ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ. 12 : ಎಲ್ಲರ ಪರಿಶ್ರಮ ಹಾಗೂ ಬದ್ದತೆಯಿಂದ ಮಾತ್ರ ಸೊಸೈಟಿ ಸದೃಢವಾಗಿ ಬೆಳೆಯಲು ಸಾಧ್ಯ ಎಂದು ದಿ.ಮರ್ಚೆಂಟ್ಸ್ ಸೌಹಾರ್ಧ ಸಹಕಾರ ಬ್ಯಾಂಕ್ನ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ ತಿಳಿಸಿದರು.
ಹಿಂದು ಎಕಾನಮಿಕ್ ಫೋರಂ ವತಿಯಿಂದ ನಗರದ ಮೆದೆಹಳ್ಳಿ ರಸ್ತೆಯಲ್ಲಿ ಸ್ಥಾಪನೆಗೊಂಡಿರುವ ವಿ.ಡಿ.ಸಾರ್ವಕರ್ ಸೌಹಾರ್ಧ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಸೋಮವಾರ ನಡೆದ ಸ್ವಾಮಿ ವಿವೇಕಾನಂದ ಜಯಂತಿಯಲ್ಲಿ ಸ್ವಾತಂತ್ರ್ಯ ಯೋಧರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ವಿ.ಡಿ.ಸಾರ್ವಕರ್ ಹಾಗೂ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಇವರಿಬ್ಬರು ದೇಶ ಭಕ್ತರು. ಇಂತಹವರ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಬೇಕಿದೆ. ಯಾವುದೇ ಕಾರಣಕ್ಕೂ ಸೊಸೈಟಿ ನಷ್ಟವಾಗಲು ಅವಕಾಶ ಕೊಡಬೇಡಿ. ಆರ್ಥಿಕವಾಗಿ ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ನಿಮ್ಮಗಳ ಜವಾಬ್ದಾರಿ ಎಂದು ತಿಳಿಸಿದರು.
ಪ್ರಥಮ ವರ್ಷದಲ್ಲಿಯೇ ಸ್ವಾತಂತ್ರ್ಯ ಯೋಧರ ದಿನದರ್ಶಿಕೆಯನ್ನು ವಿ.ಡಿ.ಸಾವರ್ಕರ್ ಸೌಹಾರ್ಧ ಕ್ರೆಡಿಟ್ ಕೋ-ಆಪರೇಟಿವ್ ನೊಸೈಟಿ ಹೊರ ತಂದಿರುವುದರ ಹಿಂದೆ ಕಾಳಜಿಯಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿ.ಡಿ.ಸಾವರ್ಕರ್ ಸೌಹಾರ್ಧ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ನ ಅಧ್ಯಕ್ಷ ವೈ.ಆರ್.ನಾಗೇಂದ್ರ ಮಾತನಾಡುತ್ತ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವಂತ ವಿಚಾರಗಳುಳ್ಳ ಕ್ಯಾಲೆಂಡರ್ ಬಿಡುಗಡೆಗೊಳಿಸಿದ್ದೇವೆ. ಇದರಲ್ಲಿ ಸಮಾಜಕ್ಕೆ ಏನು ಹೇಳಬೇಕೆಂಬ ಸಂದೇಶವಿದೆ. ಹಿಂದೂ ಸಮಾಜ ಜಾಗೃತರಾಗಿ ನಮ್ಮ ಸೊಸೈಟಿಗೆ ಹೆಚ್ಚು ಠೇವಣಿಗಳನ್ನಿಡುವ ಮೂಲಕ ಆರ್ಥಿಕವಾಗಿ ಶಕ್ತಿ ತುಂಬಬೇಕು. ಆರ್ಥಿಕವಾಗಿ ಸಬಲರಲ್ಲದವರಿಗೆ ಮಾನಸಿಕ ಹಾಗೂ ದೈಹಿಕವಾಗಿ ಬೆಂಬಲ ನೀಡುವುದು ನಮ್ಮ ಉದ್ದೇಶ. ಬೇರೆ ಬ್ಯಾಂಕ್ಗಳಿಗೆ ಹೋಲಿಸಿದರೆ ನಮ್ಮ ಸೊಸೈಟಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿದ್ದೇವೆಂದು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ ವಿಶ್ರಾಂತ ಜಂಟಿ ನಿರ್ದೇಶಕ ಟಿ.ವಿ.ಸುರೇಶ್ಗುಪ್ತ ಮಾತನಾಡಿ ಧೈರ್ಯ ಸಾಹಸ ಆತ್ಮಗೌರವದ ಪ್ರತೀಕವಾಗಿರುವ ಸ್ವಾಮಿ ವಿವೇಕಾನಂದರು ಭಾರತೀಯರ ಧಾರ್ಮಿಕ ಶಕ್ತಿಯ ಅಸ್ಮಿತೆಯನ್ನು ವಿಶ್ವಕ್ಕೆ ಪರಿಚಯಿಸುವುದರ ಜೊತೆಗೆ ಮಾನವೀಯತೆಯ ಸಂದೇಶವನ್ನು ಅನೇಕ ಸಂದರ್ಭಗಳಲ್ಲಿ ಪ್ರತಿಪಾದಿಸಿದ್ದಾರೆ.
ಕನ್ಯಾಕುಮಾರಿಯಲ್ಲಿ ಬೋರ್ಗರೆವ ಸಮುದ್ರದ ಅಲೆಗಳನ್ನು ಲೆಕ್ಕಿಸದೆ ಈಜುತ್ತಾ ದೊಡ್ಡ ಬಂಡೆಯ ಮೇಲೆ ಕುಳಿತು ಮೂರು ದಿನಗಳ ಕಾಲ ಧ್ಯಾನಸ್ಥರಾಗಿದ್ದರೆಂದರು.
ಏಳಿ ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ ಎನ್ನುವ ಸಂದೇಶ ನೀಡಿ ಯುವ ಜನಾಂಗವನ್ನು ಬಡಿದೆಬ್ಬಿಸಿದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಜ.12 ರಂದು ರಾಷ್ಟ್ರೀಯ ಯುವ ದಿನ ಎಂದು ಸರ್ಕಾರ ಘೋಷಿಸಿದೆ. ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆದ ವಿಶ್ವ ಧಾರ್ಮಿಕ ಸಮ್ಮೇಳನದಲ್ಲಿ ಮಾಡಿದ ಭಾಷಣದಿಂದ ಜಗತ್ತು ಭಾರತದ ಕಡೆ ತಿರುಗಿ ನೋಡಿತು ಎಂದರು.
ವೀರ ಸಾವರ್ಕರ್ ದೇಶದ ಸ್ವಾತಂತ್ರ್ಯಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇಂತಹ ಧೀರರನ್ನು ಪ್ರತಿಯೊಬ್ಬರು ನೆನಪಿಸಿಕೊಳ್ಳಬೇಕೆಂದು ನುಡಿದರು.
ಹೆಚ್.ಇ.ಎಫ್.ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಟಿ.ಆರ್. ಡಾ.ಟಿ.ಕೆ.ಶ್ರೀನಿವಾಸಶೆಟ್ಟಿ, ಹಿಂದು ಎಕಾನಮಿಕ್ ಫೋರಂನ ಅಧ್ಯಕ್ಷ ವಾಸುದೇವ್, ಶಿವಮೊಗ್ಗ ವಿಭಾಗದ ಬಾಲಗೋಕುಲ ಪ್ರಮುಖ ದೇವರಾಜ್ ಕೋಟ್ಲ ಸೇರಿದಂತೆ ವಿ.ಡಿ.ಸಾವರ್ಕರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ದೊಣಸ್ವಾಮಿ ಡಿ.ಕೆ. ನಿರ್ದೇಶಕರುಗಳಾದ ಸುರೇಶ್ ಜಿ.ಎಂ. ಭಾಫ್ನ ಸುರೇಶ್ ಜಿ. ನಂದಿ ನಾಗರಾಜ್, ಪೃಥ್ವಿರಾಜ್, ರಾಘವೇಂದ್ರ ಎಂ.ಜೆ. ಚಿಟ್ಟಿಬಾಬು ಕೆ.ಎಸ್. ಮೋಹನ ಸಿ. ಗೀತ ಟಿ.ಸಿ.ಪಿ. ಗೀತಮ್ಮ ಹಾಗೂ ಸಿಬ್ಬಂದಿ ವರ್ಗದವರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಶೇರುದಾರರಿಗೆ ಇದೆ ಸಂದರ್ಭದಲ್ಲಿ ಶೇರು ಸರ್ಟಿಫಿಕೇಟ್ಗಳನ್ನು ವಿತರಿಸಲಾಯಿತು. ನಂತರ ರಕ್ತದಾನ ನಡೆಯಿತು.




















