Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಜೈನ ಮುನಿಗಳ ಹತ್ಯೆ ಖಂಡಿಸಿ ಚಿತ್ರದುರ್ಗದಲ್ಲಿ ಜೈನ ಸಮುದಾಯದಿಂದ ಮೌನ ಪ್ರತಿಭಟನೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, (ಜು.12) : ಜೈನ ಮುನಿಗಳ ಹತ್ಯೆಯನ್ನು ಖಂಡಿಸಿ ಜೈನ ಸಮುದಾಯದ ಒಕ್ಕೂಟದ ವತಿಯಿಂದ ಮೌನ ಪ್ರತಿಭಟನೆಯನ್ನು ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಯಿತು.

ನಗರದ ಲಕ್ಷ್ಮೀ ಬಜಾರದ ಜೈನ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೌನ ಮೆರವಣಿಗೆಯ ಮೂಲಕ ಬಂದು ಅಪರ ಜಿಲ್ಲಾಧಿಕಾರಿ ಕುಮಾರ ಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.

ಬೆಳಗಾವಿ ಜಿಲ್ಲೆ, ಚಿಕ್ಕೋಡಿ ತಾಲ್ಲೂಕು, ಹಿರೇಕೋಡಿ ಗ್ರಾಮದಲ್ಲಿ ನಂದಿಪರ್ವತ ಎಂಬ ಆಶ್ರಮದಲ್ಲಿ ಜೈನ ಮಂದಿರವಿದ್ದು, ಅಲ್ಲಿ ಆಚಾರ್ಯ ಶ್ರೀ: 108 ಕಾಮ ಕುಮಾರನಂದಿ ಮುನಿ ಮಹಾರಾಜರನ್ನು ಅಪಹರಿಸಿ, ಬರ್ಬರವಾಗಿ ಹತ್ಯೆ ಮಾಡಿ, ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಮುನಿಶ್ರೀಗಳ ಶರೀರವನ್ನು ವಿಕೃತಗೊಳಿಸಿ ಕೊಲೆ ಮಾಡಿರುವುದು ಅತ್ಯಂತ ಖಂಡನೀಯ. ಇಂತಹ ಕೃತ್ಯವನ್ನು ಸಕಲ ಜೈನ ಸಮಾಜ ಮತ್ತು ಜೈನ ಮಠಗಳು ಎಲ್ಲಾ ಮಠಾಧೀಶರು ಖಂಡನೆ ವ್ಯಕ್ತಪಡಿಸುತ್ತೇವೆ.

ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ಯಶಸ್ವಿ ಕಾರ್ಯಾಚರಣೆಯಿಂದ ಹಂತಕರನ್ನು ಬಂಧಿಸಿ, ಕಾನೂನಾತ್ಮಕವಾದಂತಹ ಕಾರ್ಯಚರಣೆಯನ್ನು ಮುಂದುವರೆಸಿದ್ದಾರೆ. ಆದರೆ, ಸಂವಿಧಾನ ಹಂತಕರಿಗೆ ಅತ್ಯಂತ ಕಠಿಣ ಮತ್ತು ಅತ್ಯಧಿಕ ಶಿಕ್ಷೆಯನ್ನು ವಿಧಿಸಬೇಕು. ಯಾವುದೇ ರೀತಿಯಾದಂತಹ ಕರುಣೆಯನ್ನು ತೋರಬಾರದು ಪಡಿಸುತ್ತೇವೆ. ಎಂದು ಚಿತ್ರದುರ್ಗ ತಾಲ್ಲೂಕು ಜೈನ ಸಮುದಾಯ ಅಸಂಘಟಿತ ವಲಯದಿಂದ ಆಗ್ರಹಿಸಿದೆ.

“ಮುನಿ ಹತ್ಯಾ ದೋಷ ಮಹಾ ಪಾಪವಾಗುರುತ್ತದೆ” ಯಾವ ರೀತಿಯಾಗಿ ದಯವೇ ಮೂಲ ಧರ್ಮವೆಂದು ಲೋಕದ ಎಲ್ಲಾ ಜೀವಿಗಳಲ್ಲಿಯೂ ಸಮತಾ ಭಾವನೆಯನ್ನು ಹೊಂದಿದ ಭಗವಾನ್‌ ಶ್ರೀ ಮಹಾವೀರಸ್ವಾಮಿಯ ಮೂಲ ಸಂದೇಶವಾದ ಬದುಕು-ಬದುಕಲು ಬಿಡು, ಮತ್ತು ಜೀವಿಗೆ ಜೀವಿಯೇ ನೆರವು ಎಂಬ ತತ್ವ ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿರುವವರು ಜೈನ ಧರ್ಮಮದ ಅನುಯಾಯಿಗಳು, ಅದರಲ್ಲಿಯೂ ಧರ್ಮಪ್ರವರ್ತಕರಾಗಿ ಆಧ್ಯಾತ್ಮ, ಪ್ರವರ್ತಕರಾಗಿ, ಶಾಂತಿ ಪ್ರಿಯರಾಗಿ ಅಹಿಂಸೆಯನ್ನು ಪ್ರತಿಪಾದನೆ ಮಾಡುವಂತಹ ಜೈನ ಮುನಿಗಳಿಗೆ ಆಗಿರುವ ಈ ಅಹಿತಕರ ಘಟನೆಗೆ ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳು ಕಾನೂನಾತ್ಮಕವಾಗಿ ಅತ್ಯಂತ ಕಠಿಣವಾದ ಸೂಕ್ತ ದಂಡನೆಯನ್ನು ನೀಡುವುದರೊಂದಿಗೆ ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದಂತಹ ಜೈನ ಧರ್ಮ ಸಾಧು ಸಂತರಿಗೆ ಇಂತಹ ಈ ಭೂಮಿಯ ಮೇಲೆ ಈ ಮನುಕುಲ ಬಂದಾಗಿನಿಂದ ಎಂದೂ ಕೇಳರಿಯದ ಘನಘೋರ ಕಠೋರ ಮೃಗಗಳಿಗಿಂತಲೂ ಕೀಳಾಗಿ ವರ್ತಿಸಿದ ಆ ಕೊಲೆ ಕಟುಕರು ತಮ್ಮ ಕ್ರೌರ್ಯ ಮೆರೆದಿದ್ದಾರೆ. ಮುಂದಿನ ಭವಿಷ್ಯದಲ್ಲಿ ಇಂತಹ ಯೋಜನೆ ಕನಸಿನಲ್ಲಿಯೂ ಬರಬಾರದು ಅಂತಹ ಕಠೋರ ಶಿಕ್ಷೆಗೆ ಅವರನ್ನು ಗುರಿಪಡಿಸಬೇಕು ಮತ್ತು ಎಂದೂ ಇಂತಹ ಹಿಂಸಾತ್ಮಕ ಘಟನೆಗಳು ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರೊಂದಿಗೆ ಸಕಲ ಜೈನ ಸಮಾಜಕ್ಕೆ ನ್ಯಾಯ ಮತ್ತು ರಕ್ಷಣೆ ಒದಗಿಸಿಕೊಡಿರೆಂದು ಸರ್ಕಾರಕ್ಕೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಜೈನ ಸಮುದಾಯದ ಮುಖಂಡ ರಾದ ಅಜಿತ್ ಜೈನ್, ಪ್ರೇಮಚಂದ್,ಆಶೋಕ್ ಜೈನ್, ರಜಿತ್ ಜೈನ್,ವಿಕ್ರಾಂತ್ ಜೈನ್, ಶ್ರೇಣಿಕ್ ಜೈನ್ ಸೇರಿದಂತೆ ಇತರರು ಭಾಗವಹಿಸಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment