Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕ್ರೀಡೆಗೆ ಎಲ್ಲಾ ಜಾತಿ ಧರ್ಮದವರನ್ನು ಒಂದೆಡೆ ಸೇರಿಸುವ ಶಕ್ತಿಯಿದೆ : ಮಾದಾರ ಚನ್ನಯ್ಯಸ್ವಾಮೀಜಿ

Facebook
Twitter
Telegram
WhatsApp

ಚಿತ್ರದುರ್ಗ : ದೇಶದ ಗೌರವ ಎತ್ತಿಹಿಡಿಯುವ ಕ್ರೀಡೆಗೆ ಎಲ್ಲಾ ಜಾತಿ ಧರ್ಮದವರನ್ನು ಒಂದೆಡೆ ಸೇರಿಸುವ ಶಕ್ತಿಯಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯಸ್ವಾಮೀಜಿ ಹೇಳಿದರು.

ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ.ಪಡೆದಿರುವ ಚಿತ್ರದುರ್ಗದ ಎಸ್.ಜೆ.ಎಂ. ಇನ್ಸಿಟಿಟ್ಯುಟ್ ಆಫ್ ಟೆಕ್ನಾಲಜಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕುಮಾರಸ್ವಾಮಿರವರಿಗೆ ಗೆಳೆಯರ ಬಳಗ ಬ್ಯಾಡ್ಮಿಂಟನ್ ಕ್ಲಬ್ ಚಿತ್ರದುರ್ಗ ವತಿಯಿಂದ ಕ್ರೀಡಾಭವನದಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಉತ್ತಮ ಖೋ ಖೋ ಪಟುವಾಗಿರುವ ಡಾ.ಕುಮಾರಸ್ವಾಮಿ ಕ್ರೀಡೆ ಮತ್ತು ಕುಟುಂಬ ನಿರ್ವಹಣೆ ಜೊತೆಗೆ ಸತತವಾಗಿ ನಾಲ್ಕೆöÊದು ವರ್ಷಗಳ ಕಠಿಣ ಪರಿಶ್ರಮದಿಂದ ಎ.ಸ್ಟಡಿ ಆಫ್ ಫೆಸಿಲಿಟಿಸ್ ಪ್ರೋಗ್ರಾಂ, ಜಾಬ್ ಸ್ಟೆçಸ್ ಅಂಡ್ ಜಾಬ್ ಸ್ಯಾಟಿಸ್‌ಫ್ಯಾಕ್ಷನ್ ಆಫ್ ಫಿಸಿಕಲ್ ಎಜುಕೇಷನ್ ಪರ್ಸನಲ್ ವರ್ಕಿಂಗ್ ಇನ್ ಟ್ರೆöÊನಿಂದ್ ಕಾಲೇಜಸ್ ಆಫ್ ಕರ್ನಾಟಕ ಸ್ಟೇಟ್ ಎಂಬ ವಿಷಯದ ಕುರಿತು ಡಾ.ಅಪ್ಪಣ್ಣ ಮಹದೇವ ಗಸ್ತಿರವರ ಮಾರ್ಗದರ್ಶನದಲ್ಲಿ ಮಂಡಿಸಿರುವ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾನಿಲಯ ಪಿ.ಹೆಚ್.ಡಿ.ಪದವಿ ನೀಡಿ ಗೌರವಿಸಿರುವುದು ನಿಜಕ್ಕೂ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಎಂದು ಗುಣಗಾನ ಮಾಡಿದರು.

ಕ್ರೀಡೆ ಎನ್ನುವುದು ಒಂದು ರೀತಿಯ ಹುಚ್ಚು ಇದ್ದಂತೆ. ಇದಕ್ಕೆ ಮನಸೋತರೆ, ವಿದ್ಯೆ, ಹಣ, ಕುಟುಂಬ ಯಾವುದೂ ಗಣನೆಗೆ ಬರುವುದಿಲ್ಲ. ಸಮಯ, ಆಯಸ್ಸು, ಹಣ, ಉದ್ಯೋಗ, ಕುಟುಂಬದ ಸಂಬಂಧಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಗೌರವ ಡಾಕ್ಟರೇಟ್ ಕೆಲವೊಮ್ಮೆ ಸುಲಭವಾಗಿ ಸಿಗುತ್ತೆ, ಕೆಲವು ಸಲ ಕಠಿಣ ಶ್ರಮದಿಂದ ದೊರಕುತ್ತದೆ. ಇತ್ತೀಚಿನ ದಿನಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಜಾಸ್ತಿಯಾಗುತ್ತಿರುವುದರಿಂದ ಎಡಪಂಥೀಯ, ಬಲಪಂಥೀಯ ಎನ್ನುವ ಚರ್ಚೆಗಳು ನಡೆಯುತ್ತಿವೆ. ಸಂಶೋಧನಾ ವಿದ್ಯಾಭ್ಯಾಸಕ್ಕೆ ವಯಸ್ಸಿನ ಅಂತರವಿಲ್ಲ.

ಕ್ರಮಬದ್ದ ಶಿಕ್ಷಣ ಮುಖ್ಯ ಎಂದು ತಿಳಿಸಿದರು.
ಚಿತ್ರದುರ್ಗದಲ್ಲಿ ಒಲಂಪಿಕ್ಸ್ ಹೆಸರಿನಲ್ಲಿ ಕಚೇರಿ ತೆರೆದು ಕ್ರೀಡೆಯಲ್ಲಿ ರಾಜ್ಯ ರಾಷ್ಟç ಮಟ್ಟಕ್ಕೆ ಹೋಗುವ ಪ್ರತಿಭೆಗಳಿಗೆ ನೆರವು ನೀಡಿ ಪ್ರೋತ್ಸಾಹಿಸಲಾಗುವುದು. ಜಾತ್ಯಾತೀತ ಧರ್ಮಾತೀತವಾದುದು ಕ್ರೀಡೆ ಎಂದರು.

ನ್ಯಾಯವಾದಿ ಕೆ.ಇ.ಮಲ್ಲಿಕಾರ್ಜುನ್ ಮಾತನಾಡಿ ಕಠಿಣ ಪರಿಶ್ರಮ, ವೃತ್ತಿಯನ್ನು ಗೌರವಿಸುವವರು ಪಿ.ಹೆಚ್.ಡಿ.ಪಡೆಯುತ್ತಾರೆ. ಡಾ.ಕುಮಾರಸ್ವಾಮಿ ಕೆ. ಇವರು ವಕೀಲರಾಗಿ ಉತ್ತಮ ಕ್ರೀಡಾಪಟುವಾಗಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಇಷ್ಟೆಲ್ಲಾ ಒತ್ತಡಗಳ ನಡುವೆ ಕುಟುಂಬ ನಿರ್ವಹಣೆ ಮಾಡಿಕೊಂಡು ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿ.ಹೆಚ್.ಡಿ.ಪದವಿ ಪಡೆದಿದ್ದಾರೆಂದರೆ ಸುಲಭದ ಮಾತಲ್ಲ. ಐದು ವರ್ಷಗಳಿಂದ ಇವರು ಸವೆಸಿರುವ ದಾರಿ ಸಾಧನೆ.

ವಿದ್ಯಾಭ್ಯಾಸ ಎನ್ನುವುದು ಕಲಿಕೆ. ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಬಡತನವಿರುತ್ತೆ ಎನ್ನುವುದನ್ನು ನೆನಪಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಕುಮಾರಸ್ವಾಮಿ ಕೆ. ಕೆಲಸ ಮಾತನಾಡಬೇಕೆ ವಿನಃ ವ್ಯಕ್ತಿ ಮಾತನಾಡಬಾರದು. ನನಗೆ ಸಿಕ್ಕಿರುವ ಪಿ.ಹೆಚ್.ಡಿ.ಪದವಿ ಬುದ್ದನಗರದ ಪ್ರತಿಯೊಬ್ಬರಿಗೂ ಸಲ್ಲಬೇಕು. ನನ್ನ ಬಾಲ್ಯದ ದಿನಗಳನ್ನು ಇಲ್ಲಿಯೇ ಕಳೆದಿದ್ದೇನೆ.

1993 ರಲ್ಲಿ ಮಿಲಿಟರಿಗೆ ನೇಮಕಗೊಂಡೆ. ಅಲ್ಲಿಯೂ ಇರಲಿಲ್ಲ. ಸಣ್ಣ ಸಣ್ಣ ವಿಷಯಗಳು ಮುಂದೊಂದು ದಿನ ಫಲ ಕೊಡುತ್ತದೆ ಎನ್ನುವುದಕ್ಕೆ ಪಿ.ಹೆಚ್.ಡಿ.ಪಡೆದಿರುವುದೇ ಸಾಕ್ಷಿ. ಇದಕ್ಕೆ ನನ್ನ ತಂದೆ ತಾಯಿಗಳು, ಬಂಧು ಬಳಗ, ಮಡದಿ, ಸ್ನೇಹಿತರ ಸಹಕಾರವಿದೆ ಎಂದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಗೆಳೆಯರ ಬಳಗ ಬ್ಯಾಡ್ಮಿಂಟನ್ ಕ್ಲಬ್‌ನ ಅಧ್ಯಕ್ಷ ಜೆ.ಮೋಹನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ವೈ.ರವಿಕುಮಾರ್ ಡಾ.ಕುಮಾರಸ್ವಾಮಿರವರ ಸಾಧನೆ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.

ಓ.ಮಂಜುನಾಥ್, ಸಾಗರ್ ವೇದಿಕೆಯಲ್ಲಿದ್ದರು.
ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಮಧು, ಡಾ.ಕುಮಾರಸ್ವಾಮಿರವರ ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ವಿಡಿಯೋ ಕೇಸ್ : ದೇಹದ ಆರೋಗ್ಯ ಮಾತ್ರವಲ್ಲ ಸಮಾಜದ ಆರೋಗ್ಯವನ್ನು ಸುಧಾರಿಸಬೇಕು ಡಾ. ಮಂಜುನಾಥ್

ರಾಮನಗರ: ರಾಜ್ಯದಲ್ಲಷ್ಟೇ ಅಲ್ಲ ದೇಶದಲ್ಲೂ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡುತ್ತಿದೆ. ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ತನಿಖೆಗೆ ಕಾಯುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರುವ ಸಾಹಸ ಮಾಡುತ್ತಿಲ್ಲ.

ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸಿ : ಶಾಸಕ ಟಿ. ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮೇ. 18 : ಜನಪರ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು

ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆ : ಆರ್ಸಿಬಿ ಮ್ಯಾಚ್ ನೋಡುವ ಆಸೆ ಕಿತ್ತುಕೊಂಡನಾ ವರುಣರಾಯ..!

ಇಂದು ಬೆಳಗ್ಗೆಯಿಂದಾನೇ ಮೋಡಕವಿದ ವಾತಾವರಣ ಮನೆ ಮಾಡಿತ್ತು. ಮಧ್ಯಾಹ್ನದ ವೇಳೆಗೆ ಬೆಂಗಳೂರು ನಗರದಾದ್ಯಂತ ಜೋರು ಮಳೆಯಾಗಿದೆ. ವಿಜಯನಗರ, ರಾಜಾಜಿನಗರ, ಕಾರ್ಪೋರೇಷನ್ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಆದರೆ ಈ ಮಳೆಯಿಂದ ಇಂದು ಆರ್ಸಿಬಿ ಮ್ಯಾಚ್

error: Content is protected !!