Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಕ್ಸಿಟ್ ಪೋಲ್ ನಲ್ಲಿ ಕಾಂಗ್ರೆಸ್ ಗೆ ಶಾಕ್ : ಎಷ್ಟು ಸೀಟು ಬರಲಿದೆ ರಾಜ್ಯದಲ್ಲಿ..?

---Advertisement---

ಲೋಕಸಭಾ ಚುನಾವಣೆ ಮುಗಿದಿದ್ದು, ಫಲಿತಾಂಶಕ್ಕಾಗಿ ದೇಶದ ಜನತೆ ಕಾಯುತ್ತಿದ್ದಾರೆ. ಅದಕ್ಕೂ ಮುನ್ನ ಎಕ್ಸಿಟ್ ಪೋಲ್ ಸಾಕಷ್ಟು ಕುತೂಹಲವನ್ನು ಉಂಟು ಮಾಡುತ್ತದೆ. ಕೆಲವೊಮ್ಮೆ ಎಕ್ಸಿಟ್ ಪೋಲ್ ನಿಜವಾಗಿದೆ, ಇನ್ನು ಕೆಲವೊಮ್ಮೆ ಸಂಪೂರ್ಣ ಸತ್ಯವಾಗಿಲ್ಲ. ಈ ಬಾರಿಯೂ ಎಕ್ಸಿಟ್ ಪೋಲ್ ವರದಿ ರಿಲೀಸ್ ಆಗಿದ್ದು, ಕಾಂಗ್ರೆಸ್ ಗೆ ಶಾಕ್ ನೀಡಿದೆ.

ಇಂಡಿಯಾ ಟುಡೇ ರಿಲೀಸ್ ಮಾಡಿರುವ ವರದಿ ಪ್ರಕಾರ: ಬಿಜೆಪಿ – 20-22 ಸೀಟು ತನ್ನದಾಗಿಸಿಕೊಳ್ಳಲಿದೆ. ಕಾಂಗ್ರೆಸ್-3-5 ಸೀಟು ಗೆಲ್ಲಲಿದೆ. ಜೆಡಿಎಸ್ – 2-3 ಸೀಟು ಗೆಲ್ಲಲಿದೆ ಎನ್ನಲಾಗಿದೆ.

ಇನ್ನು ಸಿ ವೋಟರ್ ಸಮೀಕ್ಷೆಯ ಪ್ರಕಾರ, ಬಿಜೆಪಿ – 21-22 ಸೀಟು, ಕಾಂಗ್ರೆಸ್ – 3-5, ಜೆಡಿಎಸ್ -1-3 ಸೀಟು ಗೆಲ್ಲಲಿದೆಯಂತೆ.

ಇಂಡಿಯಾ ಟಿವಿ ಸಮೀಕ್ಷೆಯ ಪ್ರಕಾರ ಬಿಜೆಪಿ : 18-22 ಸೀಟು, ಕಾಂಗ್ರೆಸ್ : 4-8 ಸೀಟು, ಜೆಡಿಎಸ್ : 2 ಸೀಟು ಗೆಲ್ಲಲಿದೆ ಎನ್ನಲಾಗುತ್ತಿದೆ.

ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೇ ಶುರುವಾಗಿದೆ. ಇನ್ನೆರಡು ದಿನ ಕಳೆದರೆ ಫಲಿತಾಂಶದ ಟೆನ್ಶನ್ ಶುರುವಾಗಲಿದೆ. ಜೂನ್ 4 ಅಂದ್ರೆ ಮಂಗಳವಾರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬರಲಿದೆ. ನರೇಂದ್ರ ಮೋದಿಯವರೇ ಹ್ಯಾಟ್ರಿಕ್ ಹೊಡೆಯುತ್ತಾರಾ..? ಮತದಾರ ಪ್ರಭುಗಳು ಮತ್ತೆ ಮೋದಿಗೆ ಜೈ ಎಂದಿದ್ದಾರಾ..? ಎಂಬ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಗಲಿದೆ. ಇದರ ಜೊತೆಗೆ ಬಿಜೆಪಿ ಸೋಲಿಸಲು ಕಾಂಗ್ರೆಸ್ ಜೊತೆಗೆ ಮಿತ್ರ ಪಕ್ಷಗಳು ಒಂದಾಗಿದ್ದವು. ಆ ಫಲಿತಾಂಶದ ವಿಚಾರವೂ ಹೊರ ಬೀಳಲಿದೆ. ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಹದಿನೈದು ಸೀಟುಗಳನ್ನಾದರೂ ಪಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಈಗ ಎಕ್ಸಿಟ್ ಪೋಲ್ ವರದಿ ಬೇರೆಯದ್ದನ್ನೇ ಹೇಳುತ್ತಿದೆ. ಜೂನ್ 4ಕ್ಕೆ ಇದಕ್ಕೆಲ್ಲ ಉತ್ತರ ಸಿಗಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment