Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಮಗ – ಸೊಸೆ ಹಿಂಸೆ, ಮಗಳು ಬರಬೇಡ ಅಂತಾಳೆ : ಕೃಷ್ಣಾ ನದಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧನ ಅಳಲು..!

---Advertisement---

ಕೊಪ್ಪಳ: ತಂದೆ – ತಾಯಿಯಿಲ್ಲದೆ ಇದ್ದರೆ ಮಕ್ಕಳು ದುಡಿದು ತಿನ್ನುವಷ್ಟು ಗಟ್ಟಿಯಾಗಿ, ತನಗೆ ಬೇಕಾದ ರೀತಿಯಲ್ಲಿ ಬದುಕುವಂತೆ ಆಗುವುದಕ್ಕೆ ಸಾಧ್ಯವಿರುತ್ತಾ..? ಮಗುವಾಗಿದ್ದಾಗ ಎಷ್ಟೇ ಕಷ್ಟವಾದರೂ ತಂದೆ ತಾಯಿ,‌ ಮಕ್ಕಳನ್ನ ಸಾಕಿರುತ್ತಾರೆ ಅಲ್ವಾ. ಆದ್ರೆ ವಯಸ್ಸಾದ ಮೇಲೆ ತಂದೆ ತಾಯಿ ಭಾರವಾಗಿ ಬಿಡುತ್ತಾರೆ ಕೆಲವು ಮಕ್ಕಳಿಗೆ. ವಯಸ್ಸಾದರೂ ದುಡಿದು ಬೇಕಾದರೂ ತಿಂದು ಬಿಡುತ್ತಾರೆ. ಹಿಂಸೆ ಕೊಟ್ರೆ ಯಾರ್ ಬದುಕ್ತಾರೆ ಹೇಳಿ. ಮಗ – ಸೊಸೆಯಿಂದ ಹಿಂಸೆ ತಾಳಲಾರದೆ, ಅತ್ತ ಮಗಳ ಮನೆಗೆ ಹೋದರೆ ಬರಬೇಡ ಎಂಬ ಮಾತುಗಳನ್ನು ಕೇಳಿಸಿಕೊಂಡು ನೋವು ಪಟ್ಟ ಆ ಹಿರಿಜೀವ ಆತ್ಮಹತ್ಯೆ ದಾರಿ ಹಿಡಿದಿದೆ.

ಈ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಂಜೂರಿ ಗ್ರಾಮದಲ್ಲಿ ನಡೆದಿದೆ. 77 ವರ್ಷದ ಕೃಷ್ಣಪ್ಪ ಗೋಪಾಲಪ್ಪ ಹತ್ತಿಮರದ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೂಲತಃ ಯಮನಕನಮರಡಿ ಗ್ರಾಮದವರು. ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬ್ರಿಡ್ಜ್ ಮೇಲಿಂದ ಹಾರುವ ಪ್ರಯತ್ನ ಮಾಡಿದ್ದಾರೆ. ಇದನ್ನ ಗಮನಿಸಿದ ಸ್ಥಳೀಯರು ಅವರನ್ನು ಕಾಪಾಡಿದ್ದಾರೆ. ಈಗ ಸಾಯುವುದಕ್ಕೆ ಹೋಗಿದ್ಯಾಕೆ ಎಂದು ಕೇಳಿದಾಗ ಕರುಣಾಜನಕ ಕಥೆಯೊಂದು ತೆರೆದುಕೊಂಡಿದೆ.

ನೀವೂ ನನಗ ಏನು ಕೇಳಬೇಡ್ರಿ, ನಾನು ಹೋಗ್ತೇನ್ರಿ, ಜೀವ ಸಾಕಾಗಿದೆ, ನಂಗ ನಡೆಯಾಕ ಬರಲ್ರಿ, ನಂಗ ಬ್ಯಾಸರ ಆಗಿದೇರಿ, ನೀವೂ ಹೋಗ್ರಿ, ನನ್ನ ಇಲ್ಲಿಯೇ ಬಿಡ್ರಿ, ಮಗ ಸೊಸೆ ಹಿಂಸೆ ನೀಡ್ತಾರಾ, ಮಗಳು ಮನೆಗೆ ಬರಬೇಡ ಅಂದಾಳ, ನನಗೆ ಬೇರೆ ಯಾರು ಗತಿ ಎಂದು ಆ ಹಿರಿ ಜೀವ ಕಣ್ಣೀರು ಹಾಕಿದೆ. ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಕ್ಕಳಿಗೆ ಬುದ್ದಿ ಹೇಳುತ್ತಾರಾ ಅಥವಾ ವೃದ್ಧಾಶ್ರಮಕ್ಕೆ ಸೇರಿಸ್ತಾರಾ ನೋಡಬೇಕಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment