Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸೋಮಣ್ಣ ಸಿಎಂ ಆಗ್ತೀನಿ ಎಂಬ ಭ್ರಮೆಯಲ್ಲಿದ್ದರು : ರೇಣುಕಾಚಾರ್ಯ

---Advertisement---

ದಾವಣಗೆರೆ: ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಯಾರಾದರೂ ಟೀಕಿಸಿದರೆ ಅದನ್ನು ರೇಣುಕಾಚಾರ್ಯ ತಡೆದುಕೊಳ್ಳುವುದಿಲ್ಲ. ಬೇಗನೇ ಪ್ರತಿಕ್ರಿಯೆ ನೀಡಿ ಬಿಡುತ್ತಾರೆ. ಅದರಲ್ಲೂ ಶಾಸಕ ಯತ್ನಾಳ್ ಹಾಗೂ ಸೋಮಣ್ಣ ಅವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಯಡಿಯೂರಪ್ಪ ಅವರ ವಿರುದ್ಧ ಹಾಗೂ ವಿಜಯೇಂದ್ರ ಅವರ ವಿರುದ್ಧ ಮಾತನಾಡಿದರೆ ಇನ್ಮುಂದೆ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

 

ಬಿ ಎಸ್ ಯಡಿಯೂರಪ್ಪ ವಿರುದ್ಧ ಬೇರೆ ಪಕ್ಷದಿಂದ ಕರೆತಂದ ಯತ್ನಾಳ್ ಹಾಗೂ ಸೋಮಣ್ಣ ಇವರಿಬ್ಬರೇ ಮಾತನಾಡುತ್ತಿರುವುದು. ಬಿಎಸ್ವೈ ವಿರುದ್ಧ ಮಾತನಾಡುವುದಕ್ಕೆ ಯಾವ ನೈತಿಕತೆ ಇದೆ. ಯತ್ನಾಳ್ ಹಾಗೂ ಸೋಮಣ್ಣ ಎಲ್ಲಿಯವರೆಗೂ ಬಿಎಸ್ವೈ ಹಾಗೂ ವಿಜಯೇಂದ್ರ ಅವರ ವಿರುದ್ಧ ಮಾತನಾಡುತ್ತಾರೋ ಅಲ್ಲಿಯವರೆಗೂ ನಾವೂ ಮಾತನಾಡುತ್ತೇವೆ ಎಂದಿದ್ದಾರೆ.

 

ನಮಗೂ ತಾಳ್ಮೆ ಇದೆ. ಇದನ್ನೆಲ್ಲ ಸಹಿಸುವುದಕ್ಕೆ ಆಗುವುದಿಲ್ಲ. ಪ್ರತಿದಿನ ಇಬ್ಬರು ಮಾತನಾಡಿದರೆ ಯಡಿಯೂರಪ್ಪ ಅವರ ತೂಕ ಕಡಿಮೆ ಆಗುತ್ತದಾ..? ಯಡಿಯೂರಪ್ಪ ಅವರು ನಡೆದ ಹಾದಿಯ ಮಣ್ಣು ತೆಗೆದುಕೊಂಡು ಚಾಮರಾಜನಗರ ಹಾಗೂ ಮೈಸೂರು ಜನ ಹಣೆಗೆ ಇಟ್ಟುಕೊಳ್ಳುತ್ತಾರೆ. ಅಷ್ಟು ಹೋರಾಟದಿಂದ ಮೇಲೆ ಬಂದು ಜನರಿಗಾಗಿ ಜೀವ ಮುಡಿಪಿಟ್ಟ ನಾಯಕ ಅವರು. ಯತ್ನಾಳ್ ಹಾಗೂ ಸೋಮಣ್ಣ ಅವರ ಪಾಪದ ಕೊಡ ತುಂಬಿದೆ. ಅದಕ್ಕೆ ಆದಷ್ಟು ಬೇಗ ಅಂತ್ಯ ಕಾಣುತ್ತದೆ. ಅದಕ್ಕೆಂದೆ ಯಡಿಯೂರಪ್ಪ ಅವರನ್ನು ಜನರ ಮುಂದೆ ವಿಲನ್ ಮಾಡಲು ಹೊರಟಿದ್ದಾರೆ. ಟೀಕೆ ಮಾಡುವುದನ್ನು ಕೈಬಿಡಬೇಕು. ನಾವೆಲ್ಲರೂ ವಿಜಯೇಂದ್ರ ಅವರಿಗೆ ಸಾಥ್ ನೀಡುತ್ತೇವೆ. ಸಮಸ್ಯೆಗಳು ಇದ್ದರೆ ಹೈಕಮಾಂಡ್ ಬಳಿ ಹೇಳಿಕೊಳ್ಳಲಿ. ಇನ್ನು ಮುಂದೆಯಾದರೂ ತಿದ್ದಿಕೊಳ್ಳಲಿ ಇಲ್ಲವಾದರೆ ನಾವೂ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment