Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಪ್ರಯಾಗ್ ರಾಜ್ ನಲ್ಲಿ ಕಾಲ್ತುಳಿತ : ಚಿತ್ರದುರ್ಗದ ನಾಗಸಾಧು ಸಾವು..!

---Advertisement---

ಪ್ರಯಾಗ್ ರಾಜ್: ಎಷ್ಟೋ ದಶಕಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಭಾಗವಹಿಸಬೇಕೆಂದು ದೇಶದ ಎಲ್ಲರ ಆಸೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಬರಬೇಕೆಂದು ಕೋಟ್ಯಾಂತರ ಜನ ಪ್ರಯಾಗ್ ರಾಜ್ ಗೆ ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ಸಾಧು ಸಂತರಿಗೆ ಇದು ವಿಶೇಷವಾದಂತದ್ದಾಗಿದೆ. ದೇಶದ ಮೂಲೆ ಮೂಲೆಯಿಂದಾನೂ ನಾಗಸಾಧುಗಳು ಪ್ರಯಾಗ್ ರಾಜ್ ಗೆ ಬರುತ್ತಾರೆ. ಅದರಂತೆ ನಾಗಸಾಧುಗಳು ಸಿಗುತ್ತಾರೆಂದು ಚಿತ್ರದುರ್ಗದ ನಾಗಸಾಧು ರಾಜನಾಥ್ ಮಹರಾಜರು ಹೋಗಿದ್ದರು. ಆದರೆ ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆ.

ಚಿತ್ರದುರ್ಗದ ಬಂಜಾರ ಗುರು ಪೀಠದಲ್ಲಿ ಕಳೆದ ಏಳೆಂಟು ವರ್ಷಗಳಿಂದ ನೆಲೆಸಿದ್ದರು. ಜೊತೆಗೆ ಬಂಜಾರ ಗುರುಪೀಠದ ಪೀಠಾಧಿಪತಿ ಸರ್ದಾರ್ ಸೇವಲಾಲ್ ಅವರ ಆಪ್ತರಾಗಿದ್ದರು. ರಾಜನಾಥ್ ಅವರ ನಿಧನದ ಸುದ್ದಿ ಕೇಳಿ, ಪೀಠದಲ್ಲಿ ನೀರವ ಮೌನ ಆವರಿಸಿದೆ. ಸೇವಲಾಲ್ ಶ್ರೀಗಳು ಕಂಬನಿ ಮಿಡಿದಿದ್ದಾರೆ. ಸಾಧುಗಳ ನಿಧನದ ಬಗ್ಗೆ ಮಾತನಾಡಿ, ಪಾರ್ಥಿವ ಶರೀರ ಬರದೆ ಇದ್ದರೆ ಗುರುಪರಂಪರೆಗೆ ಅವಮಾನ ಮಾಡಿದಂತೆ. ಮೃತ ದೇಹವನ್ನು ಗುರುಮಠಕ್ಕೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಅವರ ಅಂತ್ಯಕ್ರಿಯೆಯನ್ನು ನಾವೂ ಮಾಡುತ್ತೇವೆ ಎಂದಿದ್ದಾರೆ.

ರಾಜನಾಥರಿಗೆ ಕನ್ನಡ ಬರುತ್ತಿರಲಿಲ್ಲ. ಹಿಂದಿ ಮಾತ್ರ ಮಾತಾಡ್ತಾ ಇದ್ದರು. ಕಳೆದ ಹದಿನೈದು ದಿನಗಳ ಹಿಂದಷ್ಟೇ ಟ್ರೈನ್ ನಲ್ಲಿ ಮಹಾಕುಂಭಮೇಳಕ್ಕೆ ಹೊರಟಿದ್ದರು. ಆದರೆ ಕುಂಭಮೇಳದ ಕಾಲ್ತುಳಿತದಲ್ಲಿ ಸಾವನ್ನಪ್ಪಿರುವುದು ದುಃಖದ ಸಂಗತಿಯಾಗಿದೆ. ಸಾಧುಗಳ ಭಕ್ತರಿಗೂ ಇದು ಅರಗಿಸಿಕೊಳ್ಳಲಾಗಿಲ್ಲ. ಪಾರ್ಥಿವ ಶರೀರವನ್ನಾದರೂ ಮಠಕ್ಕೆ ತಲುಪಿಸುವ ಕೆಲಸವನ್ನ ಸರ್ಕಾರ ಮಾಡಿದರೆ ಅದೇ ಕೊಂಚ ನೆಮ್ಮದಿ ಕೊಡುತ್ತದೆ. ಪಾರ್ಥಿವ ಶರೀರವೂ ಇಲ್ಲದೆ ಇದ್ದರೆ ಆ ನೋವು ಎಲ್ಲರನ್ನು ಕಾಡುತ್ತದೆ. ತ್ರಿವೇಣಿ ಸಂಗಮದಲ್ಲಿ ಮುಳುಗಿ ಬಂದರೆ ಪುಣ್ಯ ಎಂದು ಹೋದ ಕೆಲವರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...