ಪಾಕ್ ಜಿಂದಾಬಾದ್ ಎಂದವನಿಗೆ ನಾವೇ ಗುಂಡಿಟ್ಟು ಸಾಯಿಸುತ್ತೇವೆ : ಸಚಿವ ಜಮೀರ್

ರಾಯಚೂರು: ಪಾಕಿಸ್ತಾನ ಘೋಷಣೆ ಕೂಗುವವರನ್ನು ಗುಂಡಿಟ್ಟು ಕೊಲ್ಲಬೇಕು. ಟಿಶ್ಕ್ಯಾಂ ಟಿಶ್ಕ್ಯಾಂ ಟಿಶ್ಕ್ಯಾಂ ಅಂತ ಸ್ಥಳದಲ್ಲೇ ಗುಂಡಿಟ್ಟು ಕೊಲ್ಲಬೇಕು ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಎರಡನೇ ಹಂತದ ಲೋಕಸಭಾ ಚುನಾವಣೆಗಾಗಿ ಭರ್ಜರಿ ಪ್ರಚಾರ ನಡೆಯುತ್ತಿದ್ದು, ಸಚಿವ ಜಮೀರ್ ಅಹ್ಮದ್ ಖಾನ್ ಕೊಪ್ಪಳ ಲೋಕಸಭಾ ಕ್ಷೇತ್ರದ ಪ್ರಚಾರ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದವರನ್ನು ಗುಂಡಿಟ್ಟು ನಾವೇ ಕೊಲ್ಲುತ್ತೇವೆ ಎಂದಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ಘೋಷಣೆ ಕೂಗುವರು ಹೆಚ್ಚಾಗಿದ್ದಾರೆ. ಬಿಜೆಪಿಯವರೇ ಹೊಸದಾಗಿ ಒಂದು ಶುರು ಮಾಡಿದ್ದಾರೆ. ಅವರೇ ನಾಲ್ಕು ಜನರನ್ನು ಕಳಿಸಿ ಪಾಕಿಸ್ತಾನ ಘೋಷಣೆ ಕೂಗಿಸುತ್ತಾರೆ. ಬಿಜೆಪಿಯವರೇ ಕೆಲವು ಕಡೆ ಕಳಿಸಿ ಘೋಷಣೆ ಕೂಗಿಸ್ತಾರೆ.

ಹೀಗೆ ಘೋಷಣೆ ಕೂಗುವವರನ್ನು ಸ್ಥಳದಲ್ಲೇ ಗುಂಡಿಟ್ಟು ಕೊಲ್ಲಬೇಕು. ಕೋರ್ಟ್ನಿಂದಲೇ ಹೀಗೆ ಗುಂಡಿಟ್ಟು ಕೊಲ್ಲಲು ಸರ್ಕಾರ ಆದೇಶ ಮಾಡಿಸಬೇಕು. ಟಿಶ್ಕ್ಯಾಂ ಟಿಶ್ಕ್ಯಾಂ ಟಿಶ್ಕ್ಯಾಂ ಅಂತ ಸ್ಥಳದಲ್ಲೇ ಗುಂಡಿಟ್ಟು ಕೊಲ್ಲಬೇಕು. ಆಗ ಬಿಜೆಪಿಯವರಿಗೆ ಹೇಳಲು ಏನೂ ಇರುವುದಿಲ್ಲ. ಬಿಜೆಪಿಯವರಿಗೆ ಹಿಂದೂ ಬೇಡ ಮುಸ್ಲಿಮರು ಬೇಡ ಅವರಿಗೆ ಬೇಕಾಗಿರುವುದು ಕೇವಲ ಅಧಿಕಾರ ಎಂದು ಬಿಜೆಪಿಗರ ಮೇಲೆ ಕಿಡಿಕಾರಿದ್ದಾರೆ.

ರಾಜ್ಯಸಭಾ ಚುನಾವಣೆಯ ಫಲಿತಾಂಶದ ಬಳಿಕ ನಾಸೀರ್ ಹುಸೇನ್ ಬೆಂಬಲುಗರು ಸಂಭ್ರಮಾಚರಣೆಯ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೀಗೆ ಸಾಕಷ್ಟು ಬಾರಿ ರಾಜ್ಯದಲ್ಲಿ ಪಾಕಿಸ್ತಾನ ಪರದ ಘೋಷಣೆ ಕೂಗಿದ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಜಮೀರ್ ಅಹ್ಮದ್ ಅವರೇ ಅಂತವರನ್ನು ಕೊಲ್ಲಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *