ಬೆಳಗಾವಿ: ರಾಜ್ಯದಲ್ಲಿ ಈಗ ಬಿಜೆಪಿ ಅಧ್ಯಕ್ಷ ವರ್ಸಸ್ ಕಾಂಗ್ರೆಸ್ ಅಧ್ಯಕ್ಷ ಎಂಬಂತೆ ಆಗಿದೆ. ಡಿಕೆ ಶಿವಕುಮಾರ್ ಹಾಗೂ ವಿಜಯೇಂದ್ರ ನಡುವೆ ಬಿಗ್ ಫೈಟ್ ಶುರುವಾಗಿದೆ. ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಹೇಳಿದ ವಿಜಯೇಂದ್ರ ಅವರಿಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ವಿಜಯೇಂದ್ರ ಅವರನ್ನ ಕಲೆಕ್ಷನ್ ಕಿಂಗ್ ಅಂತ ಹೇಳಿ ತಿರುಗೇಟು ನೀಡಿದ್ದಾರೆ.
ವಿಜಯೇಂದ್ರ ಕಲೆಕ್ಷನ್, ಟ್ರಾನ್ಸ್ ಫರ್ ದಂಧೆ ಬಿಚ್ಚಿಡಬೇಕಾ..? ಅವರಪ್ಪನ ಹೆಸರನ್ನು ಕೆಡಿಸಿದ್ದೇ ವಿಜಯೇಂದ್ರ. ತಪ್ಪಿಸಿಕೊಂಡು ಹೋಗಿ ಎಲ್ಲೋ ಇರುವುದಲ್ಲ. ಬಂದು ಇಲ್ಲಿ ಅಸೆಂಬ್ಲಿಯಲ್ಲಿ ಮಾತನಾಡಲಿ. ಯಾವ ಖಜಾನೆ, ಯಾವ ಕಲೆಕ್ಷನ್, ಅವರ ಕಲೆಕ್ಷನ್, ಅವರ ಅಕೌಂಟ್ ಗಳು, ಅವರ ಟ್ರಾನ್ಸ್ ಫರ್ ಗಳನ್ನೆಲ್ಲಾ ಬಿಚ್ಚಿಡಬೇಕಾ..? ಬಂದು ಅಸೆಂಬ್ಲಿಯಲ್ಲಿ ಮಾತನಾಡುವುದಕ್ಕೆ ಹೇಳಿ. ನಮಗೂ ಗೊತ್ತಿದೆ ಏನೇನು ಮಾತನಾಡಬೇಕು ಅಂತ. ಆಗ ಮಾತನಾಡುತ್ತೇವೆ. ಮಾತನಾಡಬೇಕಾದರೆ ಬಹಳ ಇತಿ ಮಿತಿಯಿಂದ, ಅದರಲ್ಲೂ ಪಕ್ಷದ ಅಧ್ಯಕ್ಷನಾಗಿ ಮಾತನಾಡಬೇಕು. ಕಲೆಕ್ಷನ್ ಗೆ ಏನಾದ್ರೂ ಇವತ್ತು ಕಿಂಗ್ ಅಂದ್ರೆ ಅದು ವಿಜಯೇಂದ್ರ. ಅವರಪ್ಪನ ಹೆಸರು ಇವತ್ತು ಇಳಿಸಬೇಕು ಅಂದ್ರೆ ಅದು ವಿಜಯೇಂದ್ರ. ಅದನ್ನ ಮರೆಯಬಾರದು ಎಂದು ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರದ ಮುಖೇನ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ಹಣ ಸಂದಾಯ ಮಾಡುವಂತದ್ದು. ನಾವೂ ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅವರ ಎಟಿಎಂ ಆಗಿ ಪರಿವರ್ತನೆ ಆಗುತ್ತೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನ್ನಾಡಿದ್ದರು. ಇದೀಗ ಆ ಮಾತಿಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






