Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಬಿಎಂಟಿಸಿ ಡಿಪೋಗೆ ಭೇಟಿಕೊಟ್ಟ ಸೂಪರ್ ಸ್ಟಾರ್ ರಜನೀಕಾಂತ್..!

---Advertisement---

ಸುದ್ದಿಒನ್, ಬೆಂಗಳೂರು : ಸದ್ಯ ರಾಜ್ಯದಲ್ಲೆಲ್ಲಾ ಜೈಲರ್ ಸದ್ದು ಜೋರಾಗಿದೆ. ರಿಲೀಸ್ ಆಗಿ ಹಲವು ದಿನಗಳಾದರೂ ತನ್ನ ನಾಗಲೋಟ ಮುಂದುವರೆಸಿದ. ರಜನೀಕಾಂತ್ ಫ್ಯಾನ್ಸ್, ಶಿವಣ್ಣನ ಫ್ಯಾನ್ಸ್ ಅಂತು ಸಿನಿಮಾ ನೋಡಿ‌ ನೋಡಿ ಖುಷಿ ಪಡುತ್ತಿದ್ದಾರೆ. ಬಹುಪರಾಕ್ ಹಾಕುತ್ತಿದ್ದಾರೆ. ಸಿನಿಮಾ ಇಷ್ಟು ಹೈಪ್ ಕ್ರಿಯೇಟ್ ಮಾಡಿರುವ ಬೆನ್ನಲ್ಲೇ ರಜನೀಕಾಂತ್ ಅಭಿಮಾನಿಗಳ ಮುಂದೆ ಬಂದರೆ ಹೇಗಿರುತ್ತೆ..?

ಇಂದು ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ದಿಢೀರನೇ ಬೆಂಗಳೂರಿನ ಜಯನಗರಕ್ಕೆ ಭೇಟಿ ನೀಡಿದ್ದಾರೆ. ಜಯನಗರ 4th ಬ್ಲಾಕ್ ನಲ್ಲಿರುವ ಬಿಎಂಟಿಸಿ ಡಿಪೋಗೆ ಭೇಟಿ ನೀಡಿದ್ದಾರೆ. ರಜನೀಕಾಂತ್ ಅವರನ್ನು ಕಂಡ ಬಿಎಂಟಿಸಿ ಡಿಪೋ ಸಿಬ್ಬಂದಿಗಳು ಫುಲ್ ಖುಷಿಯಾಗಿದ್ದಾರೆ. ಎಲ್ಲರೂ ಅವರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ರಜನೀಕಾಂತ್ ಅವರು ಕೂಡ ಡಿಪೋದಲ್ಲೆಲ್ಲ ಓಡಾಡಿ, ಅಲ್ಲಿನ ಸಿಬ್ಬಂದಿಗಳನ್ನೆಲ್ಲಾ ಮಾತನಾಡಿಸಿದ್ದಾರೆ. ರಜನೀಕಾಂತ್ ಅವರಿಗೆ ಆ ಜಾಗ ತುಂಬಾ ಭಾವನಾತ್ಮಕವಾಗಿ ಕನೆಕ್ಟ್ ಆಗಿದೆ. ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಈ ಮೊದಲು ಬೆಂಗಳೂರಿನಲ್ಲಿಯೇ ಬಸ್ ಕಂಡಕ್ಟರ್ ಆಗಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲನೆ ಮಾಡಿದ್ದಾರೆ. ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡು ಈಗ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಜೈಲರ್ ಸಕ್ಸಸ್ ಬೆನ್ನಲ್ಲೇ ತಮ್ಮ ಡಿಪೋ ನೆನಪಾಗಿದೆ. ಹೀಗಾಗಿ ಜಯನಗರದ ಡಿಪೋಗೆ ಭೇಟಿ ನೀಡಿ, ಸಂತಸಗೊಂಡಿದ್ದಾರೆ. ಅಲ್ಲಿನ ಸಿಬ್ಬಂದಿಗಳು ಕೂಡ ರಜನೀಕಾಂತ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಡಿಪೋದಲ್ಲಿ ತೆಗೆಸಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...