Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸುದೀಪ್ ತಾಯಿ ಚಿಕಿತ್ಸೆ ಫಲಕಾರಿಯಾಗದೆ ನಿಧನ : ಸರೋಜಾ ಅವ್ರಿಗೆ ಏನಾಗಿತ್ತು..?

---Advertisement---

ಕಿಚ್ಚ ಸುದೀಪ್ ಅವರ ಮನೆಯಲ್ಲಿ ಮೌನ ಆವರಿಸಿದೆ.. ಮನಸ್ಸಿನ ತುಂಬಾ ತಡೆಯಲಾರದ ದುಃಖವಿದೆ.. ಕಣ್ಣಲ್ಲಿ ನೀರು ತುಂಬಿದೆ.. ಅಷ್ಟು ಪ್ರೀತಿ ಮಾಡುವ ತಾಯಿ ಇಂದು ಇಹಲೋಕ ತ್ಯಜಿಸಿದ್ದಾರೆ. ಸುದೀಪ್ ಅವರಿಗೆ ಮಾತೃ ವಿಯೋಗ ಕಾಡಿದೆ‌. ಸರೋಜಾ ಅವರು ಎಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ. ಇಂದು ಬೆಳಗ್ಗೆ 7.40 ಕ್ಕೆ ನಿಧನರಾಗಿದ್ದಾರೆ.

ಸರೋಜಾ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೂ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪತಿ ಸಂಜೀವ್, ಮಗ ಸುದೀಪ್, ಸುರೇಖಾ, ಸುಜಾತಾ ಹಾಗೂ ಐವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನದ ವೇಳೆ ಜೆಪಿ ನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಸಂಜೆ ಒಳಗೆ ಅಂತ್ಯ ಸಂಸ್ಕಾರ ಮಾಡಲಿದ್ದಾರೆ.

ತಾಯಿಯನ್ನು ಕಳೆದುಕೊಂಡು ಸುದೀಪ್ ದುಃಖತಪ್ತರಾಗಿದ್ದಾರೆ. ಆಪ್ತರು, ಕನ್ನಡ ಚಿತ್ರರಂಗ, ಮಾಧ್ಯಮದವರು ಸುದೀಪ್ ಅವರಿಗಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ. ತಾಯಿಯ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿ ಸುದೀಪ್ ಅವರಿಗೆ ನೀಡಲೆಂದು ಕೇಳಿಕೊಂಡಿದ್ದು, ಸರೋಜಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸರೋಜಾ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅಜ್ಜಿ ಎಂದರೆ ಮೊಮ್ಮಕ್ಕಳಿಗೆ ತುಂಬಾನೇ ಇಷ್ಟವಿತ್ತು. ಈಗ ಮೊಮ್ಮಕ್ಕಳ ಮುಂದೆ ಅಜ್ಜಿಯ ಪಾರ್ಥಿವ ಶರೀರವಿದೆ. ಆಡಿ ಬೆಳೆದ ಮೊಮ್ಮಕ್ಕಳಿಗೆ ಮಾತಾಡದೆ, ಉಸಿರಾಡದೆ, ತಬ್ಬದೆ ಮಲಗಿದ ದೇಹ ನೋಡುವುದು ಸುಲಭವಲ್ಲ. ಮೊಮ್ಮಕ್ಕಳಿಗೂ ಆ ದೇವರು ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದೇ ಎಲ್ಲರೂ ಹಾರೈಸುತ್ತಿದ್ದಾರೆ. ಜೆಪಿ ನಗರದ ನಿವಾಸಕ್ಕೆ 12 ಗಂಟೆಯಷ್ಟರಲ್ಲಿ ಪಾರ್ಥಿವ ಶರೀರ ಬರಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...