್ನು ಮತ್ತು 2 ಬೈಕುಗಳನ್ನು ಜಪ್ಪು ಮಾಡಲಾಗಿದೆ..
ಒಟ್ಟು 7 ಪ್ರಕರಣಗಳಲ್ಲಿ 208 ಗ್ರಾಂ ತೂಕದ 9,70,000 ಬೆಲೆ ಬಾಳುವ 7 ಬಂಗಾರದ ಸರಗಳು ಹಾಗೂ 1,70,000 ಬೆಲೆ ಬಾಳುವ ಎರೆಡು ಬೈಕ್ ಗಳನ್ನ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಚಳ್ಳಕೆರೆ ಪೊಲೀಸರ ಕಾರ್ಯಾಚರಣೆಗೆ S. P.‌ ರಂಜಿತ್ ಕುಮಾರ್ ಬಂಡಾರು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...