Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತರುಣ್ ಸುಧೀರ್ & ಸೋನಲ್ ಮದುವೆ ಆಗ್ತಾ ಇರೋದು ಸತ್ಯ : ಮಾಲತಿ ಸುಧೀರ್ ಸ್ಪಷ್ಟನೆ

---Advertisement---

ಕಳೆದ ಕೆಲವು ದಿನಗಳಿಂದ ಗಾಂಧಿನಗರದ ಮೂಲೆ‌ ಮೂಲೆಯಲ್ಲೂ ತರುಣ್ ಸುಧೀರ್ ಅವರ ಮದುವೆಯದ್ದು ಸದ್ದು. ತರುಣ್ ಹಾಗೂ ನಟಿ ಸೋನಲ್ ಮದುವೆಯಾಗ್ತಾ ಇದ್ದಾರಂತೆ ಎಂಬ ಗುಸುಗುಸು. ಮಹಾನಟಿ ವೇದಿಕೆಯಲ್ಲೂ ಈ ಟಾಪಿಕ್ ಬಂದಾಗ ತರುಣ್ ಸುಧೀರ್ ಇದೊಂದು ಗಾಸಿಪ್ ಎಂದಿದ್ದರು. ಆದರೆ ಅವರ ನಗುವಿನಲ್ಲೇ ಸತ್ಯ ಗೊತ್ತಾಗ್ತಾ ಇತ್ತು. ಯೂಟ್ಯೂಬ್ ಚಾನೆಲ್ ಗಳು ಸೋನಲ್ ಅವರನ್ನು ಕೇಳಿದಾಗಲೂ ಇದೆಲ್ಲಾ ಗಾಸಿಪ್ ಎಂದು ಮೇಲ್ನೋಟಕ್ಕೆ ಹೇಳಿ, ನಕ್ಕು ಓಡಿ ಹೋಗಿದ್ದರು. ಇಬ್ಬರ ನಡವಳಿಕೆಯಿಂದಾನೇ ಇಬ್ಬರು ಮದುವೆಯಾಗ್ತಾ ಇರುವುದು ಕನ್ಫರ್ಮ್ ಎಂಬುದು ಗೊತ್ತಾಗಿದೆ. ಆದರೆ ಅಧಿಕೃತವಾಗಿ ಒಪ್ಪಿಕೊಳ್ಳಲು ಇಬ್ಬರು ರೆಡಿ ಇಲ್ಲ.

ತರುಣ್ ತಾಯಿ‌ ಮಾಲತಿ ಅವರಿಗೆ ಮಕ್ಕಳ ಮದುವೆ ನೋಡಬೇಕೆಂಬ ಆಸೆ. ಆದರೆ ತರುಣ್ ಸುಧೀರ್ ಮದುವೆಯೇ ಬೇಡ ಎಂದು ಕೂತಿದ್ದರು. ಈಗ ಕಂಕಣ ಭಾಗ್ಯಾ ಕೂಡಿ ಬಂದಿದ್ದು, ಸೋನಲ್ ಜೊತೆಗೆ ಹಸೆಮಣೆ ತುಳಿಯಲಿದ್ದಾರೆ. ಈ ಸಂಬಂಧ ವಿಚಾರವನ್ನು ತರುಣ್ ಅವರ ತಾಯಿಯೇ ಸ್ಪಷ್ಟಪಡಿಸಿದ್ದಾರೆ.

‘ಮಗನಿಗೆ ಮದುವೆ ಫಿಕ್ಸ್ ಆಗಿರುವುದು ಸತ್ಯ. ಹುಡುಗಿ ಸೋನಲ್ ಅವರೇ. ಆದರೆ ಇನ್ನು ಕೂಡ ದಿನಾಂಕ ಫಿಕ್ಸ್ ಮಾಡಿಲ್ಲ’ ಎಂದಿದ್ದಾರೆ. ಮಗನ ಮದುವೆಯನ್ನು ಅದ್ದೂರಿಯಾಗಿಯೇ ಮಾಡಬೇಕು ಎಂದು ಮಾಲತಿ ಅವರ ಆಸೆಯಂತೆ. ಸೋನಲ್ ಮನೆಯವರು ತರುಣ್ ಮನೆಯವರು ಕೂತು ಈಗಾಗಲೇ ಮದುವೆಯನ್ನು ಹೇಗೆ ಮಾಡಬೇಕು ಎಂಬ ನಿರ್ಧಾರವನ್ನು ಮಾಡಿದ್ದಾರಂತೆ. ಜುಲೈ 5 ರಂದು ಈ ಬಗ್ಗೆ ಅಧಿಕೃತವಾಗಿ ಅನೌನ್ಸ್ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment