ಪ್ರತಿ ವರ್ಷದಂತೆ ಮಾವುತರಿಗೆ, ಕಾವಾಡಿಗರಿಗೆ ಉಪಹಾರ ಬಡಿಸುತ್ತಾರೆ. ಈ ವರ್ಷ ಕೂಡ ದಸರಾ ಸಮಯದಲ್ಲಿ ತಾಯಿಯ ದರ್ಶನ ಪಡೆದು, ಮಾವುತರು ಹಾಗೂ ಕಾವಾಡಿಗರಿಗೆ ಊಟ ಬಡಿಸಿದ್ದಾರೆ. ಇದೇ ಸಮಯದಲ್ಲಿ ಶೋಭಾ ಕರಂದ್ಲಾಜೆಗೆ ಅಮಿತ್ ಶಾ ಕಡೆಯಿಂದ ಕರೆ ಬಂದಿದೆ. ಕರೆ ಸ್ವೀಕರಿಸಿದ ಶೋಭಾ ಕರಂದ್ಲಾಜೆ ಖುಷಿಯಾಗಿದ್ದಾರೆ.
ಮಾವುತರಿಗೆ ಊಟ ಬಡಿಸುತ್ತಿದ್ದಾಗ ಕರೆ ಬಂದಿದೆ. ಇಂದು ಶೋಭಾ ಕರಂದ್ಲಾಜೆ ಅವರ ಹುಟ್ಟುಹಬ್ಬ ಕೂಡ. ಇದೇ ಕಾರಣಕ್ಕೆ ಕರೆ ಮಾಡಿದ ಅಮಿತ್ ಶಾ ಶುಭ ಕೋರಿದ್ದಾರೆ. ಇನ್ನು ಮುಂದೆ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ವಿಶ್ ಮಾಡಿದ್ದಾರಂತೆ. ಇದು ಶೋಭಾ ಕರಂದ್ಲಾಜೆಯ ಹುಟ್ಟುಹಬ್ಬಕ್ಕೆ ಮತ್ತಷ್ಟು ಖುಷಿ ನೀಡಿದೆ. ರಾಜ್ಯಾಧ್ಯಕ್ಷ ಹುದ್ದೆ ವಿಚಾರ ಚರ್ಚೆ ನಡೆದಿದೆಯಾ ಎಂಬ ಕುತೂಹಲ ಮೂಡಿದೆ
ಬಿಜೆಪಿಯಲ್ಲಿ ಇನ್ನು ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆಯೇ ಆಗಿಲ್ಲ. ಇದರ ನಡುವೆ ಲೋಕಸಭಾ ಚುನಾವಣೆ ಬೇರೆ ಹತ್ತಿರವಾಗುತ್ತಿದೆ. ಹೀಗಾಗಿ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲೇ ಬೇಕಾಗಿದೆ. ಶೋಭಾ ಕರಂದ್ಲಾಜೆಯನ್ನೆ ರಾಜ್ಯಾಧ್ಯಕ್ಷರನ್ನಾಗಿ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇದರ ಮಧ್ಯೆಯೇ ಅಮಿತ್ ಶಾ ಅವರು ಎಲ್ಲವೂ ಒಳ್ಳೆಯದಾಗುತ್ತೆ ಎಂದು ಶುಭ ಹಾರೈಸಿರುವುದು ಶೋಭಾ ಕರಂದ್ಲಾಜೆಗೆ ಖುಷಿ ನೀಡಿದೆ. ಆದರೆ ಹೈಕಮಾಂಡ್ ನಿಂದ ಯಾವುದೇ ರೀತಿಯ ಮಾಹಿತಿ ಬಂದಿಲ್ಲ ಎಂದೇ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















