Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

RCB ಮಹಿಳಾ ಟೀಂ ಸೇರಿದ ಸ್ಟಾರ್ ಪ್ಲೇಯರ್: ಯಾರವರು..?

---Advertisement---

ಮಹಿಳಾ ಪ್ರೀಮಿಯರ್ ಲೀಗ್ 2025ರ ಟೂರ್ನಿಗೆ ಕ್ಷಣಗಣನೆ ಶುರುವಾಗಿದೆ. ಈ ಬಾರಿಯೂ ನಿರೀಕ್ಷೆ ಹೆಚ್ಚಾಗಿದೆ. ಯಾಕಂದ್ರೆ ಕಳೆದ ಸೀಸನ್ ನಲ್ಲಿ ಮಹಿಳಾ ಬಳಗ ಕಪ್ ಗೆದ್ದಿತ್ತು. ಈ ಸೀಸನ್ ನಲ್ಲೂ ಕಪ್ ಗೆಲ್ಲುವ ನಿರೀಕ್ಷೆ ಇದೆ. ಆದರೆ ಸೋಫಿ ಮೊಲೆನೆಕ್ಸ್ ತೀವ್ರವಾಗಿ ಗಾಯಗೊಂಡಿದ್ದಾರೆ. ಇದು ಆರಿಸಿಬಿ ತಂಡಕ್ಕೆ ಮಹಾ ಹೊಡೆತ. ಯಾಕಂದ್ರೆ ಕಳೆದ ಬಾರಿ ಕಪ್ ಗೆಲ್ಲುವಲ್ಲಿ ಸೋಫಿ ಪಾತ್ರವೂ ಇತ್ತು.

 

ಆದರೆ ಇದೀಗ ಆರ್ಸಿಬಿ ತಂಡಕ್ಕೆ ಆನೆ ಬಲ ಸಿಕ್ಕಂತೆ ಆಗಿದೆ. ಸೋಫಿ ಮೊಲಿನೆಕ್ಸ್ ಪ್ಲೇಸ್ ಗೆ ಇಂಗ್ಲೆಂಡ್ ಆಫ್ ಸ್ಪಿನ್ನರ್ ಚಾರ್ಲಿ ಡೀಮ್ ಆರ್ಸಿಬಿ ತಂಡವನ್ನ ಸೇರಿದ್ದಾರೆ. ಈ ವಿಚಾರವನ್ನು ಆರ್ಸಿಬಿ ತನ್ನ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡಿದ್ದಾರೆ. ಕಳೆದ ಸೀಸನ್ ನಲ್ಲಿ ಆರ್ಸಿಬಿ ಚಾಂಪಿಯನ್ ಆಗಿತ್ತು. ಆರ್ಸಿಬಿ ಚಾಂಪಿಯನ್ ಆಗಲು ಸೋಫಿ ಕೊಡುಗೆ ಬಹಳ ಇತ್ತು. ಟೂರ್ನಿಯುದ್ಧಕ್ಕೂ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಾಗಿ ಈ ಸೀಸನ್ ನಲ್ಲೂ ಅಬ್ಬರಿಸುವ ನಿರೀಕ್ಷೆ ಇತ್ತು. ಆದರೆ ಮೊಣಕಾಲಿನ ಇಂಜೂರಿಯಿಂದ ಮೊಲಿನೆಕ್ಸ್ ಬಳಲುತ್ತಿದ್ದಾರೆ. ಇದೀಗ ಇವರ ಸ್ಥಾನಕ್ಕೆ ಚಾರ್ಲಿ ಡೀನ್ ಅವರನ್ನ ಆರ್ಸಿಬಿ ಕರೆ ತಂದಿದೆ.

24 ವರ್ಷದ ಚಾರ್ಲಿ ಡೀನ್ ಅವರನ್ನು 30 ಲಕ್ಷ ನೀಡಿ ಆರ್​​ಸಿಬಿ ಒಪ್ಪಂದ ಮಾಡಿಕೊಂಡಿದೆ. ಇವರು ಆಫ್‌ಸ್ಪಿನ್ನರ್ ಆಗಿದ್ದು, ಇಂಗ್ಲೆಂಡ್ ಪರ ಹಲವು ಪಂದ್ಯಗಳನ್ನು ಆಡಿದ್ದಾರೆ. ಡೀನ್ ಇದುವರೆಗೆ ಆಡಿರೋ 36 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6.91 ರ ಆರ್ಥಿಕತೆಯಲ್ಲಿ 46 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೆ, 12 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಅವರು 135 ರನ್ ಬಾರಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...