ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಚಿತ್ರದುರ್ಗ: ಈ ರೀತಿ ಕಲುಷಿತ ಮನಸ್ಥಿತಿ ಇದ್ದವರಿಂದ ಮಾತ್ರ ಈ ರೀತಿಯ ಶಬ್ಧ ಬರುವುದಕ್ಕೆ ಸಾಧ್ಯ. ಹಾಗಾದ್ರೆ ಅವರ ಮಠ ಜಾತಿ ಮಠ ಅಲ್ವಾ..? ಇವತ್ತು ಪಂಚಮಸಾಲಿ ಪೀಠಗಳು ಉಗಮ ಆಗುವುದಕ್ಕೆ ಕಾರಣವೇನು ಏಮಬುದನ್ನ ಆತ್ಮವಲೋಕನ ಮಾಡಬೇಕು. ಈ ರೀತಿ ಒಂದು ಪೀಠದ ಜಗದ್ಗುರುಗಳಾದವರು, ಜಾತಿ ಮಠಗಳಿಂದ ಸಮಾಜ ಕಲುಷಿತವಾಗಿದೆ ಎಂದು ಹೇಳುವುದಕ್ಕೆ ನೈತಿಕ ಹಕ್ಕಿಲ್ಲ ಅವರಿಗೆ ಎಂದು ರಂಭಾಪುರಿ ಶ್ರೀಗಳಿಗೆ ತಿರುಗೇಟು ನೀಡಿದ್ದಾರೆ.
ಇಂದು ರಾಜ್ಯದಲ್ಲಿರುವ ಪ್ರತಿಯೊಂದು ಮಠಗಳು ಜಾತಿ ಪೀಠಗಳಾಗಿ ಉಳಿದಿಲ್ಲ ಅವು. ಜಾತ್ಯಾತೀತ ತತ್ವಗಳನ್ನ ಅಳವಡಿಸಿಕೊಂಡಿದ್ದಾವೆ. ಬಸವಣ್ಣನವರ ಕಾಯಕ, ದಾಸೋಹ, ಶಿವಯೋಗ ತತ್ವವನ್ನು ಅಳವಡಿಸಿಕೊಂಡು ಎಲ್ಲಾ ಜಾತಿಯ ಮಕ್ಕಳಿಗೆ ಶಿಕ್ಷಣ, ಅರಿವನ್ನು ಕೊಡ್ತಾ ಇದ್ದಾರೆ. ಇವತ್ತು ಜಾತಿ ಪೀಠಗಳು ಆಗುವುದಕ್ಕೆ ಕಾತಣವೇನು. ನಮ್ಮ ಪಂಚಮಸಾಲಿ ಪೀಠ ಆಗುವುದಕ್ಕೆ ಕಾರಣವೇನು. 2003ನೇ ಇಸವಿಯಲ್ಲಿ ನಾವೂ ಬೇಡರ ಜಂಗಮ, ಎಸ್ಸಿಗಳು ಅಂತ ಹೇಳಿ ವಾಜಪೇಯಿ ಹಾಗೂ ಅಡ್ವಾಣಿ ಅವರ ಹತ್ತಿರ ಹೋಗಿ ಪತ್ರವನ್ನು ಕೊಟ್ಟು ನಾವೂ ಲಿಂಗಾಯತರಲ್ಲ, ದಲಿತರು, ಬೇಡರ ಜಂಗಮದವರು ಅಂತ ಪ್ರಮಾಣ ಪತ್ರ ಕೇಳಿದ್ದರು ಪಂಚಪೀಠದವರು.
ಅವರು ಇಡೀ ವೀರಶೈವ ಲಿಂಗಾಯತರಿಗೆ ಮೀಸಲಾತಿ ಕೇಳಲಿಲ್ಲ ಅವರು, ಕೇಳಿದ್ದು ನಮ್ಮ ಜನಾಂಗಕ್ಕೆ ಅಂತ. ಇವತ್ತು ನಮ್ಮ ಜೊತೆಗೆ ರಾಜ್ಯದ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷರಾದ ಸೋಮನಗೌಡ ಪಾಟೀಲ್ ಇದಾರೆ. ಅವರು ಕೂಡ ನಮ್ಮ ಪಂಚಮಸಾಲಿ ಪೀಠದ ಸ್ಥಾಪನೆಗೆ ಮೂಲ ಕಾರ್ಯಕರ್ತರು. ಇಡೀ ರಾಜ್ಯದಲ್ಲಿ ವೀರಶೈವ ಲಿಂಗಾಯತ ಒಳಪಂಗಡಗಳಲ್ಲಿ 80 ಪ್ರತಿಶತ ಹೆಚ್ಚಿರುವ ಸಮುದಾಯದ ಪೀಠಗಳು ಅಂದ್ರೆ ಅದು ಪಂಚಮಸಾಲಿ ಪೀಠಗಳು ಎಂದಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್