Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೆ.ಎನ್.ರಾಜಣ್ಣ ಹೇಳಿದ್ದ ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಮಗ ರಾಜೇಂದ್ರ ಕೊಟ್ರು ಉತ್ತರ..!

---Advertisement---

 

ತುಮಕೂರು: ಸಹಕಾರಿ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಸೆಪ್ಟೆಂಬರ್ ಕ್ರಾಂತಿ ಎಂಬುದನ್ನ ಹೇಳಿದ್ದರು. ರಾಜ್ಯ ರಾಜಕೀಯದಲ್ಲಿ ಈ ಸೆಪ್ಟೆಂಬರ್ ಕ್ರಾಂತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಎಲ್ಲರಲ್ಲೂ ಕುತೂಹಲವನ್ನು ಹುಟ್ಟು ಹಾಕಿತ್ತು. ಇದೀಗ ಆ ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಕೆ.ಎನ್.ರಾಜಣ್ಣ ಅವರ ಪುತ್ರ ರಾಜೇಂದ್ರ ಅವರು ಮಾತನ್ನಾಡಿದ್ದಾರೆ. ಅದರಲ್ಲೂ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಉಚ್ಛಾಟನೆ ಮಾಡಿದ ಬಳಿಕ ರಾಜಣ್ಣ ಬಿಜೆಪಿ ಸೇರ್ತಾರೆ ಎಂಬ ಮಾತನ್ನ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಅವರು ಹೇಳಿದ್ದಾರೆ.

ಇದೀಗ ರಾಜಣ್ಣ ಅವರ ಪುತ್ರ ರಾಜೇಂದ್ರ ಅವರು, ಸೆಪ್ಟೆಂಬರ್ ಕ್ರಾಂತಿ ಬಾಲಕೃಷ್ಣ ಅವರಿಂದಲೇ ಶುರುವಾಗುತ್ತೆ. ಅವರ ತಂಡವೇ ಬಿಜೆಪಿಗೆ ಹೋಗಬಹುದು. ಸಿಎಂ ಮಾಡ್ತೀವಿ ಅಂದ್ರೆ ಬಿಜೆಪಿಗೆ ಹೋಗಬಹುದು. ಕೆ.ಎನ್.ರಾಜಣ್ಣ ಹೇಳಿದ ಸೆಪ್ಟೆಂಬರ್ ಕ್ರಾಂತಿ ಇದೆ. ಬಾಲಕೃಷ್ಣ ಅವರು ಈ ರೀತಿ ಹೇಳುತ್ತಾ ಇರೋದು ಯಾರನ್ನೋ ಮೆಚ್ಚಿಸುವುದಕ್ಕೋ ಅಥವಾ ಸಂಪುಟದಲ್ಲಿ ಸ್ಥಾನ ಪಡೆಯುವುದಕ್ಕೋ ಇರಬಹುದು. ರಾಜಣ್ಣ ಅವರ ಮೇಲೆ ಯಾರೂ ಆರೋಪ ಮಾಡ್ತಾ ಇದ್ದಾರೆ. ನಾಳೆ ಬೆಳಗ್ಗೆ ಅವರೆಲ್ಲ ಬಿಜೆಪಿಗೆ ಹೋದರೂ ಆಶ್ಚರ್ಯವಿಲ್ಲ‌.

ಇದನ್ನೆಲ್ಲಾ ಬಿಜೆಪಿಯ ಶಾಸಕ ಯತ್ನಾಳ್ ಮಾತನ್ನಾಡಿದ್ದಾರೆ. 60-65 ಜನಾನ ನಾನು ಕರ್ಕೊಂಡು ಬರ್ತೀನಿ. ಆ ರೀತಿಯಾದ ಬೆಳವಣಿಗೆ ನಡೆದರೆ ಅದೇ ಸೆಪ್ಟೆಂಬರ್ ಕ್ರಾಂತಿ ಇರಬಹುದು. ಸೆಪ್ಟೆಂಬರ್ ನಲ್ಲಿ ಅವರಿಗೆಲ್ಲ ಬ್ರೈನ್ ಮ್ಯಾಪಿಂಗ್ ಮಾಡಿಸಿ, ಯಾರು ಯಾರ ಜೊತೆಗೆ ಮಾತುಕತೆ ಮಾಡಿದ್ದಾರೆ, ಚರ್ಚೆ ನಡೆಸಿದ್ದಾರೆ, ಯಾರ ಸಂಪರ್ಕದಲ್ಲಿದ್ದಾರೆ. ಎಲ್ಲವೂ ಬ್ರೈನ್ ಮ್ಯಾಪಿಂಗ್ ಆಗಲಿ. ಸೆಪ್ಟೆಂಬರ್ ಕ್ರಾಂತಿಯದ್ದು ಎಲ್ಲಾ ಹೊರ ಬರಲಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...