ಶ್ರೀರಾಮ ಸೇನೆ, ಭಜರಂಗದಳ ಹಾಗೂ ಎಸ್ಡಿಪಿಐ ಮತ್ತು ಪಿಎಫ್ಐ ಎಲ್ಲವೂ ಬ್ಯಾನ್ ಆಗಲಿ : ಎಂ ಬಿ ಪಾಟೀಲ್

1 Min Read

ದಾವಣಗೆರೆ : ಮೊದಲು ಕೋಮು ಸೌಹಾರ್ಧ ಕೆಡಿಸುವ ಸಂಘಟನೆಗಳು ಬ್ಯಾನ್ ಆಗಬೇಕು. ಶ್ರೀರಾಮ ಸೇನೆ, ಭಜರಂಗದಳ ಹಾಗೂ ಎಸ್ಡಿಪಿಐ ಮತ್ತು ಪಿಎಪ್ಐ ಎಲ್ಲವು ಬ್ಯಾನ್ ಆಗಬೇಕು ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

ರಾಜ್ಯದಲ್ಲಿ ಪಿಫ್ಐ ಮುಖಂಡದರ ಮೇಲೆ ಎನ್ ಐಎ ದಾಳಿ ವಿಚಾರವಾಗಿ ಪಾಮತನಾಡಿದ ಎಂ ಬಿ ಪಾಟೀಲ್, ಎನ್ಐಎ ಮಾಹಿತಿ ಪ್ರಕಾರ ದಾಳಿ ಮಾಡಿದೆ. ಯಾರು ತಪ್ಪು ಮಾಡಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ. ದಾಳಿ ನಡೆಸುವ ಅಧಿಕಾರ ಎನ್ ಐಎ ಗೆ ಇದೆ. ದೇಶ ವಿರೋಧಿಗಳು ಮತ್ತು ಧ್ವೇಷ ಬಿತ್ತುವವರ ವಿರುದ್ಧ ಕ್ರಮ ಆಗಬೇಕು.

ಇದಕ್ಕೆ ಹಿಂದಿನಿಂದಲೂ ಕಾಂಗ್ರೆಸ್ ಒತ್ತಾಯ ಮಾಡುತ್ತಿದೆ. ಕೋಮು ಸೌಹಾರ್ದತೆ ಕಡದಡುವವರು ಯಾವುದೇ ಸಂಘಟನೆ ಬ್ಯಾನ್ ಆಗಬೇಕು. ಇದರಲ್ಲಿ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಿರ್ಧಾರ ಅಚಲವಾಗಿದೆ. ಅಲ್ಪ ಸಂಖ್ಯಾತರನ್ನ ಟಾರ್ಗೆಟ್ ಮಾಡುತ್ತಿರುವುದು ಗೊತ್ತಿರುವ ವಿಚಾರ. ಇದರಲ್ಲಿ ಎಸ್ ಡಿಪಿಐ ಹಾಗೂ ಪಿಎಫ್ ಐನ್ನ ನಾವು ಸಮರ್ಥನೆ ಮಾಡಿಕೊಂಡಿಲ್ಲ.

ಇವು ಬ್ಯಾನ್ ಆದರೆ ಭಜರಂಗದಳ, ಶ್ರೀರಾಮ ಸೇನೆ ಇಂತವು ಬ್ಯಾನ್ ಆಗಬೇಕು. ಇವು ಮಾಡುವ ಕೆಲಸವನ್ನೇ‌ ಎಸ್ ಡಿಪಿಐ ಮತ್ತು ಪಿಎಫ್ ಐ ಕೂಡ ಮಾಡುತ್ತಿವೆ. ಎಲ್ಲವನ್ನ ಬ್ಯಾನ್ ಮಾಡಿದಾಗ ಶಾಂತಿ ನೆಲೆಸುತ್ತದೆ. ಶ್ರೀರಾಮ ಸೇನೆ ಮುತಾಲಿಕ ಮಾಡುವ ಕೆಲಸವು ಅದೇ ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *