Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕ್ಷಮಿಸಿ ಬಾಸ್ : ದರ್ಶನ್ ಗೆ ಕ್ಷಮೆ ಕೇಳಿದ ಮಡೆನೂರು ಮನು.. ಆದರೆ..?

---Advertisement---

ಅತ್ಯಾ*ಆರೋಪದಲ್ಲಿ ಜೈಲು ಸೇರಿ, ಈಗ ಜಾಮೀನಿನ ಮೇಲೆ ಹೊರ ಬಂದಿರುವ ಮನು, ಕನ್ನಡ ಚಿತ್ರರಂಗದ ದಿಗ್ಗಜರ ಬಳಿ ಕ್ಷಮೆ ಕೇಳ್ತಾ ಇದ್ದಾರೆ. ಜೈಲು ಸೇರಿದ್ದಾಗ ಆಡಿಯೋ ಒಂದು ವೈರಲ್ ಆಗಿತ್ತು. ಅದರಲ್ಲಿ ಸ್ಯಾಂಡಲ್ ವುಡ್ ನ ದಿಗ್ಗಜರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಶಿವಣ್ಣನ ಸಾವಿನ ಬಗ್ಗೆ ಮಾತನಾಡಿದ್ದರು. ದರ್ಶನ್ ಕ್ರೇಜ್ ಮುಗಿದಂತೆ ಎಂದಿದ್ದರು. ಈಗ ಜೈಲಿಂದ ಹೊರ ಬಂದಿದ್ದಾರೆ. ಈಗಾಗಲೇ ಧ್ರುವ ಸರ್ಜಾ ಅವರ ಬಳಿ ಕ್ಷಮೆ ಕೇಳಿದ್ದಾರೆ. ಶಿವಣ್ಣ ಅವರ ಮನೆ ಬಳಿಯೂ ಹೋಗಿ ನಿಂತಿದ್ದರು. ಇದೀಗ ದರ್ಶನ್ ಅವರ ಬಳಿಯೂ ಕ್ಷಮೆ ಕೇಳಿದ್ದಾರೆ.

ದರ್ಶನ್ ಅವರ ಬಳಿ ಮಡೆನೂರು ಮನು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ದರ್ಶನ್ ಅಭಿಮಾನಿಗಳು ನನಗೆ ಕಾಲ್ ಮತ್ತು ಮೆಸೇಜ್ ಗಳನ್ನ ಮಾಡಿದ್ದರು. ಅವರನ್ನು ಭೇಟಿಯಾದ್ರಾ..? ಕ್ಷಮೆ ಕೇಳಿದ್ರಾ ಅಂತ. ಒಂದು ಸಲ ಭೇಟಿಯಾಗಿ ಅಂತ ಸುಮಾರು ಜನ ಹೇಳಿದ್ರು. ಆದರೆ ದರ್ಶನ್ ಅವರು ಬ್ಯುಸಿಯಾಗಿದ್ದಾರೆ ಅಂತ ಗೊತ್ತಾಯ್ತು. ಡಿ ಬಾಸ್ ನಾನೊಬ್ಬ ಸಣ್ಣ ಕಲಾವಿದ. ಜೊತೆಗಿರುವವರನ್ನು ನಂಬಿ ಆ ಆಡಿಯೋದಿಂದ ಬಲಿಯಾಗಿದ್ದೇನೆ. ದಯವಿಟ್ಟು ನನ್ನ ಕ್ಷಮಿಸಿ ಕ್ಷಮಿಸಿ ಕ್ಷಮಿಸಿ ಎಂದು ವಿಡಿಯೋ ಮೂಲಕ ಬಹಿರಂಗವಾಗಿ ಕೇಳಿದ್ದಾರೆ.

ಇಡೀ ಡಿ ಬಾಸ್ ಅಭಿಮಾನಿಗಳು, ಕರುನಾಡ ಜನತೆಗೆ ನನಗೆ ಒಂದು ಜೀವದಾನ ಕೊಟ್ಟಿದ್ದೀರಿ. ನಮ್ಮ ಉಸಿರು ಇರುವವರೆಗೂ ಇದನ್ನು ಮರೆಯುವುದಿಲ್ಲ. ಈ ಪುಟ್ಟ ಕಲಾವಿದನನ್ನು ಕ್ಷಮಿಸಿ ಎಂದು ವಿಡಿಯೋ ಮಾಡಿದ್ದಾರೆ. ಈಗಾಗಲೇ ಫಿಲ್ಮ್ ಚೇಂಬರ್ ಬಳಿಯೂ ಹೋಗಿ ಕ್ಷಮೆ ಕೇಳಿ ಬಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment