ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಅ. 10 : ಗುಪ್ತಚರ ಇಲಾಖೆ ಹಾಗೂ ಪೊಲೀಸ್ ಇಲಾಖೆ ನಿಮ್ಮ ಹತ್ತಿರವೇ ಇದ್ದು, ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಬಿಟ್ಟು ಯಾರು ಯಾರ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡುತ್ತಿದ್ದಾರೆ ಮತ್ತು ಅದಕ್ಕೆ ಸಿಲುಕಿಕೊಂಡವರು ಯಾರು ಎಂಬುದರ ಬಗ್ಗೆ ಪಟ್ಟಿ ಬಿಡುಗಡೆ ಮಾಡುವಂತೆ ಸಂಸದರಾದ ಗೋವಿಂದ ಕಾರಜೋಳ ರಾಜ್ಯ ಮುಖ್ಯಮಂತ್ರಿ ಡಿ.ಕೆ.ಅಸಿವಕುಮಾರ್ ರವರನ್ನು ಆಗ್ರಹಿಸಿದರು.
ಚಿತ್ರದುರ್ಗ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ವಿವಾದ ಮತ್ತು ಇವಿಎಂ ಪರ ವಿರೋಧ ಚರ್ಚೆಗಳ ಕುರಿತಂತೆ ಮಾತನಾಡಿದ ಸಂಸದರು, ಆರೋಪ ಮಾಡುವವರಿಗೆ ಸಮಯ ಬೇಕಿಲ್ಲದಿರುವಾಗ, ದಾಖಲೆ ಬಿಡುಗಡೆ ಮಾಡಲು ಮಾತ್ರ ಕಾಲಾವಕಾಶ ಕೇಳುತ್ತಿರುವುದು ಸರಿಯಲ್ಲ ಎಂದು ತಿಳಿಸಿದ ಅವರು. ಇವಿಎಂ ಕುರಿತು ಮಾತನಾಡುತ್ತಾ, ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಸ್ವಾತಂತ್ರ್ಯಾನಂತರದ ಕಾಲದಲ್ಲಿ ದೇಶದಲ್ಲಿ ಸಾಕ್ಷರತೆ ಮತ್ತು ವಿದ್ಯಾವಂತರ ಸಂಖ್ಯೆ ಕಡಿಮೆಯಿದ್ದಾಗ ಬ್ಯಾಲೆಟ್ ಪೇಪರ್ ಅಗತ್ಯವಿತ್ತು. ಆದರೆ ಇಂದಿನ ದಿನಗಳಲ್ಲಿ ಶೇಕಡಾ 80ರಷ್ಟು ಜನರು ವಿದ್ಯಾವಂತರಾಗಿದ್ದು, ಪ್ರಪಂಚದ ನೂರಾರು ದೇಶಗಳ ಜೊತೆ ಪೈಪೋಟಿ ನಡೆಸುವ ಭಾರತೀಯ ನಾಗರಿಕರಿಗೆ ಬ್ಯಾಲೆಟ್ ಪೇಪರ್ ವ್ಯವಸ್ಥೆ ಇರುವುದು ಅವಮಾನಕರ ಎಂದು ಅಭಿಪ್ರಾಯಪಟ್ಟರು.
ಸುಮಾರು ಆರು ಕೋಟಿ ಜನರು ರಾಜ್ಯದ ಸಂಕಷ್ಟಕ್ಕೆ ಪರಿಹಾರ ಬಯಸುತ್ತಿದ್ದು, ಈ ಕುರಿತು ಸತ್ಯ ಹೊರಬರಬೇಕು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವರು ಇವಿಎಂ ಮೂಲಕವೇ ಜಯಗಳಿಸಿ ಅಧಿಕಾರಕ್ಕೆ ಬಂದಿದ್ದಾರೆ ಮತ್ತು ಕರ್ನಾಟಕ, ತೆಲಂಗಾಣ ಸೇರಿದಂತೆ ಹಲವೆಡೆ ಸರ್ಕಾರಗಳು ಬಂದಿರುವುದರಿಂದ, ಇವಿಎಂ ತಪ್ಪಿದ್ದರೆ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿ ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣಗಳ ಹಿಂದಿರುವವರ ಅಧಿಕೃತ ಪಟ್ಟಿಯನ್ನು ದಾಖಲೆ ಸಮೇತ ಬಿಡುಗಡೆ ಮಾಡಬೇಕು ಹಾಗೂ ಇವಿಎಂ ಮತ್ತು ರಾಜಕೀಯ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಆಗ್ರಹಿಸಿದರು










