ದೆಹಲಿ : ಭಾರತೀಯ ವಾಯುಪಡೆಯ (IAF) ಮುಂದಿನ ಮುಖ್ಯಸ್ಥರಾಗಿ (Chief of the Air Staff) ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಮಂಗಳವಾರ ನೇಮಕಗೊಂಡಿದ್ದಾರೆ.
ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಈ ಮಹತ್ವದ ನೇಮಕಾತಿ ನಡೆದಿದ್ದು, ಅವರು ಅಕ್ಟೋಬರ್ 31ರಂದು ಏರ್ ಚೀಫ್ ಮಾರ್ಷಲ್ ಹುದ್ದೆಯೊಂದಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವರ ಅಧಿಕಾರಾವಧಿ 2028ರ ಡಿಸೆಂಬರ್ 31ರವರೆಗೆ ಇರಲಿದೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.
Air Marshal Ashutosh Dixit has been appointed as the new Chief of the Indian Air Force.
Widely known for pushing the indigenous LCA Tejas and other indigenous aircraft projects in the force, Air Marshal Dixit is expected to further promote the Aatmanirbharta initiative of the… https://t.co/CITeaK2sQ5 pic.twitter.com/Cj2t37g4op
— ANI (@ANI) October 6, 2026
ಅಶುತೋಷ್ ದೀಕ್ಷಿತ್ ಅವರು ದೇಶೀಯ ತಂತ್ರಜ್ಞಾನದ ಎಲ್‌ಸಿಎ ತೇಜಸ್ (LCA Tejas) ಸೇರಿದಂತೆ ಹಲವು ಯುದ್ಧ ವಿಮಾನ ಯೋಜನೆಗಳ ಸೇರ್ಪಡೆ ಮತ್ತು ಆಧುನೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೇಂದ್ರ ಸರ್ಕಾರದ ರಕ್ಷಣಾ ವಲಯದ ‘ಆತ್ಮನಿರ್ಭರ ಭಾರತ’ ಯೋಜನೆಗೆ ಅವರ ನಾಯಕತ್ವದಲ್ಲಿ ಮತ್ತಷ್ಟು ಬಲ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.











