in ,

ಚಿತ್ರದುರ್ಗ ವಿಧಾನ ಪರಿಷತ್ ಚುನಾವಣೆ: ಶೇ.99.88 ರಷ್ಟು ಮತದಾನ : ಸಂಪೂರ್ಣ ಮಾಹಿತಿ

suddione whatsapp group join

ಚಿತ್ರದುರ್ಗ, (ಡಿಸೆಂಬರ್.10) : ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್‍ಗೆ ಶುಕ್ರವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ.99.88 ರಷ್ಟು ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.

ಒಟ್ಟು ಕ್ಷೇತ್ರದಲ್ಲಿ 284 ಮತಗಟ್ಟೆ ಸ್ಥಾಪಿಸಲಾಗಿದ್ದು ಒಟ್ಟು 5066 ಮತದಾರರಲ್ಲಿ 2373 ಪುರುಷರು ಹಾಗೂ 2687 ಮಹಿಳೆಯರು ಮತದಾನ ಮಾಡಿ ಶೇ 99.88 ರಷ್ಟು ಮತದಾನವಾಗಿರುತ್ತದೆ.

ಬೆಳಿಗ್ಗೆ 8 ರಿಂದ 10 ಗಂಟೆಯವರೆಗೆ 23 ಪುರುಷರು ಹಾಗೂ 6 ಮಹಿಳಾ ಮತದಾರರು ಸೇರಿದಂತೆ ಒಟ್ಟು 29 ಮಂದಿ ಮಾತ್ರ ಮತ ಚಲಾಯಿಸಿದ್ದರು. ಮಧ್ಯಾಹ್ನ 12 ಗಂಟೆಯವರೆಗೆ 93 ಪುರುಷರು ಹಾಗೂ 45 ಮಹಿಳಾ ಮತದಾರರು ಸೇರಿದಂತೆ ಒಟ್ಟು 138 ಮಂದಿ ಮತ ಚಲಾಯಿಸಿದ್ದರು. ಮಧ್ಯಾಹ್ನ 2 ಗಂಟೆಯವರೆಗೆ 291 ಪುರುಷರು ಹಾಗೂ 251 ಮಹಿಳೆಯರು ಸೇರಿದಂತೆ ಒಟ್ಟು 542 ಮಂದಿ ಮತ ಚಲಾಯಿಸಿದ್ದರು. ಬೆಳಿಗ್ಗೆ 10 ಗಂಟೆಯವರೆಗೆ ಶೇ.0.27ರಷ್ಟು ಮತದಾನ, ಮಧ್ಯಾಹ್ನ 12 ಗಂಟೆಯವರೆಗೆ ಶೇ.2.72ರಷ್ಟು ಮತದಾನ ಹಾಗೂ ಮಧ್ಯಾಹ್ನ 2 ಗಂಟೆಯವರೆಗೆ ಶೇ.10.70ರಷ್ಟು ಮತದಾನ ನಡೆದಿತ್ತು. ಮಧ್ಯಾಹ್ನ 2 ಗಂಟೆಯ ನಂತರ ಮತದಾನ ಬಿರುಸುಗೊಂಡಿದ್ದು ಸಂಜೆ 4 ಗಂಟೆಗೆ ಮತದಾನ ಪ್ರಕ್ರಿಯೆ ಶಾಂತಯುತವಾಗಿ ಮುಕ್ತಾಯವಾಯಿತು.

ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವ್ಯಾಪ್ತಿಗೆ ದಾವಣಗೆರೆ ಜಿಲ್ಲೆಯ ಹರಿಹರ, ದಾವಣಗೆರೆ ಹಾಗೂ ಜಗಳೂರು ತಾಲ್ಲೂಕು ಸೇರಿವೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕು ಸೇರಿದಂತೆ ದಾವಣಗೆರೆ ಜಿಲ್ಲೆಯ ಮೂರು ತಾಲ್ಲೂಕುಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕು ಸೇರಿದಂತೆ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ವ್ಯಾಪ್ತಿಗೆ ಒಟ್ಟು 9 ತಾಲ್ಲೂಕುಗಳು ಸೇರಿವೆ. ಗ್ರಾಮ ಪಂಚಾಯಿತಿ, ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ, ನಗರಪಾಲಿಕೆ  ಕಚೇರಿಗಳಲ್ಲಿ ಮತದಾರರಾದ ಸ್ಥಳೀಯ ಸಂಸ್ಥೆಗಳ ಸದಸ್ಯರು ಹಾಗೂ ಶಾಸಕರು ಹಾಗೂ ಸಂಸದರು ಮತ ಚಲಾಯಿಸಿದರು.

ದಾವಣಗೆರೆ ಜಿಲ್ಲೆಯ ಹರಿಹರ; ತಾಲ್ಲೂಕಿನಲ್ಲಿ 386 ಮತದಾರರ ಪೈಕಿ 185 ಪುರುಷ ಮತದಾರರು ಹಾಗೂ 201 ಮಹಿಳಾ ಮತದಾರರು ಸೇರಿದಂತೆ ಒಟ್ಟು 386 ಮತದಾರರು ಹಕ್ಕು ಚಲಾಯಿಸಿದರು. ಹರಿಹರ ತಾಲ್ಲೂಕಿನಲ್ಲಿ ಶೇ.100 ರಷ್ಟು ಮತದಾನವಾಗಿದೆ.
ದಾವಣಗೆರೆ; ಇಲ್ಲಿ 42 ಮತಗಟ್ಟೆಗಳಿದ್ದು 685 ಮತದಾರರಿದ್ದಾರೆ. ಇದರಲ್ಲಿ 332 ಪುರುಷ, 351 ಮಹಿಳೆಯರು ಸೇರಿ 683 ಮತ ಚಲಾಯಿಸಿ ಶೇ 99.71 ರಷ್ಟು ಮತದಾನವಾಗಿದೆ.
ಜಗಳೂರು; ತಾಲ್ಲೂಕಿನಲ್ಲಿ 23 ಮತಗಟ್ಟೆಗಳಿಂದ 417 ಮತದಾರರಿದ್ದು ಇದರಲ್ಲಿ 195 ಪುರುಷ, 221 ಮಹಿಳೆಯರು ಸೇರಿ 416 ಜನ ಮತದಾನ ಮಾಡಿ ಶೇ 99.76 ರಷ್ಟು ಮತದಾನ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ; ತಾಲ್ಲೂಕಿನ 34 ಮತಗಟ್ಟೆಗಳಲ್ಲಿ 559 ಮತದಾರರ ಪೈಕಿ 264 ಪುರುಷ ಮತದಾರರು ಹಾಗೂ 295 ಮಹಿಳಾ ಮತದಾರರು ಮತದಾನ ಮಾಡಿದ್ದು ಶೇ 100 ರಷ್ಟು ಮತದಾನವಾಗಿದೆ.
ಹೊಳಲ್ಕೆರೆ; ತಾಲ್ಲೂಕಿನ 30 ಮತಗಟ್ಟೆಗಳಲ್ಲಿ 509 ಮತದಾರರಿದ್ದು ಇದರಲ್ಲಿ 236 ಪುರುಷ ಹಾಗೂ 272 ಮಹಿಳೆಯರು ಸೇರಿ ಒಟ್ಟು 508 ಮಂದಿ ಮತದಾನ ಮಾಡಿ ಶೇ 99.80 ರಷ್ಟು ಮತದಾನ ಮಾಡಲಾಗಿದೆ.
ಚಿತ್ರದುರ್ಗ; ತಾಲ್ಲೂಕಿನ 39 ಮತಗಟ್ಟೆಗಳಿಂದ 763 ಮತದಾರರ ಪೈಕಿ 350 ಪುರುಷ ಮತದಾರರು ಹಾಗೂ 412 ಮಹಿಳಾ ಮತದಾರರು ಸೇರಿದಂತೆ ಒಟ್ಟು 762 ಮಂದಿ ಮತದಾನದ ಹಕ್ಕು ಚಲಾಯಿಸಿ ಶೇ 99.87 ರಷ್ಟು ಮತದಾನ ಮಾಡಲಾಗಿದೆ.
ಚಳ್ಳಕೆರೆ; ಇಲ್ಲಿನ 41 ಮತಗಟ್ಟೆಗಳಿಂದ 783 ಮತದಾರರಲ್ಲಿ 368 ಪುರುಷ, 414 ಮಹಿಳೆಯರು ಸೇರಿ 782 ಮತದಾನವಾಗಿ ಶೇ 99.87 ರಷ್ಟು ಮತದಾನ ಮಾಡಲಾಗಿದೆ.
ಮೊಳಕಾಲ್ಮುರು; ತಾಲ್ಲೂಕಿನ 17 ಮತಗಟ್ಟೆಗಳಿಂದ 342 ಮತದಾರರಿದ್ದು ಇದರಲ್ಲಿ 154 ಪುರುಷ, 188 ಮಹಿಳೆಯರು ಸೇರಿ 342 ಜನರು ಮತದಾನ ಮಾಡಿ ಶೇ 100 ರಷ್ಟು ಮತದಾನ ಮಾಡಲಾಗಿದೆ.
ಹಿರಿಯೂರು; ತಾಲ್ಲೂಕಿನಲ್ಲಿನ 34 ಮತಗಟ್ಟೆಗಳಿಂದ 622 ಮತದಾರರಿದ್ದು ಇದರಲ್ಲಿ 289 ಪುರುಷ ಹಾಗೂ 333 ಮಹಿಳೆಯರು ಸೇರಿ 622 ಮತದಾನ ಮಾಡಿದ್ದು ಶೇ 100 ರಷ್ಟು ಮತದಾನವಾಗಿದೆ.
ಮತ ಎಣಿಕೆ; ಮತದಾನದ ನಂತರ ಮತಪೆಟ್ಟಿಗೆಗಳನ್ನು ಮತ ಎಣಿಕೆ ಸ್ಥಳವಾದ ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು (ಹೊಸ ಕಟ್ಟಡ)ದಲ್ಲಿ ಇಡಲಾಗಿದ್ದು, ಡಿಸೆಂಬರ್ 14 ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆಯನ್ನು ನಡೆಸಲಾಗುವುದು. ಎಣಿಕೆಗೆ 14 ಟೇಬಲ್ ವ್ಯವಸ್ಥೆ ಮಾಡಲಾಗಿದ್ದು, ಒಂದು ಟೇಬಲ್‍ಗೆ ಒಬ್ಬ ಮೇಲ್ವಿಚಾರಕ ಮತ್ತು ಇಬ್ಬರು ಎಣಿಕೆ ಸಹಾಯಕರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ವಿಧಾನ ಪರಿಷತ್ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ನವೀನ್ ಕೆ.ಎಸ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸೋಮಶೇಖರ್ ಬಿ ಹಾಗೂ ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ ಸೇರಿದಂತೆ ಒಟ್ಟು ಮೂವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿಸೆಂಬರ್ 14 ರಂದು ನಡೆಯುವ ಮತ ಎಣಿಕೆಯ ನಂತರ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

314 ಹೊಸ ಸೋಂಕಿತರು.. 2 ಸಾವು..!

ವಿಧಾನ ಪರಿಷತ್ ಚುನಾವಣೆ : ಮುಗಿದ ಮತದಾನ, ಮುಂದುವರಿದ ಕುತೂಹಲ !