Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಬೇಸಿಗೆ ಬಿಸಿಲು ಹೆಚ್ಚಳ: ನಿರ್ಜಲೀಕರಣ ತಡೆಯಲು ಇಲ್ಲಿದೆ ಸರಳ ಉಪಾಯಗಳು

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಬೇಸಿಗೆಯ ದಿನಗಳು ದಿನ ದಿನಕ್ಕೆ ನಿಧಾನವಾಗಿ ಕಾಲಿಡುತ್ತಾ ಬೇಸಿಗೆಯ ಬಿಸಿಲಿನ ಪ್ರಖರತೆಯು ದಿನೇ ದಿನೇ ಹೆಚ್ಚಾಗುತ್ತಾ ಸಾಗುತ್ತಿದೆ. ಈ ಪ್ರಖರತೆಯನ್ನು ತಡೆಗಟ್ಟಲು ಸಾಧ್ಯವಾಗದಿದ್ದರೂ ಅದರಿಂದ ಬಚಾವಾಗಬೇಕಾಗಿರುವುದು ಜಾಣತನವಾಗಿರುತ್ತದೆ. ಇದಕ್ಕಾಗಿ ಕೆಲವು ಉಪಾಯಗಳನ್ನು ಅನುಸರಿಸಿದರೆ ಸಾಕು.

ಬೇಸಿಗೆಯಲ್ಲಿ ತಾಪಮಾನ ತೀವ್ರವಾಗಿರುವ ಕಾರಣಕ್ಕೆ ನಾವು ಮೊದಲಿಗೆ ದೇಹದಲ್ಲಿ ಉಷ್ಣಾಂಶ ಕಾಯ್ದುಕೊಳ್ಳಲು ಅನುಕೂಲವಾಗುವ ನೀರಿನ ಸಮತೋಲನವನ್ನು ಪ್ರತಿದಿನ ನೋಡಿಕೊಳ್ಳಬೇಕು.

ಇದಕ್ಕಾಗಿ ಹಗಲು ಎಷ್ಟು ನಮಗೆ ನೀರಿನ ಅವಶ್ಯಕತೆಯು ಮುಖ್ಯವೋ ರಾತ್ರಿ ಸಮಯದಲ್ಲಿ ಕೂಡ ಅಷ್ಟೇ ನೀರಿನ ಸಮತೋಲನವನ್ನು ದೇಹದಲ್ಲಿ ಕಾಪಾಡಿಕೊಳ್ಳಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿರುತ್ತದೆ. ನಾವು ಎಚ್ಚರವಾಗಿರುವಾಗ ಬೇಕಾಗಿರುವ ಪ್ರಮಾಣದ ನೀರು ರಾತ್ರಿಯ ಸಮಯದಲ್ಲಿ ಬೇಕಾಗದಿದ್ದರೂ ಸ್ವಲ್ಪವಾದರೂ ದೇಹದಲ್ಲಿ ನೀರಿನ ಪ್ರಮಾಣ ಸ್ವಲ್ಪವಾದರೂ ಇರಬೇಕು.
ಬೇಸಿಗೆಯಲ್ಲಿ ಪ್ರಮುಖವಾಗಿ ಕಾಡುವ ಸಮಸ್ಯೆ ಎಂದರೆ ನಿರ್ಜಲೀಕರಣ ಅಂದರೆ ದೇಹದಲ್ಲಿ ನೀರಿನ ಪ್ರಮಾಣ ತೀವ್ರವಾಗಿ ಕುಸಿಯುವುದು. ಇದಕ್ಕೆ ಪ್ರಮುಖವಾಗಿ ಬಿಸಿಲಿನ ಪ್ರಖರತೆ ಹಾಗೂ ಬೇಸಿಗೆಯ ದಿನಗಳು.
ಇಂತಹ ಬಿಸಿಲಿನಲ್ಲಿ ದೇಹದ ನೀರಿನ ಅಂಶವು ಬೆವರಿನ ಮೂಲಕ ಅಥವಾ ಇನ್ನಿತರ ಕಾರಣಗಳಿಂದ ಹೊರಹೋದಾಗ ಅಥವಾ ನೀರು ದೇಹಕ್ಕೆ ಮರುಪೂರಣ ಆಗದಿದ್ದಾಗ ನಿರ್ಜಲೀಕರಣ ಆಗುತ್ತದೆ ಅಂದರೆ Dehydration.

ನಿರ್ಜಲೀಕರಣ (Dehydration) ಎಂದರೆ ದೇಹಕ್ಕೆ ಅಗತ್ಯವಿರುವಷ್ಟು ನೀರು ಅಥವಾ ದ್ರವಾಂಶ ಲಭ್ಯವಿಲ್ಲದೆ ದೇಹದ ದೈನಂದಿನ ಆರೋಗ್ಯ ಕಾರ್ಯಗಳಿಗೆ ಸಮಸ್ಯೆಯಾಗುವ ಆರೋಗ್ಯದ ಸ್ಥಿತಿಯನ್ನು ಹದಗೆಡಿಸುವ ಪರಿಸ್ಥಿತಿ.ರಾತ್ರಿಯ ಸಮಯದಲ್ಲಿ ದೇಹಕ್ಕೆ ನೀರಿನ ಲಭ್ಯತೆ ಹಾಗೂ ಅವಶ್ಯಕತೆಯು ಜೀರ್ಣಕ್ರಿಯೆಗೆ ಅಗತ್ಯವಾಗಿರುತ್ತದೆ.
ರಾತ್ರಿಯ ನಿದ್ದೆ ಹಾಳಾಗುತ್ತದೆ ಹಾಗೂ ಪದೇಪದೇ ಮೂತ್ರ ವಿಸರ್ಜನೆಗೆ ನಿದ್ದೆಯಿಂದ ಎದ್ದೇಳಬೇಕು ಎಂಬ ಆಲೋಚನೆಯಲ್ಲಿ ಕೆಲವರು ರಾತ್ರಿ ಹೊತ್ತು ಹೆಚ್ಚು ನೀರು ಸೇವಿಸುವುದಿಲ್ಲ. ಆದರೆ ನೆನಪಿಡಿ,ರಾತ್ರಿಯ ಸಮಯದಲ್ಲಿ ಕೂಡ ನಿಮ್ಮ ದೇಹಕ್ಕೆ ಅಗತ್ಯವಾಗಿ ನೀರು ಬೇಕೇ ಬೇಕು. ಜೊತೆಗೆ ರಾತ್ರಿಯ ಸಮಯದಲ್ಲಿ ಹೆಚ್ಚು ಫ್ಯಾನಿನ ಗಾಳಿಗೆ ಒಡ್ಡಿಕೊಂಡಾಗ,ಕಡಿಮೆ ಉಷ್ಣಾಂಶದಲ್ಲಿ ಎಸಿ ಬಳಸಿದಾಗ ನಿಮ್ಮ ದೇಹದಿಂದ ನೀರಿನ ಅಂಶವೂ ಆವಿಯಾಗ ತೊಡಗುತ್ತದೆ.

ಕಾರಣಗಳು:
*ಅತೀ ಬೆವರು,
*ವಾಂತಿ,ಅತಿಸಾರ.
*ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಾಂಶ ಕಡಿಮೆಯಾಗುತ್ತದೆ.
*ಅತಿ ಬಿಸಿಲಿಗೆ ದೇಹವನ್ನು
ಒಡ್ಡಿಕೊಳ್ಳುವುದು, ಬಿಸಿಲಿನಲ್ಲಿ ಬಹಳ ಹೊತ್ತು ಕೆಲಸ ಮಾಡುವುದು.
*ಹೆಚ್ಚು ಫ್ಯಾನ್ ಗಾಳಿಗೆ ಒಡ್ಡಿಕೊಂಡಾಗ.

ಲಕ್ಷಣಗಳು:
*ಅತಿ ಬಾಯಾರಿಕೆ,
ಒಣ ಬಾಯಿ, ಒಣಗಿದ ನಾಲಿಗೆ.
*ತಲೆನೋವು,ತಲೆತಿರುಗುವಿಕೆ ಮತ್ತು ದಣಿವು, ಸುಸ್ತು, *ಆತಂಕ, ಗಾಬರಿ,ಜೋರಾದ ಹೃದಯ ಬಡಿತ.
*ಗಾಢ ಬಣ್ಣದ ಮೂತ್ರ. *ಮೂತ್ರ ವಿಸರ್ಜನೆ ಮೂರು ಗಂಟೆಗೂ ಮಿಗಿಲಾಗಿರುವುದು.
*ಉರಿವ ಚರ್ಮ.
*ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸ. ಮಲಬದ್ಧತೆ.

ಪರಿಹಾರ:
ನೀರು,ಎಳನೀರು, ORS (ಓರಲ್ ರಿಹೈಡ್ರೇಶನ್ ಸಲ್ಯೂಷನ್ ) ಅಥವಾ ದ್ರವಾಹಾರ ಸೇವಿಸುವುದು.
ಕಲ್ಲಂಗಡಿ,ಕರಬೂಜ ಸೇವನೆ, ಸೌತೆ ಕಾಯಿ.. ಮುಂತಾದ ಆಹಾರಗಳನ್ನು ಸೇವಿಸುವುದು.
* ನೀರನ್ನು ಒಂದೇ ಬಾರಿಗೆ ಲೀಟರ್ ಗಟ್ಟಲೆ ಕುಡಿಯುವುದಕ್ಕಿಂತ ಪ್ರತಿ ಗಂಟೆಗೆ,ಅರ್ಧ ಗಂಟೆಗೆ ಒಂದು ಲೋಟನಂತೆ ಕುಡಿಯುತ್ತಾ ಇರಬೇಕು.
* ಬಾಯಾರಿಕೆ ಆಗಲಿ, ಬಿಡಲಿ ನೀರನ್ನು ಸೇವಿಸುತ್ತಲೇ ಇರಬೇಕು.
* ಸಕ್ಕರೆ ಅಂಶದ ದ್ರವ ಆಹಾರಗಳನ್ನು, ಕಾರ್ಬೊನೇಟೆಡ್ ಡ್ರಿಂಕ್ಸ್ ಗಳನ್ನು ಪೆಪ್ಸಿ , ಕೋಲಾ, ಕೃತಕ ಬಣ್ಣಗಳನ್ನು, ಸಕ್ಕರೆಯನ್ನು ಹಾಕಿ ತಯಾರಿಸಿದ ಬಾಟಲ್ ಗಳಲ್ಲಿ ಈಗಾಗಲೇ ಶೇಖರಿಸಿದ ಯಾವುದೇ ದ್ರವ ಜ್ಯೂಸ್ ಗಳನ್ನು ಸೇವಿಸಬಾರದು.
* ಆಗ ತಾನೇ ತಯಾರಿಸಿದ ಹಣ್ಣಿನ ರಸ ಕಬ್ಬಿನ ಹಾಲು ಸೇವಿಸಬೇಕು.
* ರಾತ್ರಿಯ ಸಮಯದಲ್ಲಿ ಎಂದಿಗೂ ಕೂಡ ಸಕ್ಕರೆ ಅಂಶ ಹೆಚ್ಚಾಗಿರುವ ಆಹಾರ, ಜೂಸುಗಳನ್ನು ಸೇವಿಸಬಾರದು.
* ಮದ್ಯಪಾನ ಧೂಮಪಾನ ಮಾಡಬಾರದು.
* ಉತ್ತಮ ಆಹಾರ ವಿಹಾರ, ಯೋಗ,ಧ್ಯಾನ,ವಾಕಿಂಗ್ ಜಾಗಿಂಗ್ ಪ್ರತಿದಿನದ ಅಭ್ಯಾಸವಾಗಬೇಕು.
* ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯಬೇಕು.
* ಕೇವಲ ನೀರು ಕುಡಿದರೆ ಸಾಲುವುದಿಲ್ಲ.ಅದರ ಬದಲಿಗೆ ಖನಿಜ ಅಂಶ ಯುಕ್ತ ನೀರನ್ನು ಸೇವಿಸಿದರೆ ತಕ್ಷಣಕ್ಕೆ ನಿರ್ಜಲೀಕರಣ ಸಮಸ್ಯೆಯಿಂದ ಪಾರಾಗಬಹುದು.

ನೆನಪಿಡಿ
ತೀವ್ರ ನಿರ್ಜಲೀಕರಣ ಸಮಸ್ಯೆಯಿಂದ ಸನ್ ಸ್ಟ್ರೋಕ್ , ಬರ್ನ್ ಕೂಡ ಆಗಬಹುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...