Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮುಂದಿನ ಚುನಾವಣೆಯಲ್ಲಿ ಸುಮಲತಾ ಮಂಡ್ಯದಲ್ಲಿ ನಿಲ್ಲಲ್ಲ : ಜೆಡಿಎಸ್ ಮಾಜಿ ಶಾಸಕ ಭವಿಷ್ಯ..!

---Advertisement---

ಮಂಡ್ಯ: ರಾಹ್ಯದಲ್ಲಿ ಮಳೆ ನೀರಿನ ಕೊರತೆ ಇರುವಾಗಲೂ ತಮಿಳುನಾಡಿಗಾಗಿ ಕಾವೇರಿ ನೀರನ್ನು ಹರಿಸಲಾಗುತ್ತಿದೆ. ರಾಜ್ಯ ಸರ್ಕಾರದ ಈ ನಿರ್ಧಾರ ರೈತರನ್ನು ಕೆರಳಿಸಿದೆ. ಕಾವೇರಿಗಾಗಿ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಇದರ ನಡುವೆ ಸಂಸದೆ ಸುಮಲತಾ ವಿಚಾರವಾಗಿ ಜೆಡಿಎಸ್ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಬೇಸರ ಹೊರ ಹಾಕಿದ್ದಾರೆ.

ಸುಮಲತಾ ವಿಚಾರವಾವಿ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ಮಂಡ್ಯ ಜನರಿಗೆ ಮೋಸ ಆಗೋಯ್ತು. ಸಂಸದೆ ಸುಮಲತಾ ಅವರನ್ನು ಗೆಲ್ಲಿಸಿ ತಪ್ಪು ಮಾಡಿದೆವು. ಮಂಡ್ಯದ ಜನ ಅವರನ್ನು ಎಂಪಿ ಮಾಡಿದ್ದು ಯಾವ ಕಾರಣಕ್ಕೆ..? ಇವತ್ತು ಇಂಥ ಪರಿಸ್ಥಿತಿ ಬಂದೊದಗಿದೆ. ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಿದೆ. ಆದ್ರೆ ಸಮಲತಾ ಅವರಿಗೆ ಮಂಡ್ಯ ಜನರ ಮೇಲೆ ಅಕ್ಕರೆಯೆ ಇಲ್ಲ.

ಸಂಸದೆ ಸುಮಲತಾ ಅವರು ಒಂದು ಹೋರಾಟದಲ್ಲೂ ಭಾಗಿಯಾಗಲಿಲ್ಲ. ಬರೀ ಎಸಿ ರೂಮಲ್ಲಿ ಕೂತು ಸ್ಟೇಟ್ಮೆಂಟ್ ಕೊಡ್ತಾರೆ. ಈ ಅನ್ಯಾಯವನ್ನು ನಾವೂ ನೋಡಬೇಕಿದೆ. ಈ ಬೆಳವಣಿಗೆಗಳನ್ನು ನೋಡ್ತಾ ಇದ್ರೆ ಮುಂದಿನ ಯಾವ ಚುನಾವಣೆಯಲ್ಲೂ ಸುಮಲತಾ ಮಂಡ್ಯದಿಂದ ಸ್ಪರ್ಧೆ ಮಾಡಲ್ಲ ಎನಿಸುತ್ತೆ. ಒಂದು ವೇಳೆ ಮಂಡ್ಯದಿಂದಾನೇ ನಿಲ್ಲುವವರಾಗಿದ್ದರೆ ನಮ್ಮ ಮಂಡ್ಯ ಜನತೆಗೆ ಅನ್ಯಾಯ ಮಾಡ್ತಾ ಇರಲಿಲ್ಲ ಎನಿಸುತ್ತೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...