ಬೆಂಗಳೂರು: ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯಲು, ಸರ್ಜರಿ ಮಾಡಿಸಿಕೊಳ್ಳಲು ಶಿವಣ್ಣ ಅಮೆರಿಕಾಗೆ ಹೋಗಿದ್ದದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗೇ ಸರ್ಜರಿಯೂ ಯಶಸ್ವಿಯಾಗಿದೆ. ಒಂದು ತಿಂಗಳ ಕಾಲ ಅಮೆರಿಕಾದಲ್ಲಿಯೇ ಇದ್ದ ಶಿವಣ್ಣ, ಇದೀಗ ಬೆಂಗಳೂರಿಗೆ ಬಂದಿಳಿದಿದ್ದಾರೆ. ಚಿಕಿತ್ಸೆಗೆಂದು ಹೋಗುವಾಗ ಸ್ವಲ್ಪ ಗಾಬರಿಯೂ ಆಗಿದ್ದರು. ದುಃಖಿತರು ಆಗಿದ್ದರು. ಆದರೆ ಈಗ ಮುಖದಲ್ಲಿ ಮೊದಲಿನ ಕಳೆಯೇ ಎದ್ದು ಕಾಣಿಸುತ್ತಿದೆ. ನಗು ಇದೆ. ಅಭಿಮಾನಿಗಳು ಶಿವಣ್ಣನನ್ನ ನೋಡಿ ಖುಷಿಯಾಗಿದ್ದಾರೆ.
ಬೆಂಗಳೂರಿಗೆ ಬಂದ ಶಿವಣ್ಣ ಮಾಧ್ಯಮದವರೊಂದಿಗೆ ಮಾತನಾಡಿ, ಇಲ್ಲಿಂದ ಹೋಗುವಾಗ ಸ್ವಲ್ಪ ಎಮೋಷನಲ್ ಆಗಿದ್ದೆ. ಆಪರೇಷನ್ ಮದರೆ ಸುಲಭವಲ್ಲ. ಎಲ್ಲರ ಸಪೋರ್ಟ್ ಇದ್ದರು ಅಮೆರಿಕಾಗೆ ಹೋಗುವಾಗ ಸ್ವಲ್ಪ ಭಯವೂ ಇತ್ತು. ವೈದ್ಯರ ಮಾತು ಕೇಳಿ ಧೈರ್ಯ ಬಂತು. ಸಂಬಂಧಿಕರು, ಗೆಳೆಯರು, ವರುಣ್, ಡಿಕೆಡಿ ಬ್ಲಾಕ್ ಇದೆಯಲ್ಲ ಅನುಶ್ರೀ, ಜನ್ಯ, ರಮೇಶ್ ರೆಡ್ಡಿ, ಶ್ರೀಕಾಂತ್, ನಾಗಿ ಸೇರಿ ಎಲ್ಲರೂ ಹಿಂದೆ ನಿಂತು ಧೈರ್ಯ ಹೇಳಿದರು. ಇದರಿಂದ ಇನ್ನಷ್ಟು ಧೈರ್ಯ ಬಂತು.

ಆಪರೇಷನ್ ಆದ ಮೇಲೆ ವರದಿ ಬಂತು ಅದರಲ್ಲಿ ಕ್ಯಾನ್ಸರ್ ಮುಕ್ತ ಎಂದು ಬಂತು. ಆ ವರದಿ ನೋಡಿ ಖುಷಿ ಆಯ್ತು. ಆರು ಸರ್ಜರಿಗಳನ್ನ ಒಟ್ಟಿಗೆ ಮಾಡಿದ್ದಾರೆ. 190 ಸ್ಟಿಚ್ ಹಾಕಿರುವುದು ನನಗೆ ಗೊತ್ತಿಲ್ಲ. ಆಸ್ಪತ್ರೆಯಲ್ಲಿ ಅದೆಲ್ಲ ಕೇಳುವ ಪರಿಸ್ಥಿತಿಯಲ್ಲಿ ನಾನಿರಲಿಲ್ಲ. ಡಾಕ್ಟರ್ ಕೂಡ ಯಾವುದನ್ನು ನಮ್ಮ ಬಳಿ ಹೇಳಲ್ಲ. ಎರಡನೇ ದಿನಕ್ಕೆ ವಾಕ್ ಶುರು ಮಾಡಿದೆ. ಆ ಎನರ್ಜಿ ಎಲ್ಲಿಂದ ಬಂತೋ ಗೊತ್ತಿಲ್ಲ. ಅಭಿಮಾನಿಗಳಷ್ಟೇ ಅಲ್ಲ ಇಂಡಸ್ಟ್ರಿಯವರು ಧೈರ್ಯ ತುಂಬಿದರು ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














