ಮೊಳಕಾಲ್ಮೂರು ಪಟ್ಟಣದ ಉತ್ತರಭಾಗದ ಈಶ್ವರ ದೇವಾಲಯದ ಬಳಿಯಲ್ಲಿ 2010 ರಲ್ಲಿ ನಿರ್ಮಾಣವಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವು ಭಕ್ತರನ್ನು ಸೆಳೆಯುವ ಒಂದು ಆಧ್ಯಾತ್ಮಿಕ ಶ್ರದ್ಧಾಕೇಂದ್ರವಾಗಿದೆ. 2010ರಲ್ಲಿ ಮಂತ್ರಾಲಯದ ಪೀಠಾಧ್ಯಕ್ಷರಾಗಿದ್ದ ಶ್ರೀ ಸುಯತೀಂದ್ರ ತೀರ್ಥರಿಂದ ಲೋಕಾರ್ಪಣೆಗೊಂಡ ಇಲ್ಲಿನ ಬೃಂದಾವನವು ದಿನದಿಂದ ದಿನಕ್ಕೆ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಹಾಗೂ ಬೃಂದಾವನ ಸನ್ನಿಧಿಯು ಭಕ್ತರ ಶ್ರದ್ಧಾಕೇಂದ್ರವಾಗಿದೆ. ವಾಹನಗಳ ಭರಾಟೆ, ಜನರ ಗೌಜುಗದ್ದಲವಿಲ್ಲದ, ಬೆಟ್ಟದ ತಪ್ಪಲಿನಲ್ಲಿ ರಮಣೀಯ ಪರಿಸರದ ಶಾಂತವಾದ ವಾತಾವರಣದಲ್ಲಿ ಮಠವಿದೆ. ಮಳೆಗಾಲದ ನಂತರ ಇಲ್ಲಿನ ಪರಿಸರವು ಹಸಿರಿನಿಂದ ತುಂಬಿದ್ದು, ಇಲ್ಲಿನ ವಾತಾವರಣವು ನಯನ ಮನೋಹರವಾಗಿರುತ್ತದೆ. ಈ ಮಠದ ಸ್ಥಾಪನೆ ಮಾಡುವ ಹಿಂದೆ ಇಲ್ಲಿನ ಭಕ್ತರು ರಾಯರ ದರ್ಶನ ಪಡೆಯಬೇಕೆಂದರೆ ಬೇರೆ ಊರುಗಳಿಗೆ ತೆರಳಬೇಕಾಗಿತ್ತು. ಇದನ್ನು ಅರಿತ ಇಲ್ಲಿನ ಜೋಡಿದಾರ್ ಕುಟುಂಬದ ದಿವಂಗತ ಶ್ರೀನಿವಾಸಮೂರ್ತಿ ಹಾಗೂ ದಿವಂಗತ ಶಾರದಮ್ಮ ದಂಪತಿಗಳ ಮಕ್ಕಳು ತಾವು ಹುಟ್ಟಿ ಬೆಳೆದ ಈ ಊರಲ್ಲಿ ರಾಯರ ಒಂದು ಬೃಂದಾವನ ಹಾಗೂ ಮಠ ಮಾಡಬೇಕೆಂದು ಸಂಕಲ್ಪಿಸಿ ಅದರಂತೆ ಮೊಳಕಾಲ್ಮೂರಿನಲ್ಲಿ…