Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಿವಣ್ಣ, ಉಪ್ಪಿ ಸಿನಿಮಾ ನಿರ್ದೇಶಕ ಮುರುಳಿ ಮೋಹನ್ ನಿಧ‌ನ..!

---Advertisement---

ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಮುರುಳಿ ಮೋಹನ್ ನಿಧನರಾಗಿದ್ದಾರೆ. ಕಳೆದ‌ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮುರುಳಿ ಮೋಹನ್ ಇಹ ಲೋಕ ತ್ಯಜಿಸಿದ್ದಾರೆ. ಜೆಸಿ ರೋಡ್ ಬಳಿಯಿರುವ ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮುರುಳಿ ಮೋಹನ್ ನಿಧನಕ್ಕೆ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ‌.

ನಿರ್ದೇಶಕ ಮುರುಳಿ ಮೋಹನ್ ಉಪೇಂದ್ರ ಅವರಿಗೆ ಆಪ್ತರಾಗಿದ್ದರು. ಹಾಗೆ ಅವರಿಗಾಗಿ ಸಿನಿಮಾ ಕೂಡ ಮಾಡಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಂತ ಮುರುಳಿ ಮೋಹನ್ ಇಂದು ಮಧ್ಯಾಹ್ನ 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಕಿಡ್ನಿಯ ಕಸಿ ಮಾಡಬೇಕಾದ ಅವಶ್ಯಕತೆ ಇತ್ತು. ಆ ಕಿಡ್ನಿ ಕಸಿಗಾಗಿ ಹಣ ಕೂಡ ಬೇಕಾಗಿತ್ತು. 25 ಲಕ್ಷ ಹಣದ ಅವಶ್ಯಕತೆ ಇದ್ದ ಕಾರಣ, ವಿಡಿಯೋ ಮೂಲಕ ಮನವಿಯನ್ನು ಮಾಡಿಕೊಂಡಿದ್ದರು. ಆದರೆ ಹಣ ಇಲ್ಲದ ಕಾರಣ ಕಿಡ್ನಿ ಕೂಡ ಕಸಿಯಾಗಿರಲಿಲ್ಲ. ನೋಡಿದ್ರೆ ಈಗ ಇಹಲೋಕವನ್ನೇ ತ್ಯಜಿಸಿದ್ದಾರೆ.

ಕಳೆದ ಐದಾರು ವರ್ಷಗಳಿಂದ ಕಿಡ್ನಿ ಸಮಸ್ಯೆಗೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಉಪೇಂದ್ರ ಅವರ ಆಪ್ತರಾಗಿದ್ದ ಮುರುಳಿ ಮೋಹನ್ ಅವರು, ಕಾಶೀನಾಥ್ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಉಪೇಂದ್ರ ಅವರಿಗಾಗಿ ನಾಗರಹಾವು, ರವಿಚಂದ್ರನ್ ಅವರಿಗಾಗಿ ಮಲ್ಲಿಕಾರ್ಜುನ, ಶಿವಣ್ಣರಿಗಾಗಿ ಸಂತು ಸಿನಿಮಾವನ್ನ ಮಾಡಿದ್ದರು. ಅವರ ಸಿನಿಮಾಗಳಿಗಾಗಿ ಆಕ್ಷನ್ ಕಟ್ ಹೇಳಿದ್ದರು. ಅಷ್ಟೇ ಅಲ್ಲ ಉಪ್ಪಿಯ ಹಲವು ಸಿನಿಮಾಗಳಿಗೆ ಜೊತೆಯಾಗಿದ್ದರು. ಆದ್ರೆ ಈಗ ಎಲ್ಲರನ್ನು ಬಿಟ್ಟು, ಎಲ್ಲವನ್ನು ಬಿಟ್ಟು ಹೊರಟಿದ್ದಾರೆ. ಚಿತ್ರರಂಗ, ಗಣ್ಯರು, ಆಪ್ತರು ಕಂಬನಿ ಮಿಡಿದಿದ್ದು, ಅವರ ಆತ್ಮಕ್ಕೆ ಶಾಂತಿಕೋರಿದ್ದಾರೆ. ನಾಳೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment