Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅದ್ದೂರಿಯಾಗಿ ನೆರವೇರಿತು ‘ಸೀತಾರಾಮ’ ನಟಿ ವೈಷ್ಣವಿ ಎಂಗೇಜ್ಮೆಂಟ್ ; ಹುಡುಗ ಯಾರು..?

---Advertisement---

ಸಾಕಷ್ಟು ವೀಕ್ಷಕರು ಕಾಯುತ್ತಾ ಇದ್ದ ದಿನ ಬಂದೇ ಬಿಟ್ಟಿದೆ. ವೈಷ್ಣವಿ ಗೌಡ ಮದುವೆ ಆಗ್ತಾ ಇದಾರೆ. ಅಗ್ನಿಸಾಕ್ಷಿ ಧಾರಾವಾಹಿಯಿಂದ ಸನ್ನಿದಿಯಾಗಿ ಎಲ್ಲರ ಮನಸ್ಸು ಗೆದ್ದ ನಟಿ, ದೇವಿಯಾಗಿ ಮತ್ತಷ್ಟು ಖ್ಯಾತಿ ಪಡೆದಿದ್ದರು. ಬಿಗ್ ಬಾಸ್ ಗೆ ಬಂದ ಮೇಲೆ ಸಾಕ್ಷಾತ್ ಅನ್ನಪೂರ್ಣೇಶ್ವರಿಯಂತೆಯೇ ಫೀಲ್ ಆದರು. ಪ್ರಸ್ತುತ ಸೀತಾರಾಮ ಧಾರಾವಾಹಿಯಲ್ಲಿ ಸೀತೆಯಾಗಿ ನಟಿಸುತ್ತಿದ್ದಾರೆ. ವೈಷ್ಣವಿಗೆ ಮದುವೆ ಬಗ್ಗೆ ದೊಡ್ಡ ಕನಸಿತ್ತು. ಅದನ್ನ ಅವರೇ ಹಲವು ಬಾರಿ ಹೇಳಿಕೊಂಡಿದ್ದಾರೆ. ಇದೀಗ ಆ ಕನಸು ನನಸಾಗುವ ದಿನ ಬಂದಿದೆ. ಅದ್ದೂರಿಯಾಗಿ ಎಂಗೇಜ್ಮೆಂಟ್ ಕೂಡ ಆಗಿದೆ. ಹಾಗಾದ್ರೆ ಆ ಹುಡುಗ ಯಾರು..? ಏನ್ ಮಾಡ್ತಾ ಇದಾರೆ ಅನ್ನೋದನ್ನ ನೋಡೋಣಾ ಬನ್ನಿ.

ವೈಷ್ಣವಿ ಗೌಡ ಎಂಗೇಜ್ಮೆಂಟ್ ಮಾಡಿಕೊಂಡ ಹುಡಿಗನ ಹೆಸರು ಅನುಕೂಲ್ ಮಿಶ್ರಾ ಅಂತ. ಅವರು ಏರ್ ಫೋರ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿರುವ ವೈಷ್ಣವಿ ಗೌಡ, ‘ಅವಳ ಪ್ರಪಂಚವೂ ಸ್ಕ್ರಿಪ್ಟ್ ಮತ್ತು ವೇದಿಕೆಗಳಾಗಿವೆ. ಅವನ ಪ್ರಪಂಚ ಆಕಾಶ ಮತ್ತು ಸೇವೆಯಾಗಿದೆ. ಆದರೆ ವಿಧಿ ಇಬ್ಬರ ನಡುವೆ ಪರಿಪೂರ್ಣ ಪ್ರೇಮವನ್ನ ಬರೆದಿತ್ತು ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

ನಿಶ್ಚಿತಾರ್ಥದಲ್ಲಿ ವೈಷ್ಣವಿ ಅವರ ಆತ್ಮೀಯ ಗೆಳತಿ ಅಮೂಲ್ಯ ದಂಪತಿ ಕೂಡ ಭಾಗಿಯಾಗಿದ್ದರು. ನವ ಜೋಡಿಗೆ ಶುಭ ಹಾರೈಸಿದರು. ಉಳಿದಂತೆ ಆಪ್ತ ಸ್ನೇಹಿತರು, ಬಂಧು ಬಳಗದವರು ಭಾಗುಯಾಗಿದ್ದರು. ಎಂಗೇಜ್ಮೆಂಟ್ ಅದ್ದೂರಿಯಾಗಿಯೇ ನಡೆದಿದ್ದು, ಮದುವೆಯನ್ನು ಅದ್ದೂರಿಯಾಗಿ ಮಾಡುವ ಕನಸು ಕಂಡಿದ್ದಾರೆ ವೈಷ್ಣವಿ ಅವರ ತಂದೆ. ಮಗನ ಮದುವೆ ಮಾಡಿದಂತೆ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಲು ಬಯಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...